ಕೆರೆಮನೆ ಶಂಭು ಹೆಗಡೆ ರಾಷ್ಠ್ರೀಯ ನಾಟ್ಯೋತ್ಸವದ ಮೂರನೇ ದಿನ ದಿ: 29/01/2018 ಸೋಮವಾರದಂದು ಪೂರ್ವಾಹ್ನ ಹಿರಿಯ ಯಕ್ಷಗಾನ ಭಾಗವತರು, ಸಂಘಟಕರು ಆದ ಶ್ರೀ ಕಡತೋಕಾ ಮಂಜುನಾಥ ಭಾಗವತರು ಮತ್ತು ಹಿರಿಯ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಹಾರಾಡಿ ಕುಷ್ಟ ಗಾಣಿಗ ಇವರ ಕಲಾಜೀವನದ ಅಪೂರ್ವ ಪೂರ್ವ ಸ್ಮರಣೆ ಖ್ಯಾತ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ಕಡತೋಕಾ ಮಂಜುನಾಥ ಭಾಗವತರ ಬಗ್ಗೆ ಶ್ರೀ ನಾರಾಯಣ ಯಾಜಿಯವರು ಉಪನ್ಯಾಸ ಮಂಡಿಸುವರು. ಶ್ರೀ ಹಾರಾಡಿ ಕುಷ್ಟ ಗಾಣಿಗರ ಬಗ್ಗೆ ಶ್ರೀ ಸದಾನಂದ ಐತಾಳ ಉಪನ್ಯಾಸ ಮಂಡಿಸುವರು.
ಅಪರಾಹ್ನದ ಕಾರ್ಯಕ್ರಮದಲ್ಲಿ ಡಾ. ನಿರಂಜನ ವಾನಳ್ಳಿಯವರ ಅಧ್ಯಕ್ಷತೆಯಲ್ಲಿ ಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಭಟ್, ಶ್ರೀ ಅನಂತ ವೈದ್ಯ, ಯಲ್ಲಾಪುರ, ಶ್ರೀ ಜಿ. ಎಂ. ಹೆಗಡೆ ತಾರಗೋಡು, ಶಿರಸಿ, ಇವರಿಗೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನದಿಂದ ಪುರಸ್ಕರಿಸಲಿದ್ದೇವೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರವೀಂದ್ರ ಭಟ್ ಐನಕೈ, ಶ್ರೀ ಈಶ್ವರ ನಾಯ್ಕ , ಶ್ರೀ ಸೂರಾಲು ದೇವಿಪ್ರಸಾದ ತಂತ್ರಿ, ಉಡುಪಿ, ಶ್ರೀ ಎಂ. ವಿ. ಹೆಗಡೆ, ಕೆರೆಮನೆ, ಶ್ರೀ ಕೃಷ್ಣಮೂರ್ತಿ ಭಟ್ ಶಿವಾನಿ, ಶ್ರೀ ಶಂಭು ಗೌಡ ಅಡಿಮನೆ, ಪಾಲ್ಗೊಳ್ಳುವರು.
ಸಾಂಸ್ಕೃತಿಕ ಸಿಂಚನದಲ್ಲಿ ಪುಣೆಯಿಂದ ಆಗಮಿಸಲಿರುವ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಶ್ರೀಮತಿ ಆರತಿ ಅಂಕಲಿಕರ್‍ರವರ ಗಾಯನ ಪ್ರಸ್ತುತಿಗೊಳ್ಳಲಿದೆ. ನವದೆಹಲಿಯಿಂದ ಆಗಮಿಸಲಿರುವ ಖ್ಯಾತ ಕೂಚಿಪುಡಿ ನೃತ್ಯಗಾರ್ತಿ ಮತ್ತು ನೃತ್ಯಸಂಯೋಜಕಿಯಾದ ವನಶ್ರೀ ರಾವ್ ಮತ್ತು ತಂಡದವರಿಂದ ತ್ರಿಪುರ ಸುರ ಸಂಹಾರ, ಶಿವ ಜ್ಯೋತಿರ್ಲಿಂಗಂ, ಅಭಿಮನ್ಯು ವಧಾ ಮತ್ತು ಮಹಿಷಾಸುರ ಮರ್ಧಿನಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಅಂತಿಮವಾಗಿ ಗುಜರಾತ್‍ನಿಂದ ಆಗಮಿಸಿದ ಸಿದ್ಧಿಧಮಾಲ್ ನೃತ್ಯ ತಂಡದಿಂದ ಜಾನಪದ ತಳಹದಿಯ ಅದ್ಭುತ ಸಿದ್ಧಿಧಮಾಲ್ ಗುಜರಾತಿ ನೃತ್ಯ ಪ್ರದರ್ಶನಗೊಳ್ಳಲಿದೆ.