Satwadhara News

Category: Local News

  • ನವರಾತ್ರಿ ಉತ್ಸವದ ಅಂಗವಾಗಿ “ಸುಧನ್ವಾರ್ಜುನ ಕಾಳಗ” ಯಕ್ಷಗಾನ

    ನವರಾತ್ರಿ ಉತ್ಸವದ ಅಂಗವಾಗಿ “ಸುಧನ್ವಾರ್ಜುನ ಕಾಳಗ” ಯಕ್ಷಗಾನ

    ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶಿರಾಲಿ,ಭಟ್ಕಳದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅಂಗವಾಗಿ ದಿನಾಂಕ: 23.09.2017ರ ಶನಿವಾರ, ಸಂಜೆ 5.30ಕ್ಕೆ “ಸುಧನ್ವಾರ್ಜುನ ಕಾಳಗ” ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ. ಆಖ್ಯಾನದಲ್ಲಿ ಕಲಾವಿದರಾಗಿ ಹಿಮ್ಮೇಳದಲ್ಲಿ ಭಾಗವತರು – ಕೆ.ಪಿ. ಹೆಗಡೆ ಗೋಳಗೋಡು, ಮೃದಂಗ – ಅವದಾನಿ ಅಂತ್ರವಳ್ಳಿ ,ಚಂಡೆ – ಗಜಾನನ ಹೆಗಡೆ ಮೂರೂರು ಮುಮ್ಮೇಳ – ನಾಗರಾಜ ಕೆ ಮಧ್ಯಸ್ಥ, ನಾರಾಯಣ ಮಧ್ಯಸ್ಥ , ಮಂಜುನಾಥ ಹೆಗಡೆ, ವಾಸು ಮರಾಠಿ, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ,
    ಅತಿಥಿ ಕಲಾವಿದರಾಗಿ – ಸುಬ್ರಹ್ಮಣ್ಯ ಹೆಗಡೆ ಮೂರೂರು, ಈಶ್ವರ ನಾಯ್ಕ ಮಂಕಿ, ರಾಜೇಶ್ ಶೆಟ್ಟಿ
    ದೇವಿಕಾನು ಮುಂತಾದವರು ಭಾಗವಹಿಸಲಿದ್ದಾರೆ.

    ಕಾರ್ಯಕ್ರಮಕ್ಕೆ ಸರ್ವರೂ ಬಂದು ಕಾರ್ಯಕ್ರಮ ಚಂದಗಾಣಿಸುವಂತೆ ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ ಶಿರಾಲಿ ಇವರು ವಿನಂತಿಸಿದ್ದಾರೆ.

  • ಇಂಡೋನೇಷ್ಯಾದಲ್ಲಿ ಮಾತೃಭಕ್ತಿ ಬಿಂಬಿಸುವ ಫೋಟೋ!

    ಇಂಡೋನೇಷ್ಯಾದಲ್ಲಿ ಮಾತೃಭಕ್ತಿ ಬಿಂಬಿಸುವ ಫೋಟೋ!

    ಈ ಒಂದು ಫೋಟೋ ನೋಡಿದರೆ ಸಾಕು. ಇಂಡೋನಿಷಿಯಾ ದೇಶದ ಮೇಲೆ ಇರುವ ಗೌರವ ಇನ್ನಷ್ಟು ಹೆಚ್ಚುತ್ತದೆ..! ಯಾಕೆ ಗೊತ್ತಾ?

    ಈ ಫೋಟೋದಲ್ಲಿ ನಿಮಗೇನು ಕಾಣಿಸುತ್ತದೆ? ಕುರ್ಚಿಯಲ್ಲಿ ಕುಳಿತ ಮಹಿಳೆಯರು ಕಾಲನ್ನು ತೊಳೆಯುತ್ತಿರುವ ಮಕ್ಕಳು ಕಾಣಿಸುತ್ತಿದಾರೆ ಅಲ್ಲವೇ! ಈ ಫೋಟೋ ಹಿಂದೆ ತಾಯಿಗೆ ನಡೆಯುವ ಸೇವೆ ಅಡಗಿದೆ, ತಾಯಿ ಪ್ರೀತಿಯನ್ನು ದೊಡ್ಡದಾಗಿ ಜಗತ್ತಿಗೆ ಸಾರುವ ಆತ್ಮೀಯತೆ ಅಡಗಿದೆ. ಮಾನವೀಯತೆ ಮೌಲ್ಯಗಳನ್ನು ಹೇಳುತ್ತಾ ನಾಳಿನ ಪೌರರನ್ನು ತಿದ್ದಿತೀಡುವ ಪ್ರಯತ್ನ ಅಡಗಿದೆ. ಈ ಒಂದು ಫೋಟೋದಿಂದ ನನಗೆ ಇಂಡೋನೇಷಿಯಾ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು.

