ನವದೆಹಲಿ: ಪ್ರಾಧ್ಯಾಪಕರಿಗೆ ಕೇಂದ್ರ ಸರ್ಕಾರ ಈ ಬಾರಿ ದೀಪಾವಳಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯ ಮತ್ತು ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
Category: Local News
-
ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆ !
ಭಟ್ಕಳ :ಮುತ್ತಹಳ್ಳಿ ಗ್ರಾಮ್ ಪಂಚಾಯತ್‌ನ ಬೆಹಳ್ಳಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.ಯಾರು? ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ!
ಶವದ ಮೇಲೆ ಬಲ ಕೈಯಲ್ಲಿ ಸಾವಿತ್ರಿ ಮಂಜುನಾಥ್ ಅಚ್ಛೇ ಇರುತ್ತದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ದೇಹ ವನ್ನು ಭಟ್ಕಳ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ತನಿಖೆಯ ನಂತರ ಸಾವು ಹೇಗೆ ಸಂಭವಿಸಿದೆ? ಮೃತಪಟ್ಟ ವ್ಯಕ್ತಿ ಯಾರು? ಎಂಬ ಮಾಹಿತಿ ಹೊರ ಬರಲಿದೆ.
-
ಗೋವಿನ ಉದರದಲ್ಲಿದ್ದ 60 KG ಪ್ಲಾಸ್ಟಿಕ್ ಹೊರತೆಗೆದ ವೈದ್ಯ ತಂಡ!
ಭಾರತೀಯ ಗೋ ಪರಿವಾರದ ಅತ್ಯತ್ತಮ ಸೇವೆ ನಡೆದಿದ್ದು
ಈ ಪರಿವಾರದ ಅಮೃತಗರ್ಭ ಯೋಜನೆ ಪ್ರಾರಂಭವಾಗಿದೆ. ಕಾಮದುಘಾ ತಂಡ ಗೋವಾಕ್ಕೆ ತೆರಳಿ ನಡೆಸಿದ ಮೊದಲ ಶಸ್ತ್ರಚಿಕಿತ್ಸೆಯಲ್ಲಿ, ಈ ಗೋವಿನ ಉದರದಿಂದ 60 Kg ಪ್ಲಾಸ್ಟಿಕ್ ಹೊರತೆಗೆದಿದ್ದಾರೆ. ಇದರಲ್ಲಿ ಪ್ರಮುಖರಾದ ಡಾ. ವೈ ವಿ ಕೃಷ್ಣಮೂರ್ತಿಯವರನ್ನು ಕಾಣಬಹುದು. -
ಚಂದಾವರದ ಹನುಮನಿಗೆ ವಿಶೇಷ ಪೂಜೆ, ಹೂವಿನಿಂದ ರಚಿತವಾದ ಗದೆ!
ಚಂದಾವರದ ಹನುಮಂತ ದೇವರು ಸರ್ವಾಲಂಕಾರ ಭೂಷಿತನಂತೆ ರಾರಜಿಸಿದ .ಹೌದು ಶ್ರೀ ಆಂಜನೇಯ ದೇವರಿಗೆ ಮಾಡಲಾದ ವಿಶೇಷ ಅಲಂಕಾರದ ಮೂಲಕ ಹಾಗೂ ಹೂವಿನ ಗದೆಯ ಮೂಲಕ ಇಂದು ವಿಶೇಷ ಪೂಜೆ ಸಂಪನ್ನವಾಯಿತು.
-
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕ್ರತಿಕಾ ಪ್ರಭು ಸಾಧನೆ.
ಕುಮಟಾ:ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಕ್ರತೀಕಾ ಪ್ರಭು ಇವಳು ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳಿಗೆ ಶಾಲೆಯ ಶಿಕ್ಷಕವೃಂದ, ಹಾಗೂ ಆಡಳಿತ ಮಂಡಳಿಯವರು,ಪಾಲಕರು ಶುಭ ಹಾರೈಸಿರುತ್ತಾರೆ .
-
ಈಜಲು ಹೋದ ಅಜ್ಜ ಮೊಮ್ಮಕ್ಕಳು ನೀರುಪಾಲು!
ಬೈಲಹೊಂಗಲ :ತೆರೆದ ಬಾವಿಯಲ್ಲಿ ಇಬ್ಬರು ಮೊಮ್ಮಕ್ಕಳ ಜೊತೆ ಈಜಲು ಹೋಗಿ ಅಜ್ಜ ಮೊಮ್ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಅಜ್ಜ ಶ್ರೀಶೈಲ ಚರಂತಿಮಠ (67) ಮೊಮ್ಮಕ್ಕಳಾದ ಸಮರ್ಥ(12) ಹಾಗೂ ಸೋಮಯ್ಯ (11) ಮೃತ ದುರ್ದೈವಿಗಳು. ಬೈಲಹೊಂಗಲ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದೆ.
