ರಾಮಾಯಣದಲ್ಲಿ ಶ್ರೀರಾಮನ ಭಕ್ತಳಾದ ಶಬರಿ ವನವಾಸಕ್ಕೆ ಬಂದಿದ್ದ ರಾಮನ ದರ್ಶನ ಪಡೆಯಬೇಕು ಎಂದು ನಿರ್ಧರಿಸಿದ್ದಳು. ಬೆಟ್ಟ ಸುತ್ತಿ ಬರುವ ರಾಮನ ದಣಿವಿಗೆ ಬುಟ್ಟಿಯ ತುಂಬಾ ಬೋರೆಹಣ್ಣನ್ನು ಇಟ್ಟುಕೊಂಡು ಕಾಯುತ್ತಿರಲು ಸೀತೆಯ ಅನ್ವೇಷಣೆಯಲ್ಲಿ ದುಃಖಿತನಾದ ರಾಮನನ್ನು ಆದರಪೂರ್ವಕವಾಗಿ ತನ್ನ ಕುಟೀರಕ್ಕೆ ಬರ ಮಾಡಿಕೊಂಡು ಧನ್ಯತೆಯನ್ನು ಅನುಭವಿಸಿದಳು.

ರಾಮನ ಅತಿಥಿ ಸತ್ಕಾರಕ್ಕೆ ಬೋರೆಹಣ್ಣನ್ನು ಕಚ್ಚಿ ಸಿಹಿ ಇದೆಯೇ ಎಂದು ಪರೀಕ್ಷಿಸಿ ಒಳ್ಳೆಯ ಹಣ್ಣನ್ನು ಕೊಡುತ್ತಿದ್ದಳು. ಈ ರೀತಿಯ ಕಲ್ಮಶವಿರದ ಭಕ್ತಿಯಿಂದ ಇಳಿವಯಸ್ಸಿನಲ್ಲೂ ಆ ದಟ್ಟ ಅರಣ್ಯದಲ್ಲಿಯೇ ಕುಳಿತು ಕಾಯುತ್ತಿದ್ದಳು.ಹಾಗಾಗಿ ಆ ಬೆಟ್ಟಕ್ಕೆ ಶಬರಿಮಲೆ ಎಂಬ ಹೆಸರು ಬಂತು.

RELATED ARTICLES  ಬಸವರಾಜ ಹೊರಟ್ಟಿಯವರ ಕಾರು ಹಾಗೂ ಬೈಕ್ ಅಪಘಾತ

ಪವಿತ್ರ ಹದಿನೆಂಟು ಮೆಟ್ಟಿಲು

ವಿಶ್ವದ ಕ್ಷೇತ್ರಾರಾಧನೆಗಳಲ್ಲಿ ಸುಂದರವಾದ ಚಿಂತನಾರೂಪ ಪವಿತ್ರ ಹದಿನೆಂಟು ಮೆಟ್ಟಿಲು. ಸುತ್ತ ಇರುವ ಹದಿನೆಂಟು ಬೆಟ್ಟಗಳನ್ನೂ ಪ್ರತಿನಿಧಿಸುತ್ತದೆ. ನೂರಾ ಎಂಟುನಲ್ಲಿರುವ ಶೂನ್ಯವನ್ನು ತೆಗೆದರೆ ಮತ್ತು ಎಂಟು ಹತ್ತಿರವಾಗುತ್ತದೆ. ಜೀವಾತ್ಮ ಮತ್ತು ಪರಮಾತ್ಮಗಳು ಸುಲಭವಾಗಿ ಕೂಡುತ್ತದೆ.

ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು, ಅನಂತರ ಎಂಟು ಮೆಟ್ಟಿಲು ಅಷ್ಟರಾಗಗಳು (ಕಾಮ, ಕ್ರೋಧ, ಮದ, ಮೋಹ, ಮಾತ್ಸರ್ಯ, ಲೋಭ, ಅಸೂಯೆ, ಡಂಭ) ಪ್ರತಿನಿಧಿಸುತ್ತದೆ. ಅನಂತರದ ಮೂರು ಮೆಟ್ಟಿಲುಗಳು ಮೂರು ಗುಣಗಳನ್ನು (ಸತ್ವ, ರಜಸ್ಸು, ,ತಮಸ್ಸು) ಸೂಚಿಸುತ್ತದೆ. ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆಯ ಸಂಕೇತ. ಈ ಹದಿನೆಂಟು ಮೆಟ್ಟಿಲುಗಳನ್ನು ಹತ್ತುವುದರಿಂದ ಪ್ರಾಪಂಚಿಕ ಬಂಧಗಳನ್ನು ಕಳಚಿಕೊಂಡು ಸರ್ವಶಕ್ತನಾದ ಸೃಷ್ಟಿಕರ್ತನಿಗೆ ಹತ್ತಿರವಾಗುತ್ತೇವೆ ಎಂಬ ನಂಬಿಕೆ ಇದೆ.

RELATED ARTICLES  ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ - ಮೇಲ್ಮನವಿ ಅಂಗೀಕಾರ - ಶ್ರೀಮಠದ ಆಡಳಿತ ಶುದ್ಧ ಎಂದು ಮತ್ತೊಮ್ಮೆ ದೃಢ.

ದೇಶ ವಿದೇಶಗಳಿಂದ ಕೋಟಿ ಕೋಟಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಶಬರಿಮಲೆಯ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯದ ಸಂಕೇತ. ವ್ರತಧಾರಿಗಳು ಮಾನಸಿಕ ಕಲ್ಮಶಗಳನ್ನೆಲ್ಲ ದಹಿಸಿ, ಅವರನ್ನು ಪುನೀತರನ್ನಾಗಿಸುವ ಮಹಾಮಹಿಮ ಆತ.