    ಏನೀ ಫೋಟೋ…
    ಇದು ಒಂದು ಸ್ಕೂಲ್ ಫೋಟೋ…ಇಂಡೋನೇಷಿಯಾದಲ್ಲಿನ ಪ್ರತಿ ಶಾಲೆಯಲ್ಲೂ…ವಾರಕ್ಕೆ ಒಮ್ಮೆ ತಮ್ಮ ಶಾಲೆಗಳಲ್ಲಿ ಓದಿಕೊಳ್ಳುತ್ತಿರುವ ಮಕ್ಕಗಳ ತಾಯಂದಿರಿಗೆ ಕಡ್ಡಾಯವಾಗಿ ತಮ್ಮ ಶಾಲೆಗೆ ಕರೆದು..ಅವರನ್ನು ಸನ್ಮಾನಿಸಿ… ಬಳಿಕ ಅವರೆಲ್ಲರನ್ನೂ ಕುರ್ಚಿಯಲ್ಲಿ ಕೂರಿಸಿ..ಅವರ ಮಕ್ಕಳಿಂದ ತಾಯಂದಿರ ಕಾಲು ತೊಳೆಸುತ್ತಾರೆ. ಆ ಕಾರ್ಯಕ್ರಮದ ಬಳಿಕ ತಾಯಂದಿರು ಮಕ್ಕಳನ್ನು ಆತ್ಮೀಯತೆಯಿಂದ ತಬ್ಬಿಕೊಳ್ಳುತ್ತಾರೆ. ಕೆಲವರು ತಾಯಂದಿರಾದರೆ ತಮ್ಮ ಮಕ್ಕಳು ಕಾಲು ತೊಳೆಯುತ್ತಿದ್ದರೆ…ತಡೆದುಕೊಳ್ಳಲಾಗದೆ ಕಣ್ಣು ತುಂಬಿ ಬರುತ್ತದೆ. ಇಲ್ಲಿದೆ ನೋಡಿ ಆ ಫೋಟೋ..

     

    ಚಿಕ್ಕಂದಿನಿಂದ ತಂದೆತಾಯಿ ಮೇಲೆ ಗೌರವವನ್ನು ಹೆಚ್ಚಿಸುವ ಈ ಕಾರ್ಯಕ್ರಮದಿಂದ…ಇಂಡೋನೇಷಿಯಾದಲ್ಲಿ ಒಂದೇ ಒಂದು ಅನಾಥಾಶ್ರಮ ಇಲ್ಲದಿರುವುದು ಗಮನಾರ್ಹ. ಇದು ಒಳ್ಳೆಯದನ್ನು ತಿಳಿಹೇಳುವ ವಿಧಾನ.

     

  • ಬೂದನೂರಿನಲ್ಲೊಂದು ಸುಂದರ ದೇಗುಲ

    ಬೂದನೂರಿನಲ್ಲೊಂದು ಸುಂದರ ದೇಗುಲ

    ಮಂಡ್ಯ ನಗರಕ್ಕೆ ಸಮೀಪದಲ್ಲಿರುವ ಹೊಸಬೂದನೂರಿನಲ್ಲಿರುವ ಈ ಅನಂತಪದ್ಮನಾಭದೇವಾಲಯ ನೋಡಲು ನಯನಮನೋಹರವಾಗಿದೆ. ಅದ್ಬುತವಾದ ಶೈಲಿಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

    ಪುರಾತನವಾದ ಈ ದೇಗುಲ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಬೂದನೂರಿನಿಂದ ಸುಮಾರು ಒಂದ ಕಿಲೋಮೀಟರ್ ನಷ್ಟು ಒಳಗಿದೆ. ಮಂಡ್ಯದಲ್ಲಿ ಹಲವು ಪುರಾತನ ದೇವಸ್ಥಾನಗಳಿವೆ . ಮೈಸೂರು ಮಹಾರಾಜರ ಕಾಲದಲ್ಲಿ ಹಾಗೂ ಅದಕ್ಕೂ ಹಿಂದೆ ನಿರ್ಮಾಣದಂಥ ಹಲವಾರು ದೇವಾಲಯಗಳ ಸಮೂಹವೇ ಇಲ್ಲಿದೆ . ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಪ್ರವಾಸೋದ್ಯಮ ಇಲಾಖೆಯ ನಿಲಕ್ಷ್ಯವೋ ಇಲ್ಲಿನ ಹಲವು ದೇವಾಲಯಗಳು ಪಾಳುಬಿದ್ದು ಹೋಗಿವೆ. ಇನ್ನು ಕೆಲವು ದೇವಸ್ಥಾನಗಳು ಮೈಸೂರು ಬೆಂಗಳೂರು ಹೆದ್ದಾರಿಯಿಂದ ಒಳಗಿರುವ ಕಾರಣ ಹೊರಗಿನ ಜನರಿಗೆ ಅವು ಅಷ್ಟಾಗಿ ತಿಳಿದಿಲ್ಲ . ಮಂಡ್ಯ ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವಂತಹ ಬೂದನೂರಿನ ಅನಂತಪದ್ಮನಾಭಸ್ವಾಮಿ ದೇವಸ್ಥಾನ
    ಹೊಯ್ಸಳರ ಕಾಲದ ಪುರಾತನ ಮಂದಿರ.
    ಹೊಯ್ಸಳರ ಕಾಲದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಾಸಿ ಕಲೆಯ ಬೀಡಾಗಿಸಿದ್ದರು. ಇತಿಹಾಸದ ಪ್ರಕಾರ ಈ ಊರಿಗೆ ಸರ್ವಜ್ಞಪದುಮನಾಭಪುರವೆಂದು ಕರೆಯುತ್ತಿದ್ದರು. ಹೊಯ್ಸಳರ ರಾಜ ಮೂರನೇ ನರಸಿಂಹ ಇಲ್ಲಿ ಕೇಶವದೇವಾಲಯ ನಿರ್ಮಾಣ ಮಾಡಿದರೂ, ಪದುಮನಾಭಪುರದಲ್ಲಿದ್ದ ಕಾರಣದಿಂದ ಈದೇಗುಲಕ್ಕೆ ಪದ್ಮನಾಭ ದೇವಸ್ಥಾನವೆಂದೇ ಹೆಸರಾಯಿತು. ಅನಂತಪದ್ಮನಾಭನೆಂದೊಡನೆ ಶೇಷಶಯನನಾಗಿರುವ ಮಹಾವಿಷ್ಣುವಿನ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತದೆ . ಬೂದನೂರಿನ ಈ ದೇವಾಲಯದಲ್ಲಿ ಪದ್ಮನಾಭಸ್ವಾಮಿ ನಿಂತಿರುವ ಭಂಗಿಯಲ್ಲಿದ್ದಾನೆ.
    ಇಲ್ಲಿನ ಪೂಜಾ ಕೆಲಸಕ್ಕಾಗಿ ಇಲ್ಲಿಗೆ ಸಮೀಪದ ಗುತ್ತಲು ಗ್ರಾಮದ ಕೇಶವ ಸ್ಥಾನಿಕ ನಂಬಿಪಿಳ್ಳೈ ವಂಶಸ್ಥರು ದತ್ತಿ ಕೊಟ್ಟಿರೆಂಬ ಶಾಸನದ ಉಲ್ಲೇಖವಿದೆ.

     

    ವೀರನಾರಸಿಂಹನೆಂಬ ರಾಜ 1098ರ ಧಾತು ನಾಮಸಂವತ್ಸರದ ಪುಷ್ಯ ಶುದ್ಧ ಸೋಮವಾರದಂದು ಈ ದೇವಸ್ಥಾನ ಕಟ್ಟಿದ್ದಾನೆನ್ನುತ್ತದೆ ಇತಿಹಾಸ .
    ರಾಜ್ಯದ ಮೂಲೆ ಮೂಲೆಯಲ್ಲೂ ಈ ದೇವರಿಗೆ ಭಕ್ತರಿದ್ದಾರೆ.
    ಅನಂತಪದ್ಮನಾಭ ಸ್ವಾಮಿ ದೇವಾಲಯ ನಕ್ಷತ್ರಾಕಾರದ ಜಗಲಿಯ ಮೇಲಿದ್ದು ಮುಖಮಂಟಪ, ಪರಊರಿನಿಂದ ಬರುವ ಭಕ್ತರಿಗಾಗಿ ಕಲ್ಲಿನಿಂದ ಕಟ್ಟಿದ ಕಟ್ಟಣೆಯಿದೆ., ಪ್ರವೇಶದ್ವಾರದಲ್ಲೂ ಅಪರೂಪದ ಕೆತ್ತನೆಗಳಿವೆ.
    ನವರಂಗ, ಸುಖನಾಸಿ, ಭುವನೇಶ್ವರಿ, ಅಂತರಾಳ, ಗರ್ಭಗೃಹ, ಜಾಲಂದ್ರಗಳಿವೆ. ಭುವನೇಶ್ವರಿಗಳಲ್ಲಿ ಹೊಯ್ಸಳರ ಶೈಲಿ ಮನಸೊರೆಗೊಳ್ಳುತ್ತದೆ. ನಾಜೂಕಾದ ಕೆತ್ತನೆಗಳಿವೆ. ನವರಂಗದಲ್ಲಿ ವೃತ್ತಾಕಾರದ ಕಂಬಗಳಿವೆ. ಪುರಾಣ, ಪುಣ್ಯಕಥೆ, ಭಾಗವತದ ಚಿತ್ತಾರಗಳಿಲ್ಲದಿದ್ದರೂ, ಅರೆಕಂಬಗಳಿಂದ ಕೂಡಿದ ಸಾಧಾರಣ ಕೆತ್ತನೆಯ ಭವ್ಯ ದೇವಾಲಯ ಇದಾಗಿದೆ. ಗರ್ಭಗುಡಿಯ ಮೇಲಿರುವ ಗೋಪುರ ಕಲಾತ್ಮಕವಾಗಿದೆ. ಸಂಪೂರ್ಣ ಶಿಥಿಲವಾಗಿದ್ದ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಪ್ರಸನ್ನಗಣಪತಿ ಹಾಗೂ ಲಕ್ಷ್ಮೀ ದೇವಿಯ ಸುಂದರ ವಿಗ್ರಹಗಳಿವೆ.
    ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ನಿಂತಿರುವ ಅನಂತಪದ್ಮನಾಭಸ್ವಾಮಿಯ ಮೂರ್ತಿ ಆಕರ್ಷಕವಾಗಿದೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದ ದೇವರು ಸೂಕ್ಷ್ಮ ಕೆತ್ತನೆಗಳಿಂದ ಕಂಗೊಳಿಸುತ್ತದೆ. ಸರ್ಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಬೂದನೂರಿನ ಈ ದೇಗುಲ ಗತ ಇತಿಹಾಸವನ್ನು ಸಾರುತ್ತಾ ನಿಂತಿದೆ. ಒಮ್ಮೆ ನೋಡಿ ಕಣ್ಮನತುಂಬಿಸಿಕೊಳ್ಳಿ. ಪುರಾತತ್ವ ಇಲಾಖೆಗೊಳಪಡುವ ಈ ದೇಗುಲದ ಕುರಿತು ಮುಖ್ಯರಸ್ತೆಯಲ್ಲಿ ಮಾಹಿತಿಫಲಕ ಅವಳವಡಿಸಿದರೆ ಹೊರಭಾಗದಿಂದ ಬರುವ ಪ್ರವಾಸಿಗಳಿಗೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇಲಾಖೆ ಇಂತಹ ದೇಗುಲ ಸ್ಥಳಗಳ ಕುರಿತು ಮಾಹಿತಿ ಪ್ರಕಟಿಸಿದರೆ ಜನರಿಗೆ ಅನುಕೂಲವಾಗುತ್ತದೆ.

