ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಮಲ್ಲಿಕಾರ್ಜುನ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಕೆಲ ಚಿತ್ರಗಳು.
Category: Local News
-
ಪುನಃ ಪ್ರತಿಷ್ಠಾಬಂಧ ಬ್ರಹ್ಮ ಕಲಶೋತ್ಸವ
ಶ್ರೀ ಪಂಚ ಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಮಂತ್ರಣ.
-
ಕುಮಟಾದಲ್ಲಿ ಮಳೆಗಾಲದ ಮೊದಲ ಯಕ್ಷಗಾನ.
ಕಳೆದ ವರ್ಷದ ಅಭೂತಪೂರ್ವ ಯಶಸ್ಸಿನೊಂದಿಗೆ ಯಕ್ಷ ಪ್ರೇಮಿ, ಯಶಸ್ವಿ ಯಕ್ಷ ಸಂಘಟಕ, ಗೌರೀಶ ಗುನಗ ಇವರ ಸಂಯೋಜನೆಯಲ್ಲಿ ಇದೇ ಜೂನ 25 ರಂದು ಕುಮಟಾದಲ್ಲಿ ಮಳೆಗಾಲದ ಪ್ರಥಮ ಯಕ್ಷ ವೈಭವ. ಶ್ರೇಷ್ಠ ಕಲಾವಿದರ ಅಪೂರ್ವ ಸಂಗಮ.ಅಪ್ಪಟ ಪೌರಾಣಿಕ ಯಕ್ಷ ಸಂಜೆ.
-
ಸುಂದರ ಬದುಕಿನ ಮೇಲೆ ಅದೇನು ಪ್ರಹಾರ?
ಜೀವದಾಸರೆಯ ಹವಣಿಕೆಯೆಲ್ಲಿ ಮಿಡಿಯುತ್ತಿರುವ ಜೀವ. ಹಸಿವನಿಂಗಿಸಿಕೊಳ್ಳುವ ತವಕ ಒಬ್ಬರಿಗೆ. ಬದುಕುವಾಸೆ ಇನ್ನೊಬ್ಬರಿಗೆ.
ಛಾಯಾಗ್ರಹಣ:- Gopi jolly
-
ಕೈ ಸೋತ ಯಕ್ಷಗಾನ ಕಲಾವಿದನಿಗೆ ನೆರವು
ಮೂಡಗಣಪತಿ ಸಭಾಭವನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಮಂಜುನಾಥ ಭಂಡಾರಿ ಕರ್ಕಿ ಅವರಿಗೆ ಸನ್ಮಾನ. ಮತ್ತು ಧನ ಸಹಾಯ.
-
ಯಶಸ್ವಿ ಹಾಲು ಹಬ್ಬ.
ಉಣ್ಣುವುದಕ್ಕಿಂತ ಉಣಿಸುವುದು ಸಾವಿರಪಾಲು ಶ್ರೇಷ್ಟ ಎಂಬ ನುಡಿಗಳೊಂದಿಗೆ ಸಂಭ್ರಮದಿಂದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಕರಗಳಿಂದ ಮಕ್ಕಳಿಗೆ ಹಾಲಿನ ಸವಿ ಉಣಿಸಿದ್ದು.
-
ಶಿವಗಂಗೆಯೆಂಬ ಪ್ರಸಿದ್ಧ ಸ್ಥಳ
ಬೆಂಗಳೂರು ಮಹಾನಗರದಿಂದ 54 ಕಿ.ಮೀ. ದೂರದಲ್ಲಿರುವ ಶಿವಗಂಗೆ, ದಕ್ಷಿಣ ಕಾಶಿ ಎಂದೇ ಖ್ಯಾತವಾಗಿದೆ. ಈ ಬೆಟ್ಟಕ್ಕೆ ನಾಲ್ಕೂ ಯುಗದ ನಂಟಿದೆ. ಕೃತಯುಗದಲ್ಲಿ ವೃಷಬಾದ್ರಿ ಎಂದೂ, ತ್ರೇತಾಯುಗದಲ್ಲಿ ಶೃಗಂದಿ ಬೆಟ್ಟವೆಂದೂ, ದ್ವಾಪರಯುಗದಲ್ಲಿ ಮಂದಾಕಿನಿ ಬೆಟ್ಟವೆಂದೂ ಕರೆಸಿಕೊಂಡಿದ್ದ ಈ ಗಿರಿ ಕಲಿಯುಗದಲ್ಲಿ ಶಿವಗಂಗೆಯಾಗಿದೆ ಎಂಬುದು ಪ್ರತೀತಿ.
