ಸಿನಿರಂಗದಲ್ಲಿ ಅವಕಾಶ ಕಡಿಮೆಯಾದ ಹಿನ್ನೆಲೆಯಲ್ಲಿ ಉಬರ್ ಚಾಲಕರಾಗಿ ಸ್ವಾಭಿಮಾನದ ಬದುಕು ನಡೆಸುತ್ತಿರುವ ನಟ ಶಂಕರ್ ಅಶ್ವಥ್ ಅವರ ನೆರವಿಗೆ ನಟ ಜಗ್ಗೇಶ್ ಬಂದಿದ್ದಾರೆ.
ನಟ ಶಂಕರ್ ಅಶ್ವಥ್ ಚಾಮಯ್ಯ ಮೇಷ್ಟ್ರು ಖ್ಯಾತಿಯ ಹಿರಿಯ ನಟ ಅಶ್ವಥ್ ಅವರ ಪುತ್ರರಾಗಿದ್ದು, ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗದೇ ಜೀವನ ನಿರ್ವಹಣೆಗಾಗಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಇವರ ಸಹಾಯಕ್ಕೆ ಬಂದಿರುವ ನಟ ಜಗ್ಗೇಶ್, ಕಲಾವಿದರಾಗಿರುವ ಅವರಿಗೆ ಸಂಕಷ್ಟ ಎದುರಾಗಿರುವುದು ದುರದೃಷ್ಟಕರ. ಅವರ ಕಷ್ಟದ ನೆರವಿಗಾಗಿ 1 ಲಕ್ಷ ಹಣ ನೀಡುತ್ತೇನೆ. ಅವರಿಗೆ ಅನುಕೂಲವಾಗುವಂತಹ ಕೆಲಸವನ್ನು ಕೊಡಿಸುತ್ತೇನೆ. ಅವರ ಸ್ವಾಭಿಮಾನಕ್ಕೆ ನನ್ನದೊಂದು ಹಾಟ್ಸ್ ಆಫ್ ಎಂದು ಶ್ಲಾಘಿಸಿದರು.
ತಮ್ಮ ಸ್ವಾಭಿಮಾನದ ಬದುಕಿಗೆ ನೆರವಾಗಲು ಮುಂದಾದ ನಟ ಜಗ್ಗೇಶ್ ಅವರಿಗೆ ಶಂಕರ್ ಅಶ್ವತ್ ಧನ್ಯವಾದ ಹೇಳಿದ್ದಾರೆ. ಈ ವಿಷಯ ತಿಳಿದು ಭಾವುಕರಾದ ಶಂಕರ್ ಅಶ್ವತ್, ಜಗ್ಗೇಶ್ ಅವರ ಸಹಾಯಕ್ಕೆ ನಾನು ಆಬಾರಿಯಾಗಿದ್ದೇನೆ. ನನಗೆ ಹಣಕಾಸಿನ ನೆರವು ಬೇಡ. ಹಣ ಏನೇ ನೀಡುವುದು ಇದ್ದರೆ ನನ್ನ ತಂದೆಯ ಟ್ರಸ್ಟ್ ಗೆ ನೀಡಿ. ಆದರೆ ನನಗೆ ಹೊಂದುವಂತಹ ಯಾವುದೇ ಕೆಲಸವಾದರೂ ನಾನು ಮಾಡುತ್ತೇನೆ ಎಂದರು.