  • ಗುಂಪೆ ವಲಯ ಸ್ವಾಸ್ಥ್ಯಮಂಗಲ ಕಾರ್ಯಕ್ರಮ

    ಗುಂಪೆ ವಲಯ ಸ್ವಾಸ್ಥ್ಯಮಂಗಲ ಕಾರ್ಯಕ್ರಮ

    ಗುಂಪೆ ವಲಯದ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ ತಾ 24-8-2017 ಗುರುವಾರ ಬೆಜಪ್ಪೆ ಶ್ರೀಯುತ ಸುಬ್ರಹ್ಮಣ್ಯ ಭಟ್ ಇವರ ಮನೆಯಲ್ಲಿ ನಡೆಯಿತು. ಅವರು ನೂತನವಾಗಿ ನಿರ್ಮಿಸಿದ ಗೋಶಾಲೆಯ ಪ್ರವೇಶೋತ್ಸವವನ್ನು ದೇಶೀ ತಳಿಯ ಗೋವಿನ ಪ್ರವೇಶೋತ್ಸವದೊಂದಿಗೆ ನಡೆಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಯುತ ವೇದಮೂರ್ತಿ ಪಂಜರಿಕೆ ಗಣಪತಿ ಭಟ್ ನೆರವೇರಿಸಿದರು.

    ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದೇಶೀಯ ಗೋವಿನ ಸಂರಕ್ಷಣೆ, ಸಂವರ್ಧನೆಯ ಕಾರ್ಯದಿಂದ ಪ್ರೇರಣೆಗೊಂಡು ತಾವೂ ಈ ಕಾರ್ಯದಲ್ಲಿ ಭಾಗಿಗಳಾಗುವ ಉದ್ದೇಶವನ್ನಿರಿಸಿ ಗೋ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡರು.

    ಬಂದ ಅತಿಥಿಗಳನ್ನುಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಸ್ನೇಹಾ ರವೀಶ್ ಈದಿನ ಶ್ರೀಗುರುಗಳು ನಿರ್ದೇಶಿಸಿದ ಸಪ್ತ ಮಂಗಲ ಕಾರ್ಯಕ್ರಮದಲ್ಲಿ ಒಂದಾದ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾವು ಬೆಳಗಿನ ಫಲಾಹಾರವಾಗಿ ಕೆಸುವಿನ ಪತ್ರೊಡೆ, ಮಧ್ಯಾಹ್ನದ ಭೋಜನಕ್ಕೆ ರಾಸಾಯನಿಕ ರಹಿತ ಆಹಾರಗಳಾದ ತಮ್ಮ ಹಿತ್ತಿಲಲ್ಲೇ ಬೆಳೆದ ಪುನರ್ಪುಳಿ ಸಾರು, ಮುಂಡಿ ಹಾಗೂ ಬಾಳೆ ಕೂಂಬೆ ಪಲ್ಯ, ಬ್ರಾಹ್ಮಿ (ಉರಗೆ) ತಂಬುಳಿ, ಸಾಂಬ್ರಾಣಿ ಚಟ್ನಿ, ಕೆಸುವಿನ ದಂಟಿನ ಗೊಜ್ಜು, ಉಪ್ಪಿನಲ್ಲಿ ಹಾಕಿರಿಸಿದ ಮಾವಿನಕಾಯಿ ಮೆಣಸುಕಾಯಿ, ಕೇನೆ ಮೇಲೋಗರ, ದೇಶೀ ಗೋವಿನ ಹಾಲಿನ ಹಾಲು ಪಾಯಸ, ಮಾವಿನಕಾಯಿ ಉಪ್ಪಿನಕಾಯಿ ಮುಂತಾದುವುಗಳಿಂದಲೇ ತಯಾರಾದ ಪದಾರ್ಥಗಳನ್ನು ಮಾಡಿದ್ದೇವೆ. ಬಾಯಾರಿಕೆ ವ್ಯವಸ್ಥೆಗೆ ಪುನರ್ಪುಳಿ ಸರಬತ್ತು ಮತ್ತು ಶಂಖಪುಷ್ಪ ಹೂವಿನ ಸರಬತ್ತು ತಯಾರಿಸಿದ್ದೇವೆ. ಪುನರ್ಪುಳಿ ಜೀರ್ಣ ಶಕ್ತಿ ಹೆಚ್ಚಿಸುತ್ತದೆ, ಬಾಳೆಕೂಂಬೆ – ಕೆಸುವಿನಲ್ಲಿ ನಾರಿನಂಶ ಸಾಕಷ್ಟಿದೆ, ಉರಗೆ ಬುದ್ಧಿಶಕ್ತಿ ವರ್ಧಿಸುತ್ತದೆ, ಶಂಖಪುಷ್ಪ ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ ಎಂಬುದಾಗಿ ತಿಳಿಸಿದರು.

