ಹೌದು! ಭಾರತದ ಮಾಜಿ ಕಪ್ತಾನ ಬಂಗಾಳದ ಹುಲಿ ಸೌರವ್ ಗಂಗೂಲಿ ಅವರು ತಮ್ಮ ಆತ್ಮಕಥನ ‘ಟೆಲ್ ಆಲ್ ಬುಕ್’ ನಲ್ಲಿ ಧೋನಿ ಅವರ ಬಗೆಗಿನ ಯಾರೊಬ್ಬರಿಗೂ ಗೊತ್ತಿಲ್ಲದ ಗುಟ್ಟೊಂದನ್ನು ಬಹಿರಂಗಪಡಿಸಿದ್ದಾರೆ.

ಸೌರವ್ ಗಂಗೂಲಿ 2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡುವುದಕ್ಕೆ ವಿದಾಯ ಹೇಳಿದರು. ಆಸ್ಟ್ರೇಲಿಯದ ವಿರುದ್ಧ ನಾಗ್ಪುರದಲ್ಲಿ ನಡೆದ 4ನೇ ಟೆಸ್ಟ್ ಅವರ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ ಮೈದಾನದಲ್ಲಿ ನಡೆದ ಘಟನೆಯೊಂದನ್ನು ಅವರು ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ನಾವು ಟಿವಿಯಲ್ಲಿ ಏನು ನೋಡುತ್ತೇವೆಯೋ ಅದಕ್ಕಿಂತ ಬಹಳಷ್ಟು ಹೆಚ್ಚಿನ ಸಂಗತಿಗಳು ಮೈದಾನದಲ್ಲಿ ನಡೆಯುತ್ತವೆ ಎಂದು ಅವರು ಇಲ್ಲಿ ಬಹಿರಂಗಪಡಿಸಿದ್ದಾರೆ.

ಆ ದಿನ ಪಂದ್ಯ ನಡೆಯುತ್ತಿರುವಾಗ ಧೋನಿ ಮತ್ತು ತಮ್ಮ ನಡುವೆ ಏನು ನಡೆದಿತ್ತು ಎಂಬುದನ್ನು ಅವರು ಹೀಗೆ ಬಿಚ್ಚಿಟ್ಟಿದ್ದಾರೆ. ‘ ಇನ್ನೇನು ಪಂದ್ಯ ಕೊನೆಯ ಹಂತಕ್ಕೆ ಬರುತ್ತಿರಬೇಕಾದರೆ ಆಶ್ಚರ್ಯಕರವಾಗಿ ನನ್ನ ಹತ್ತಿರ ಬಂದು ಈ ಪಂದ್ಯ ಕೊನೆಯ ಹಂತದಲ್ಲಿ ಈಗ ಇದನ್ನು ನೀವು ಮುನ್ನಡೆಸಿಕೊಡಬೇಕೆಂದು’ ಕೇಳಿದರು.

RELATED ARTICLES  ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ.

‘ಆದರೆ ಪಂದ್ಯ ಪ್ರಾರಂಭವಾಗುವ ಮುಂಚೆಯೂ ಅವರು ನನ್ನತ್ರ ಬಂದು ಇಂದು ಪಂದ್ಯವನ್ನು ನೀವೇ ಮುನ್ನಡೆಸಿಕೊಂಡು ಹೋಗಬೇಕು ಎಂದು ಕೇಳಿದ್ದರು. ಆದರೆ ನಾನು ಇದನ್ನು ತಿರಸ್ಕರಿಸಿದ್ದೆ. ಆದರೆ ಮ್ಯಾಚ್ ಮಧ್ಯದಲ್ಲಿ ಮತ್ತೆ ಅವರು ನನ್ನ ಬಳಿ ಬಂದಾಗ ನನಗೆ ಬೇಡ ಎನ್ನಲಾಗಲಿಲ್ಲ’ ಎಂದು ಅವರು ತಮ್ಮ ಪುಸ್ತಕದ ಒಂದು ಭಾಗದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES  ರೈಲಿನಿಂದ ಬಿದ್ದು ಕಬ್ಬಿಣ ಸಲಾಕೆಗೆ ನೇತಾಡುತ್ತಿದ್ದ

‘ಆಸಕ್ತಿಕರ ಸಂಗತಿಯೆಂದರೆ 8 ವರುಷಗಳ ಹಿಂದೆ ಇದೇ ದಿನ ನಾನು ಭಾರತ ತಂಡದ ನಾಯಕನಾಗಿ ಮೊದಲ ಪಂದ್ಯ ಆಡಿದ್ದೆ. ಧೋನಿ ಮತ್ತೆ ಕೇಳಿಕೊಂಡ ಮೇಲೆ ನಾನು ಆಸ್ಟ್ರೇಲಿಯ ಕೊನೆಯ ವಿಕೆಟ್ ಸಂದರ್ಭದಲ್ಲಿ ಬೌಲಿಂಗ್ ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಮತ್ತು ಫೀಲ್ಡಿಂಗ್ ನಲ್ಲಿ ಸ್ಥಳಬದಲಾವಣೆಗಳನ್ನು ಮಾಡಿದೆ. ಆದರೆ 3 ಓವರ್ ಗಳ ನಂತರ ನಾನು ನಾಯಕತ್ವವನ್ನು ಮತ್ತೆ ಧೋನಿಗೆ ವಾಪಾಸ್ ಮಾಡಿದೆ. ನಿಜ ಹೇಳಬೇಕೆಂದರೆ ನನಗೆ ಆ ಸಂದರ್ಭದಲ್ಲಿ ಆಟದ ಮೇಲೆ ಗಮನಹರಿಸಲು ಕಷ್ಟವಾಯಿತು. ಇದು ನಿನ್ನ ಕೆಲಸ ಧೋನಿ ಎಂದು ಅವರಿಗೆ ಹೇಳಿದೆ. ಇಬ್ಬರೂ ಮುಗುಳ್ನಕ್ಕೆವು’ ಎಂದು ಅವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.