ಹೆಸರೇ ಹೇಳುವಂತೆ ಇಲ್ಲಿ ಎಲ್ಲಿ ನೋಡಿದರೂ ಶಿವ ಹಾಗೂ ಗಂಗೆಯರೇ ಕಾಣುತ್ತಾರೆ. ಬೆಟ್ಟವೂ ಕೂಡ ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುತ್ತದೆ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ. ಈ ಬೆಟ್ಟದ ಮೇಲೆ ಅಷ್ಟಲಿಂಗ, ಅಷ್ಟಗಣಪ, ಅಷ್ಟ ವೃಷಭ, ಅಷ್ಟತೀರ್ಥಗಳಿವೆ. ಗಣಪನ ಹಾಗೂ ಶಾರದೆ ಹಾಗೂ ಶಂಕರಾಚಾರ್ಯರ ದೇವಾಲಯಗಳೂ ಇದೆ.
ಶಿವಗಂಗೆಯ ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲೂ ಬರುತ್ತದೆ. ಹೊಯ್ಸಳರ ಕಾಲದ ವಿಷ್ಣುವರ್ಧನ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಗುಡಿ ಗೋಪರ ಹಾಗೂ ಕಮಲತೀರ್ಥವೆಂಬ ಕೆರೆ ನಿರ್ಮಿಸಿದ್ದಾರೆ ಎಂದು ತಿಳಿದುಬರುತ್ತದೆ.
ಇನ್ನು ಶಿವಗಂಗೆಯಲ್ಲಿ ಸ್ವರ್ಣಾಂಭ ಸಹಿತ ಗಂಗಾಧರೇಶ್ವರ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ಧೇಶ್ವರ, ಕುಂಭೇಶ್ವರ,ಸೋಮೇಶ್ವರ, ಮುದ್ದು ವೀರೇಶ್ವರನೆಂಬ ಅಷ್ಟ ಲಿಂಗಗಳಿದ್ದರೆ, ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ,ಮೈತ್ಲಾ ತೀರ್ಥ, ಪಾತಾಳಗಂಗೆ, ಒಳಕಲ್ ತೀರ್ಥ, ಕಪಿಲತೀರ್ಥ ಎಂಬ ಅಷ್ಟ ತೀರ್ಥಗಳೂ ಇವೆ.
ಗಂಗಾಧರೇಶ್ವರ ಹಾಗೂ ಸ್ವರ್ಣಾಂಭ ದೇವಾಲಯಗಳು ಅತ್ಯಂತ ಪುರಾತನವಾದವು. ಈ ಕ್ಷೇತ್ರಕ್ಕೆ ಶಿವಗಂಗೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಒಂದು ಕಥೆ ಇದೆ. ಆದಿ ಶಕ್ತಿ ಹಾಗೂ ರಕ್ತಬೀಜಾಸುರನ ನಡುವೆ ಘನಘೋರ ಯುದ್ಧವಾದಾಗ ಪ್ರತಿ ತೊಟ್ಟು ರಕ್ತ ನೆಲದ ಮೇಲೆ ಬಿದ್ದ ಕೂಡಲೇ ರಕ್ತಬೀಜಾಸುರರ ಸಂತತಿ ಹೆಚ್ಚಾಗುತ್ತಿದ್ದ ಕಾರಣ ಇವರೆಲ್ಲರೊಡನೆ ಹೋರಾಡಿತ ತಾಯಿಗೆ ತುಂಬಾ ದಣಿವಾಗಿ ಬಾಯಾರಿಕೆ ಕಾಣಿಸಿಕೊಂಡಿತಂತೆ. ಆಗ ಪರಶಿವ, ಗಂಗೆಯನ್ನು ಪ್ರಾರ್ಥಿಸುವಂತೆ ತಿಳಿಸಿದನಂತೆ. ಆಗ ಶಿವೆ ಗಂಗೆಯನ್ನು ಪ್ರಾರ್ಥಿಸಲು ಗಂಗೆ ಉಕ್ಕಿದಳಂತೆ. ಈ ನೀರು ಕುಡಿದು ದಣಿವಾರಿಸಿಕೊಂಡ ದುರ್ಗೆ ರಕ್ತಬೀಜನ ಸಂಹಾರ ಮಾಡಿದಳಂತೆ. ಇಂದಿಗೂ ಈ ಬೆಟ್ಟದಲ್ಲಿ ಪಾತಾಳಗಂಗೆ ಎಂಬ ಸ್ಥಳವಿದ್ದು, ಅಲ್ಲಿ ನೀರು ಹರಿಯುತ್ತದೆ. ಈ ನೀರಿನಿಂದ ಕೈಕಾಲು ಮುಖ ತೊಳೆದರೆ ಸಕಲ ಪಾಪಗಳೂ ನಿವಾರಣೆ ಆಗುತ್ತವೆ ಎಂಬುದು ಪ್ರತೀತಿ.
ಪಾತಾಳಗಂಗೆಯ ಮೇಲ್ಭಾಗದಲ್ಲಿ ಶಂಕರಾಚಾರ್ಯರ ಗುಹೆ ಇದೆ. ಆದಿ ಶಂಕರಾಚಾರ್ಯರು ಕೆಲ ಕಾಲ ಇಲ್ಲಿ ತಪಸ್ಸು ಮಾಡಿದರು ಎಂದೂ ಹೇಳಲಾಗುತ್ತದೆ. ಇಲ್ಲಿ ಪಕ್ಕದಲ್ಲಿ ಸ್ವರ್ಣಾಂಬಾ ದೇವಿಯ ಸನ್ನಿಧಿ ಇದೆ. ರಕ್ತಬೀಜನ ಕೊಂದ ಉಗ್ರರೂಪಿ ರಕ್ತೇಶ್ವರಿಯ ವಿಗ್ರಹವಿದೆ. ಈ ಗುಡಿಯ ಬಲಭಾಗದಲ್ಲಿ ಗಂಗಾಧರೇಶ್ವರ ಸ್ವಾಮಿ ದೇವಾಲಯವಿದೆ. ಗರ್ಭಗೃಹದಲ್ಲಿ ಗಂಗಾಧರೇಶ್ವರ ಲಿಂಗವಿದೆ.
ಈ ಲಿಂಗ ಅತ್ಯಂತ ಮಹಿಮಾನ್ವಿತವಾದ್ದು ಎಂದು ಹೇಳಲಾಗುತ್ತದೆ. ದ್ವಾಪರಯುಗದಲ್ಲಿ ಜನಮೇಜಯನು ಸರ್ಪಯಾಗ ಮಾಡಿ ನಾಗ ಹತ್ಯಾ ದೋಷಕ್ಕೆ ತುತ್ತಾಗಿ ಅವನಿಗೆ ಕುಷ್ಟರೋಗ ಬರುತ್ತದೆ. ಪುಣ್ಯಕ್ಷೇತ್ರ ದರ್ಶನ ಮಾಡಿ ಪಾಪ ಪರಿಹಾರ ಮಾಡಿಕೊಳ್ಳಲು ಎಲ್ಲ ಕ್ಷೇತ್ರಕ್ಕೂ ಹೋಗುತ್ತಾನೆ. ಶಿವಗಂಗೆಗೂ ಬಂದ ಜನಮೇಜಯ ಲಿಂಗಕ್ಕೆ ಅಭಿಷೇಕ ಮಾಡಲು ತುಪ್ಪವನ್ನು ಸಮರ್ಪಿಸುತ್ತಾನೆ. ಆದರೆ ಇಲ್ಲಿನ ಲಿಂಗಕ್ಕೆ ತುಪ್ಪ ಹಚ್ಚಿದಾಗ, ಅದು ಬೆಣ್ಣೆಯಾಗಿ ಪರಿವರ್ತನೆ ಆಯಿತಂತೆ. ಬೆಣ್ಣೆ ತುಪ್ಪವಾಗುತ್ತದೆ. ಆದರೆ ತುಪ್ಪ ಬೆಣ್ಣೆ ಆಗಲು ಸಾಧ್ಯವಿಲ್ಲ. ಆದರೆ ಈ ಪವಾಡ ಶಿವಗಂಗೆಯಲ್ಲಿ ನಡೆದಿದೆ.
