Home State News ಮಾಧ್ಯಮಗಳು ರಾಜಕೀಯೇತರ ಸುದ್ದಿಗಳಿಗೂ ಪ್ರಮುಖ್ಯತೆ ನೀಡಬೇಕು: ಪ್ರಧಾನಿ

ಮಾಧ್ಯಮಗಳು ರಾಜಕೀಯೇತರ ಸುದ್ದಿಗಳಿಗೂ ಪ್ರಮುಖ್ಯತೆ ನೀಡಬೇಕು: ಪ್ರಧಾನಿ

ಚೆನ್ನೈ: ಚುನಾಯಿತ ಸರಕಾರದಂತೆಯೇ ಮಾಧ್ಯಮಕ್ಕೂ ಸಾಮಾಜಿಕ ಜವಾಬ್ದಾರಿಯಿದ್ದು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಮಾಧ್ಯಮಗಳು ಯಾವುದೇ ಬಲವಂತದ ಬದಲು ಶಾಂತಿಯುತ ಮಾರ್ಗವನ್ನು ಹಿಡಿಯಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ತಮಿಳು ದೈನಿಕ ‘ಡೈಲಿ ತಂತಿ’ಯ 75ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊoಡು ಮಾತನಡಿದ ಪ್ರಧಾನಿ ‘‘ಇಂದಿನ ಭಾರತವನ್ನು 125 ಕೋಟಿ ಮಂದಿ ಪ್ರತಿನಿಧಿಸುತ್ತಾರೆ. ಮಾಧ್ಯಮಗಳಲ್ಲಿ ಹೆಚ್ಚಾಗಿ ರಾಜಕೀಯ ವಿಚಾರಗಳೇ ರಾರಾಜಿಸುತ್ತಿವೆ. ಆದರೆ ದೇಶದಲ್ಲಿ ರಾಜಕೀಯವನ್ನೂ ಮೀರಿ ಸುದ್ದಿಗಳು ಘಟಿಸುತ್ತಿವೆ’’ ಎಂದು ಹೇಳಿದ್ದಾರೆ.

ಇದೇ ವೇಳೆ ‘‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳ ಸಂಪಾದಕರು ಜಾಣತನದಿಂದ ಬಳಸಬೇಕಿದೆ. ಬರವಣಿಗೆ ಸ್ವಾತಂತ್ರ್ಯವಿದೆ ಎಂದು ಸತ್ಯಕ್ಕೆ ದೂರವಾದದ್ದನೆಲ್ಲಾ ಬರೆಯುವಂತಿಲ್ಲ’’ ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ವೇಳೆ ಭೂಮಂಡಲದ ಮೇಲೆ ಪ್ರಭಾವ ಬೀರುತ್ತಿರುವ ಹವಾಮಾನ ಬದಲಾವಣೆಯಂಥ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲು ಪತ್ರಕರ್ತರಿಗೆ ಪ್ರಧಾನಿ ಕರೆ ನೀಡಿದ್ದಾರೆ. ‘‘ಜಗತ್ತಿನಾದ್ಯಂತ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಮಟ್ಟದಲ್ಲಿ ಸಂಭವಿಸುತ್ತಿವೆ. ಹವಾಮಾನ ಬದಲವಣೆ ವಿರುದ್ಧ ಮಾಧ್ಯಮಗಳು ಯುದ್ಧ ಸಾರಲಾರವೇ? ಈ ನಿಟ್ಟಿಿನಲ್ಲಿ ಹವಾಮಾನ ಬದಲಾವಣೆಗೆ ಹೆಚ್ಚಿನ ಒತ್ತು ನೀಡಿ ಜಾಗೃತಿ ಮೂಡಿಸಲು ಮಾಧ್ಯಮಗಳು ಮುಂದೆ ಬರಲಾರವೇ?’’ ಎಂದು ಪ್ರಧಾನಿ ಕೇಳಿದ್ದಾರೆ.

ಮಹಾತ್ಮಾ ಗಾಂಧಿಯ ಮಾತನ್ನು ಉಲ್ಲೇಖಿಸಿದ ಪ್ರಧಾನಿ ‘‘ಮಾಧ್ಯಮವನ್ನು ನಾಲ್ಕನೇ ಎಸ್ಟೇಟ್ ಎನ್ನಲಾಗುತ್ತದೆ. ನಿಜಕ್ಕೂ ಇದೊಂದು ಅಧಿಕಾರವಿದ್ದಂತೆ ಆದರೆ ಅದರೆ ದುರ್ಬಳಕೆ ಅಪರಾಧ’’ ಎಂದು ಹೇಳಿದ್ದಾರೆ.

ದಿನದ ಮಟ್ಟಿಗೆ ತಮಿಳುನಾಡು ಭೇಟಿಯಲ್ಲಿರುವ ಪ್ರಧಾನಿ ಮಾಜಿ ಮುಖ್ಯಮಂತ್ರಿ ಕರುಣಾ ನಿಧಿರನ್ನು ಭೇಟಿಯಾಗಲಿದ್ದಾರೆ.