ಶಿವಮೊಗ್ಗ: ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರಕಾರ ಸಾರ್ವಜನಿಕ ಚರ್ಚೆಗೊಳಪಡಿಸಬೇಕೆಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಹಯೋಗದಲ್ಲಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿವಿಧ ಸಮಾಜಗಳು ಒಗ್ಗೂಡಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದವು.

ಆಯೋಗ ವರದಿಯು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧವಾಗಿ ರಚಿಸಲಾಗಿದೆ. ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳಲ್ಲಿನ ಒಂದು ಉಪಜಾತಿ ಹಿತಾಸಕ್ತಿ ಕಾಪಾಡಲು ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದು ಖಂಡನೀಯ. ಈ ವರದಿಯಿಂದ ದಲಿತರಲ್ಲಿ ಪರಸ್ಪರ ದ್ವೇಷ, ಅಸೂಯೆ, ಅವಹೇಳನ ಹಾಗು ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕಿದಂತಾಗಿದೆ. ದಲಿತ ಸಮುದಾಯಗಳು ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ವಸ್ತುನಿಷ್ಟೆ ಸಮಿಕ್ಷೆಯನ್ನು ಮಾಡುವುದನ್ನು ಬಿಟ್ಟು ತರಾತುರಿಯಲ್ಲಿ ಸಭೆ ನಡೆಸಿ ಪಟ್ಟಭದ್ರ ಹಿತಾಸಕ್ತಿಗಳ ಅಭಿಪ್ರಾಯ ಪಡೆದು ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ಪ್ರಮುಖರನ್ನು ಕಡೆಗಣಿಸಿ ನೀಡಿರುವ ವರದಿ ಅವೈಜ್ಞಾನಿಕ ಹಾಗು ಏಕರೂಪವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ವರದಿಯು ಬಹಿರಂಗವಾಗಿ ಚರ್ಚೆ ಆಗದಿರುವುದು ವಿಷಾಧನೀಯ. ಕೆಲ ರಾಜಕಿಯ ಹಿತಾಸಕ್ತಿಗಳ ಪ್ರಚೋದನೆಯಿಂದ ಕೆಲ ದಲಿತ ಸಮುದಾಯಗಳಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES  ಮಾಧ್ಯಮಗಳು ರಾಜಕೀಯೇತರ ಸುದ್ದಿಗಳಿಗೂ ಪ್ರಮುಖ್ಯತೆ ನೀಡಬೇಕು: ಪ್ರಧಾನಿ

ಸರಕಾರ ಆಯೋಗದ ವರಿದಿಯನ್ನು ಅಂತಿಮ ತೀರ್ಮಾನಕ್ಕೆ ತರುವ ಮೊದಲು ಇತರೆ ಸಮುದಾಯಗಳೊಂದಿಗೆ ಚರ್ಚಿಸದಿದ್ದಲ್ಲಿ 99 ಜಾತಿಗಳ 76 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಪರಿಶಿಷ್ಟ ಜಾತಿಗಳ ದಲಿತ ಸಮುದಾಯಗಳನ್ನು ಛಿದ್ರಗೊಳಿಸಿದಂತಾಗುತ್ತದೆ. ಸಮುದಾಯಗಳ ಐಕ್ಯತೆ ಬಯಸಿದ್ದ ಬಾಬಾ ಸಾಹೇಬರಿಗೆ ಅವಮಾನ ಮಾಡುವಂತಾಗುತ್ತದೆ. ಇದೇ ವೇಳೆ ಮೀಸಲಾತಿಯ ಮಿತಿ ಶೇ: 50 ರಿಂದ 75 ಕ್ಕೇರಿಸಬೇಕೆಂದು ಒತ್ತಾಯಿಸಿದರು.

RELATED ARTICLES  ರಾಜ್ಯೋತ್ಸವ ಪ್ರಶಸ್ತಿ ಯಾಜಿಯವರ ಕಲಾ ಪ್ರತಿಭೆಗೆ ಸಂದ ಗೌರವವಾಗಿದೆ!

ನಗರಸಭಾಧ್ಯಕ್ಷೆ ಎಸ್.ಹಾಲಮ್ಮ ಸೇರಿದಂತೆ ವಿವಿಧ ಸಮಾಜದ ಎಸ್.ಕೃಷ್ಣಮೂರ್ತಿ, ಜಿ.ಆನಂದಕುಮಾರ್, ಆನಂದ, ವಿಷ್ಣುನಾಯ್ಕ ಮತ್ತಿತರರು ಮಿನಿವಿಧಾಸೌಧ ಮುಂಭಾಗ ಜಮಾಯಿಸಿ ತಹಶೀಲ್ದಾರ್ ಮಂಜಾನಾಯ್ಕ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.