-
ಶ್ರೀ ಮಹಾಬಲೇಶ್ವರ ದೇವರ ‘ವಿಜಯೋತ್ಸವ’ ಸಂಪನ್ನ
ಗೋಕರ್ಣ : ರೂಢಿಗತ ಪರಂಪರೆಯಂತೆ ವಿಜಯ ದಶಮಿ ದಿನ ‘ವಿಜಯೋತ್ಸವ’ ಸಂಪನ್ನಗೊಂಡಿತು . ವಿಜಯೋತ್ಸವದ ಪ್ರಯುಕ್ತ ಶ್ರೀ ಮಹಾಬಲೇಶ್ವರ ದೇವರ ಸವಾರಿಯು ಸಾಯಂಕಾಲ ಬಿರುದು-ಬಾವಲಿ, ಪಕ್ಕೆ-ಪರಾಕು , ದೀವಟಿಗೆ ಸಹಿತ ವೈಭವದೊಂದಿಗೆ ಶ್ರೀ ಭದ್ರಕಾಳಿ ದೇವಾಲಯಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿ, ನಂತರ ಅಲ್ಲಿಯೇ ಸಮೀಪದ ಅಶ್ವಥ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿ , ಶ್ರೀ ತಾಮ್ರಗೌರಿ , ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆರತಿ, ಪೂಜೆ ಸ್ವೀಕರಿಸಿ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ‘ಬನ್ನಿ ಪ್ರಸಾದ’ ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು .
-
ಶಿರಸಿಯಲ್ಲಿ ನಾಳೆ ಜ್ಞಾನ-ಗಾನ-ಧ್ಯಾನ ಕಾರ್ಯಕ್ರಮ
ಶಿರಸಿ: ಶ್ರೀ ಮಾರಿಕಾಂಬಾ ದೇವಸ್ಥಾನದವರ ಆಶ್ರಯದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ಉಪಸ್ಥಿತಿಯಲ್ಲಿ ಶರದ್ ಸತ್ಸಂಗ ಜ್ಞಾನ- ಗಾನ-ಧ್ಯಾನ ಕಾರ್ಯಕ್ರಮವು ದಿನಾಂಕ ೨ ಅಕ್ಟೋಬರ್ ೨೦೧೭, ಸೋಮವಾರ ಸಂಜೆ ೫.೩೦ ರಿಂದ ೭.೩೦ರವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಅಕ್ಟೋಬರ್ ೩ ರಿಂದ ೮ರವರೆಗೆ ಶಿರಸಿಯ ಯೋಗಮಂದಿರದಲ್ಲಿ ೩ ಬ್ಯಾಚುಗಳಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೯೧೦೭೬೭೬ ಸಂಪರ್ಕಿಸಿ.
-
ಅತ್ಯಂತ ಮಹತ್ವಪೂರ್ಣ ಈ ದೇವಾಲಯದ ಬಗ್ಗೆ ನೀವು ತಿಳಿಯಲೇ ಬೇಕು.
ದೇವಾಲಯ :ದೇವಿ ಜಗದಂಬಿ ದೇವಾಲಯ
ವಿಳಾಸ :ರಾಜ್ ನಗರ ರಸ್ತೆ, ಸೇವಾಗ್ರಾಮ್, ಖಜುರಾಹೋ, ಮಧ್ಯ ಪ್ರದೇಶ – ೪೭೧೬೦೬
ದೂರವಾಣಿ :NA
ವೆಬ್ಸೈಟ್ :Devi Jagadambi Templeಹೆಚ್ಚಿನ ಮಾಹಿತಿ
ದೇವಿ ಜಗದಾಂಬಿಕಾ ದೇವಸ್ಥಾನ ಅಥವಾ ಮಧ್ಯಪ್ರದೇಶ, ಖಜುರಾಹೋದಲ್ಲಿ ಸುಮಾರು 25 ದೇವಾಲಯಗಳ ಗುಂಪಿನ ಜಗದಂಬಿಕ ದೇವಸ್ಥಾನ. ಖಜುರಾಹೊ ವಿಶ್ವ ಪರಂಪರೆ ತಾಣವಾಗಿದೆ. ಖಜುರಾಹೋ ದೇವಾಲಯಗಳು 10 ಮತ್ತು 12 ನೇ ಶತಮಾನಗಳ ನಡುವೆ ಚಂದೇಲಾ ಸಾಮ್ರಾಜ್ಯದ ಆಡಳಿತಗಾರರಿಂದ ನಿರ್ಮಿಸಲ್ಪಟ್ಟವು. ಅಪ್ಸರಾ, ದೇವಿ ಜಗದಾಂಬಿ ದೇವಸ್ಥಾನ, ಖಜುರಾಹೊ, ಮಧ್ಯ ಪ್ರದೇಶ, ಭಾರತ. ಉತ್ತರಕ್ಕೆ ಗುಂಪಿನಲ್ಲಿರುವ ದೇವಿ ಜಗದಂಬಿಕ ದೇವಸ್ಥಾನ, ಖಜುರಾಹೊದಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಟ್ಟ ದೇವಾಲಯಗಳಲ್ಲಿ ಒಂದಾಗಿದೆ, ಹಲವಾರು ಕಾಮಪ್ರಚೋದಕ ಕೆತ್ತನೆಗಳನ್ನು ಹೊಂದಿದೆ. ಮೂರು ಬ್ಯಾಂಡ್ ಕೆತ್ತನೆಗಳು ದೇವಾಲಯದ ದೇಹವನ್ನು ಸುತ್ತುವರೆಯುತ್ತವೆ. ಗರ್ಭಗುಡಿಯಲ್ಲಿ ದೇವತೆ ದೇವಿಯ ಅಗಾಧವಾದ ಚಿತ್ರಣವಾಗಿದೆ. -
