ಕೊಪ್ಪಳದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ನೀಡಿದ ಸಂವಿಧಾನ ವಿರೋಧಿ ಹೇಳಿಕೆಯ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ಸಂಸತ್ತಿನಲ್ಲಿ ಸಚಿವರು ಕ್ಷಮೆ ಕೇಳುವಂತೆ ಮಾಡಿತ್ತು. ಈ ವಿವಾದದ ನಂತರ ನಿನ್ನೆ ದೀರ್ಘವಾದ ಸಂದರ್ಶನ ನೀಡಿದ ಸಂದರ್ಭದಲ್ಲಿ ನಿರೂಪಕ ಮುಸಲ್ಮಾನರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ‘ನಾನು ಈ ದೇಶದ ಮುಸಲ್ಮಾನರನ್ನು ಮತ್ತು ಅಲ್ಲಾಹನನ್ನು ನಾನು ಗೌರವಿಸುತ್ತೇನೆ’ ಎಂದು ಉತ್ತರಿಸಿದ್ದಾರೆ.
ಪ್ರಖರ ಹಿಂದುತ್ವವಾದಿ, ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ನೀವು ಹಿಂದೊಮ್ಮೆ ಮುಸ್ಲಿಮರು ಭಯೋತ್ಪಾದಕರು, ನನಗೆ ಯಾವೊಬ್ಬ ಮುಸಲ್ಮಾನನ ಮತ ಬೇಕಾಗಿಲ್ಲ ಎಂದು ನೀವು ಹೇಳಿಕೆ ನೀಡಿದ್ದಿರಿ ಎಂದು ಕೇಳಿದಾಗ ಉತ್ತರಿಸಿದ ಹೆಗಡೆ, ನಮ್ಮ ಕ್ಷೇತ್ರದಲ್ಲಿ ಆ ಸಮಯ ಸಂಧರ್ಭ ಆ ರೀತಿಯಾಗಿತ್ತು. ಆದರೆ ಭಾರತೀಯ ಆಸ್ಮಿತೆಯನ್ನು ಒಪ್ಪುವ ಯಾರೇ ಆಗಿರಲಿ ಅವರ ಪಾದ ಪೂಜೆ ಮಾಡಿ ಮತಯಾಚಿಸುವೆ ಎಂದರು.