ಈ ಬೆಟ್ಟದಲ್ಲಿರುವ ಮತ್ತೊಂದು ಆಕರ್ಷಣೆ ಒರಳಕಲ್ಲು ತೀರ್ಥ. ಈ ನೀರಿಗೆ ಸಕಲ ರೋಗ ನಿವಾರಣೆ ಮಾಡುವ ಶಕ್ತಿ ಇದೆ ಎಂದು ಹೇಳುತ್ತಾರೆ. ಇದಲ್ಲದೆ, ನಂದಿ, ವೃಷಭ, ಮಕರಬಸವ, ಮಹಿಷ ಬಸವ, ಗಾರೆ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿಬಸವ, ಕೋಡುಗಲ್ಲು ಬಸವ ಎಂಬ ಅಷ್ಟ ಮಹಾ ವೃಷಭ ಇದೆ. ಶಿವಗಂಗೆ ಕಡಿದಾದ ಬೆಟ್ಟದ ಮೇಲಿರುವ ಕಾರಣ ಇದು ಚಾರಣ ಪ್ರಿಯರಿಗೆ ಅತ್ಯುತ್ತಮ ಗಿರಿಶಿಖರ. ಇದೇ ಬೆಟ್ಟದಲ್ಲೇ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಇಲ್ಲಿಯೇ ಎಂದು ಹೇಳುತ್ತಾರೆ. ಈ ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದೇ ಕರೆಯುತ್ತಾರೆ.
-
ಇಡಗುಂಜಿ ವಿನಾಯಕ ದೇವಸ್ಥಾನ ಒಂದು ಅದ್ಭುತ
ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ದ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ, )ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.
ವಿನಾಯಕ ಮೂರ್ತಿ
ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ “ಮಹೋತಭಾರ ಶ್ರೀ ವಿನಾಯಕ” ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.
ದೇವಸ್ಥಾನದ ಸಮಯ
ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ
ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ
ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆವಿಶೇಷ ಸೇವೆಗಳು:
ವಿಶೇಷ ಸೇವೆಗಳು
ತುಲಾಭಾರ
ಗಣ ಹೋಮ
ಮೂಢ ಗಣಪತಿ
ರಂಗ ಪೂಜೆಇಲ್ಲಿಗೆ ತಲುಪುವುದು ಹೇಗೆ?
ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ರಾ.ಹೆ. ೬೬ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು -
ನಿತ್ಯ ಕಾಯಕ
ಹಳ್ಳಿಯ ಮಾತೆಯರು ಅನ್ನವನ್ನು ನೀಡುವ ದೇವತೆಗಳು. ಮಳೆಯಲ್ಲಿ ಕಾಯಕ ನಡೆಸುವ ಕರ್ಮಯೋಗಿಗಳು ಇವರು.
ಛಾಯಾಗ್ರಹಣ:- Gopy Jolly
-
ಇತಿಹಾಸ ಸಾರುತ್ತಿರುವ ಸುಂದರ ಚಿತ್ರಗಳು
ಒಂದೊಂದು ಕಲ್ಲೂ ಇತಿಹಾಸ ಸಾರುವ ಸುಂದರ ಸಾಮ್ರಾಜ್ಯ ಕ್ಯಾಮರಾ ಕಣ್ಣಲ್ಲಿ.
ಛಾಯಾಗ್ರಹಣ:- Gopy Jolly