    ಆರೋಗ್ಯ ಸಂರಕ್ಷಣೆಯ ಕುರಿತು ಡಾ| ಶ್ರೀಮತಿ ಮಾಲತಿ ಪ್ರಕಾಶ ಮಾತನಾಡುತ್ತಾ ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದೊಳಗೇ ಇದೆ.ದೇಶೀ ಹಸುವಿನ ಹಾಲು,ಮಜ್ಜಿಗೆ,ತುಪ್ಪಗಳು ಸರ್ವೋತ್ಕೃಷ್ಟ.ನಮ್ಮ ಊಟದ ಮೊದಲ ತುತ್ತಿಗೆ ಒಂದು ಚಮಚ ತುಪ್ಪ ಸೇರಿದರೆ; ಕೆಲವಾರು ವಿಷಯುಕ್ತವಾದುದನ್ನೂ ಜೀರ್ಣಿಸುವ ಶಕ್ತಿ ದೇಶೀ ದನದ ತುಪ್ಪಕ್ಕೆ ಇದೆ.
    ಇದು ನಮ್ಮ ಆರೋಗ್ಯದ ರಕ್ಷಕನಾದರೆ; ವಿದೇಶೀ ದನದ ಹಾಲು ಆರೋಗ್ಯ ಭಕ್ಷಕ. ಹಾಗೆಯೇ ವಿಷವುಣಿಸಿ ಬೆಳೆಸುವ ಹಣ್ಣು, ತರಕಾರಿಗಳು. ಕೆಡದಂತೆ ವಿಷ ಸಿಂಪಡಿಸಿ ಶೇಖರಿಸಿಡುವ ಧಾನ್ಯಗಳು. ಪೇಟೆ- ಪಟ್ಟಣಗಳಲ್ಲಿ ಸಿಗುವ ಬಣ್ಣದ ತಂಪು ಪಾನೀಯಗಳನ್ನು ಸೇವಿಸದಂತೆ ಎಚ್ಚರವಹಿಸಿ, ಆ ಬಗ್ಗೆ ಮಕ್ಕಳಿಗೆ ತಿಳಿಹೇಳಿ.
    ಇಂದಿನ ಬಹುತೇಕ ಮಾರಕ ರೋಗಗಳಿಗೂ ಇವೇ ಕಾರಣರು. ಬಿಳಿ ವಿಷಗಳಾದ ಸಕ್ಕರೆ ಹಾಗೂ ಮೈದಾಗಳು ನಮ್ಮ ಆರೋಗ್ಯವನ್ನು ಹದಗೆಡಿಸುವ ಮೂಲಗಳು.
    ಕೆಲವು ರೋಗಗಳನ್ನು ಆಹ್ವಾನಿಸುವ ಆಗಂತುಕರು.
    ಬೇಕರಿಯ ಎಲ್ಲಾ ತಿಂಡಿಗಳಲ್ಲೂ ಮೈದಾ ಹಾಗೂ ಸಕ್ಕರೆ ಇದ್ದೇ ಇದೆ.
    ಇವುಗಳೆರಡೂ ಕ್ರಮೇಣ ನಮ್ಮನ್ನು ರೋಗಿಗಳನ್ನಾಗಿ ಮಾಡುವ ರಾಕ್ಷಸರು.
    ಆದಷ್ಟು ನಿಮ್ಮ ನೆಲದಲ್ಲಿ ಸಾವಯವ ತರಕಾರಿಗಳನ್ನು ಬೆಳೆಸಿ .
    ಈ ರೀತಿಯಿಂದ ಮಕ್ಕಳಿಗೆ ವಿಷ ಮುಕ್ತ ಆಹಾರ ರೀತಿಯಲ್ಲಿ ಬೆಳೆಸಿ ತಿಳಿಹೇಳಬೇಕೆಂದರು. ಹಾಗೆಯೇ ಆದಷ್ಟೂ ಜೀನಸು ಹಾಲು, ಮಜ್ಜಿಗೆಗೆ ಪ್ಲಾಸ್ಟಿಕ್ ಬಳಸಬೇಡಿ.ಉಪ್ಪು,ಹುಳಿ ಮಿಶ್ರಿತ ಪದಾರ್ಥಗಳನ್ನು ವರ್ಜಿಸಿ, ಉಪ್ಪಿನಕಾಯಿ, ಹುಳಿ ಇತ್ಯಾದಿಗಳನ್ನು ಭರಣಿ, ಕುಪ್ಪಿಗಳಲ್ಲಿ ತುಂಬಿಡಿ ಎಂಬುದಾಗಿ ಕಿವಿಮಾತು ಹೇಳಿದರು.