ನೂತನ ಯಕ್ಷಗಾನ ಕೃತಿ ” ಮುಳಿಯಾರು ಕ್ಷೇತ್ರ ಮಹಾತ್ಮೆ ” ಲೋಕಾರ್ಪಣೆ
ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಆಶ್ರಯದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟ ವಿರಚಿತ ನೂತನ ಯಕ್ಷಗಾನ ಕೃತಿ ” ಮುಳಿಯಾರು ಕ್ಷೇತ್ರ ಮಹಾತ್ಮೆ ” ಲೋಕಾರ್ಪಣಾ ಸಮಾರಂಭವು ಜರಗಿತು.
ಕೃತಿಯನ್ನು ಕ್ಷೇತ್ರ ಮೆನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ ಅವರು ಬಿಡುಗಡೆಗೊಳಿಸಿ ಪ್ರಥಮ ಪ್ರತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ಮಣಿಯಾಣಿ ಬೆಳ್ಳಿಗೆ ಇವರಿಗೆ ಹಸ್ತಾಂತರಿಸಿದರು. ಬಳಿಕ ಶುಭಾಶಂಸನೆಗೆಯ್ಯುತ್ತಾ ” ನನ್ನ ಬಹುಕಾಲದ ಮನದಭಿಲಾಷೆಯು ಈ ಮೂಲಕ ಸಾಕ್ಷಾತ್ಕಾರಗೊಂಡಿದೆ. ಯಕ್ಷಯತೂಣೀರ ಸಂಪ್ರತಿಷ್ಠಾನವು ನಿರಂತರವಾಗಿ ಮಾಡುತ್ತಾ ಇರುವ ಯಾವತ್ತೂ ಕಾರ್ಯಗಳಿಗೆ ನನ್ನ ಪೂರ್ಣ ಸಹಕಾರಗಳಿವೆ ” ಎನ್ನುತ್ತಾ ಶುಭ ಹಾರೈಸಿದರು.
ಕೃತಿಯನ್ನು ರಚಿಸಿದ ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ಟ ಅವರನ್ನು ಪ್ರತಿಷ್ಠಾನದ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು.
ಬಳಿಕ ಪ್ರತಿಷ್ಠಾನದ ಸದಸ್ಯರಿಂದ ಪಂಚವಟಿ ಪ್ರಸಂಗದ ತಾಳಮದ್ದಳೆ ಅಭ್ಯಾಸ ಕೂಟ ಜರಗಿತು. ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಮಹಾಭಲೇಶ್ವರ ಭಟ್ ಬಾಗಮಂಡಲ ಉಪಸ್ಥಿತರಿದ್ದರು. ಕೃತಿಯ ಕುರಿತು ಶ್ರೀ ಸುಬ್ರಹ್ಮಣ್ಯ ಅಡ್ಕ ಮಾಹಿತಿಗಳನ್ನಿತ್ತರು. ಈಶ್ವರ ಭಟ್ ಬಳ್ಳಮೂಲೆ ಅಧ್ಯಕ್ಷಸ್ಥಾನವಹಿಸಿದರು. ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿದರು. ಡಾ // ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಅನುಪಮಾ ರಾಘವೇಂದ್ರ ಉಡುಪುಮೂಲೆ ಧನ್ಯವಾದವಿತ್ತರು.ಶಿವಶಂಕರ ಭಟ್ ತಲ್ಪಣಾಜೆ, ಈಶ್ವರ ಮಲ್ಲ , ರಾಘವೇಂದ್ರ ಉಡುಪುಮೂಲೆ, ರಾಜೇಶ್ವರಿ ಈಶ್ವರ ಭಟ್, ಹರಿಕೃಷ್ಣ ಪೆರಡಂಜಿ, ಗೋವಿಂದಬಳ್ಳಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೃಷ್ಣ ಭಟ್ ಅಡ್ಕ ಕಾರ್ಯಕ್ರಮ ಸಂಯೋಜನೆ ಮಾಡಿದರು.