    ಶಂಖನಾದ ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಶ್ರೀಯುತ ಅಮ್ಮಂಕಲ್ಲು ರಾಮಭಟ್ಟರು ವಹಿಸಿದ್ದರು. ಅವರು ಮಾತನಾಡುತ್ತಾ ಗೋ ಸಾಕಾಣಿಕೆ ವಿರಳವಾಗಿರುವ ಈ ಸಂದರ್ಭದಲ್ಲಿ ಪತ್ನಿ ಮಕ್ಕಳು ಹಾಗೂ ಸೊಸೆಯಂದಿರ ಅಪೇಕ್ಷೆ ಶ್ರೀಗುರುಗಳ ದೇಶೀ ಗೋಸಂರಕ್ಷಣಾ ಕಾರ್ಯದಿಂದ ಪ್ರೇರಣೆಗೊಂಡು ಇವರು ಕೈಗೊಂಡ ಕಾರ್ಯ ಬಹಳ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು. ಮನೆಯವರ ಪರವಾಗಿ ಶ್ರೀಯುತ ಸುಬ್ರಹ್ಮಣ್ಯ ಭಟ್ ಇವರು ಗೋಸಂಜೀವಿನಿಗೆ ರೂ 5005/- ನ್ನು ವಲಯ ಅಧ್ಯಕ್ಷರಲ್ಲಿ, ವಿದ್ಯಾ ಸಹಾಯ ನಿಧಿಗೆ ರೂ 2005/- ನ್ನು ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನರಲ್ಲಿ ಸಮರ್ಪಣೆ ಮಾಡಿದರು. ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀಯುತ ಕೇಶವ ಪ್ರಸಾದ ಎಡಕ್ಕಾನ, ಕುಂಬಳೆ ವಲಯ ಮಾತೃ ಪ್ರಧಾನೆ ಶ್ರೀಮತಿ ಶಿವಕುಮಾರಿ, ಕುಂಬಳೆ ಉಲ್ಲೇಖ ಪ್ರಧಾನೆ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ, ವಲಯದ ಗುರಿಕ್ಕಾರರು, ಪದಾಧಿಕಾರಿಗಳು ಹಾಗೂ ಬಂಧುಬಳಗದವರು ಉಪಸ್ಥಿತರಿದ್ದರು. ವಲಯ ಮಾತೃಪ್ರಧಾನೆ ಶ್ರೀಮತಿ ಕಾವೇರಿಯಮ್ಮ ಧನ್ಯವಾದವಿತ್ತರು. ರಾಮತಾರಕ ಜಪ ಶಾಂತಿಮಂತ್ರ ಶಂಖನಾದ ಧ್ವಜಾವತರಣದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

  • ಮುಷ್ಠಿಭಿಕ್ಷಾ ಯೋಜನೆಯನ್ವಯ ಅಕ್ಕಿ ಹಸ್ತಾಂತರ ಕಾರ್ಯಕ್ರಮ

    ಮುಷ್ಠಿಭಿಕ್ಷಾ ಯೋಜನೆಯನ್ವಯ ಅಕ್ಕಿ ಹಸ್ತಾಂತರ ಕಾರ್ಯಕ್ರಮ

    ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ, ಮಂಗಳೂರು, ಉಪ್ಪಿನಂಗಡಿ, ಹವ್ಯಕ ಮಂಡಲಗಳ ಮುಷ್ಠಿಭಿಕ್ಷಾ ಯೋಜನೆಯ ನೇತೃತ್ವದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ `ಭಿಕ್ಷಾಂದೇಹಿ ಅಭಿಯಾನಂ’ ಯೋಜನೆಯನ್ವಯ ಸಂಗ್ರಹಿಸಲಾದ 22 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹಸ್ತಾಂತರಿಸಲಾಯಿತು.

    * ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಶಾಲಾ ಮಕ್ಕಳ ಊಟಕ್ಕಾಗಿ ನಿರಂತರವಾಗಿ ಬರುತ್ತಿದ್ದ ಅಕ್ಕಿಯನ್ನು ತಡೆಹಿಡಿದ ಕರ್ನಾಟಕ ಸರಕಾರದ ಧೋರಣೆಯಿಂದಾಗಿ ಸಹಸ್ರಾರು ವಿದ್ಯಾರ್ಥಿಗಳ ಊಟಕ್ಕೆ ಸಂಕಷ್ಟ ಬಂದೊದಗಿರುವುದನ್ನು ಮನಗಂಡು ಶ್ರೀ ಗುರುಗಳ ಕರೆಯಂತೆ ಶಿಷ್ಯ ವೃಂದದವರ ತಕ್ಷಣ ಸ್ಪಂದನದಿಂದಾಗಿ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು.
    * ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ” ಅನ್ನವೆಂಬುದು ದೇವರು ಕೊಡುವ ಭಾಗ್ಯ ಪ್ರಸಾದವಾಗಿದೆ, ಶ್ರೀರಾಮಚಂದ್ರಾಪುರ ಮಠದ ಶ್ರೀಗಳವರು ಕಳೆದ ಹಲವಾರು ದಶಕಗಳಿಂದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಅಭಯಹಸ್ತವನ್ನು ನೀಡುತ್ತಾ ಬಂದಿದ್ದು, ಇತ್ತೀಚೆಗೆ ಶ್ರೀಗಳು ಗೋಶಾಲೆಗೆ ಗೋವನ್ನು ನೀಡಿ ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿರುತ್ತಾರೆ. ಪ್ರಸ್ತುತ ಈ ತುರ್ತು ಸಂದರ್ಭದಲ್ಲೂ ನಮ್ಮನ್ನು ಆಶೀರ್ವದಿಸಿದ್ದಾರೆ ” ಎಂದು ಶ್ರೀರಾಮಚಂದ್ರಾಪುರ ಮಠದ ಕಾರ್ಯವನ್ನು ಶ್ಲಾಘಿಸಿದರು.
    * ಕರ್ನಾಟಕದ ಮಾಜಿ ಸಚಿವ ಜನಾರ್ಧನ ರೆಡ್ಡಿ ಉಪಸ್ಥಿತರಿದ್ದು ಶ್ರೀರಾಮಚಂದ್ರಾಪುರ ಮಠದ ಕಾರ್ಯವನ್ನು ಶ್ಲಾಘಿಸಿ, – ದೇಶೀ ಗೋವುಗಳ ಆಂದೋಲನದಲ್ಲಿ ಪ್ರೇರಿತನಾಗಿದ್ದು, ಅಭಯಾಕ್ಷರ ಆಂದೋಲನಕ್ಕೆ ಹಸ್ತಾಕ್ಷರ ನೀಡಿರುತ್ತೇನೆ – ಎಂದರು.
    * ಈ ಸಂದರ್ಭದಲ್ಲಿ ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ // ಶ್ರೀಕೃಷ್ಣ ಭಟ್, ಮಂಗಳೂರು ಮಂಡಲಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಅಶೋಕ ಕೆದ್ಲ, ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಗೋವಿಂದಬಳ್ಳಮೂಲೆ, ಮಂಡಲ ಕಾರ್ಯದರ್ಶಿಗಳಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ನಾಗರಾಜ ಭಟ್ ಪೆದಮಲೆ, ಶ್ರೀಧರ ಕೂವೆತ್ತಂಡ, ಪದಾಧಿಕಾರಿಗಳಾದ ಮುಡಿಪ್ಪು ರಾಜಾರಾಮ ಭಟ್, ಸತ್ಯನಾರಾಯಣ ಭಟ್ ಮೊಗ್ರ, ಕುಮಾರ ಸುಬ್ರಹ್ಮಣ್ಯ ಪೈಸಾರಿ, ಶ್ರೀಕೃಷ್ಣ ಭಟ್ ಮೀನಗದ್ದೆ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ನವನೀತ ಕೈಪಂಗಳ, ವೈ.ಕೆ.ಗೋವಿಂದ ಭಟ್, ಕೇಶವ ಪ್ರಸಾದ ಎಡೆಕ್ಕಾನ, ಮಾತೃ ಪ್ರಧಾನರಾದ ಕುಸುಮ ಪೆರುಮುಖ, ಸುಮಾ ರಮೇಶ್ ಮತ್ತು ವಿವಿಧ ವಲಯಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶ್ರೀ ಮಠದ ಅಭಿಮಾನಿಗಳು ಉಪಸ್ಥಿತರಿದ್ದರು. ಶ್ರೀಮಠದಿಂದ ಈಗಾಗಲೇ 7 ಕ್ವಿಂಟಾಲಿಗೂ ಮಿಕ್ಕಿ ಅಕ್ಕಿಯನ್ನು ಸಂಗ್ರಹಿಸಿ ಹಸ್ತಾಂತರಿಸಲಾಗಿದೆ ಎಂದು ಮಠದ ವಕ್ತಾರರು ತಿಳಿಸಿರುತ್ತಾರೆ.
    ಶ್ರೀರಾಮಚಂದ್ರಾಪುರ ಮಠದ ಶ್ರೀಗಳವರು ಸದಾಕಾಲ ನಮ್ಮ ವಿದ್ಯಾಲಯಕ್ಕೆ ಅಭಯವನ್ನು ನೀಡಿ ಅನುಗ್ರಹಿಸಿರುತ್ತಾರೆ. ಅನ್ನಭೋಜನವೆಂಬುದು ದೇವರ ಪ್ರಸಾದವಾಗಿದೆ. ಆ ಪ್ರಸಾದವು ಇಂದು ಗುರುಮುಖೇನ ನಮಗೆ ಲಭಿಸಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.

  • ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗಾಗಿ ‘ ಅಕ್ಕಿ ಭಿಕ್ಷಾ ಅಭಿಯಾನ ” ಕ್ಕೆ ಚಾಲನೆ

    ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗಾಗಿ ‘ ಅಕ್ಕಿ ಭಿಕ್ಷಾ ಅಭಿಯಾನ ” ಕ್ಕೆ ಚಾಲನೆ

    ಕಲ್ಲಡ್ಕ ಪ್ರಭಾಕರ ಭಟ್ ಅವರ ಆಶ್ರಯದಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರದ ಸಹಸ್ರಾರು ಮಕ್ಕಳ ಊಟಕ್ಕಾಗಿ ಅಕ್ಕಿ ಪೂರೈಸುವ ಕಾರ್ಯಾರ್ಥವಾಗಿ ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ ಕುಂಬಳೆ ಹವ್ಯಕ ವಲಯದಲ್ಲಿ ” ಅಕ್ಕಿ ಭಿಕ್ಷಾ ಅಭಿಯಾನ ” ಕ್ಕೆ ಚಾಲನೆ ನೀಡಲಾಯಿತು. ಮುಜುಂಗಾವು ವಿದ್ಯಾಪೀಠದ ಆಸುಪಾಸಿನ ಹಲವಾರು ಸಾರ್ವಜನಿಕರ ನಿವಾಸಗಳಿಗೆ ಅಭಿಯಾನ ನಡೆಸಿ ಅವರಿಗೆ ಈ ವಿಚಾರಗಳನ್ನು ತಿಳಿಸಲಾಯಿತು. ಅವರು ಸಂತೋಷಪೂರ್ವಕವಾಗಿ ನೀಡಿದ ಅಕ್ಕಿಯನ್ನು ಸ್ವೀಕರಿಸುತ್ತಾ ಭಿಕ್ಷಾಟನಾ ಅಭಿಯಾನ ನಡೆಸಲಾಯಿತು.
    ಮಂಡಲಾಧ್ಯಕ್ಷ ಪ್ರೊ // ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಉಪಾಧ್ಯಕ್ಷ ಕುಮಾರ್ ಯಸ್. ಪೈಸಾರಿ, ಸತ್ಯನಾರಾಯಣ ಮೊಗ್ರ, ಮಹೇಶ ಸರಳಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಶ್ರೀಕೃಷ್ಣ ಭಟ್ ಮೀನಗದ್ದೆ, ವೈ ಕೆ ಗೋವಿಂದ ಭಟ್ , ಕೇಶವ ಪ್ರಸಾದ ಎಡಕ್ಕಾನ, ಗೋವಿಂದಬಳ್ಳಮೂಲೆ , ಗೀತಾಲಕ್ಷ್ಮಿ ಮುಳ್ಳೇರ್ಯ. ದೇವಕಿ ಪನ್ನೇ, ಕೃಷ್ಣ ಮೋಹನ ಎಡನಾಡು, ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ, ಬಾಲಕೃಷ್ಣ ಶರ್ಮ, ಉದನೇಶ್ವರ ಪ್ರಸಾದ ಸೇಡಿಗುಮ್ಮೆ, ನಾರಾಯಣ ಹೆಗ್ಡೆ, ಶಿವಕುಮಾರಿ ಕುಂಚಿನಡ್ಕ ಇವರು ಈ ಅಭಿಯಾನದಲ್ಲಿ ಉಪಸ್ಥಿತರಿದ್ದರು.

  • ಗುರು ಪೂರ್ಣಿಮೆಯಿಂದ ಗೋ ಪೂರ್ಣಿಮೆವರೆಗೆ

    ಶ್ರೀ ಶ್ರೀರಾಘವೇಶ್ವರ ಭಾರತೀ ಶ್ರೀಗಳ ಅಭಯ ಚಾತುರ್ಮಾಸ್ಯದ ಬಗ್ಗೆ ಶ್ರೀಗಳ ವ್ಯಾಖ್ಯಾನ

     

  • ‘ಸಣ್ಣ’ವರ ‘ದೊಡ್ಡ’ಕೆಲಸ!

    ಅಭಯಾಕ್ಷರ ದ ಮೂಲಕ, ಅಭಯಚಾತುರ್ಮಾಸ್ಯದ ಮುನ್ನುಡಿ ಬರೆದ ಮಕ್ಕಳು. ಗಿರಿನಗರದ ರಾಮಾಶ್ರಮದಲ್ಲಿ ಶ್ರೀಗಳ ಚಾತುರ್ಮಾಸ್ಯಕ್ಕೆ ಪುರ ಪ್ರವೇಶ.

  • ನಾವೆಲ್ಲ ಪಾತ್ರಧಾರಿಗಳೇ?

    ಜಗವೊಂದು ನಾಟಕಶಾಲೆ ಅಂತಾರೆ. ಆದರೆ ಬಣ್ಣದ ಬದುಕು ಕಂಡವರಿಗೇ ಗೊತ್ತು ಅಲ್ವೇ?

     

    ಛಾಯಾಗ್ರಹಣ :- Gopi Jolly

  • ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ರಾಮಕಥಾ.

    ಜನಜನ~ಮನಮನದಲಿ ರಾಮಭಾವ~ ರಾಮರಾಜ್ಯ ಸಂಗಮದ ಸಂಭ್ರಮ ರಾಮಕಥಾ.