Home Special News ಶಶಿಕುಮಾರ ಅವರಿಗೆ ಪೊಲೀಸ್ ನಿರೀಕ್ಷಕರಾಗಿ ಬಡ್ತಿ.

ಶಶಿಕುಮಾರ ಅವರಿಗೆ ಪೊಲೀಸ್ ನಿರೀಕ್ಷಕರಾಗಿ ಬಡ್ತಿ.

ಹೊನ್ನಾವರ: ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕುಮಾರ್ ಸಿ. ಆರ್ ರವರು ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿ ಲೋಕಾಯುಕ್ತಕ್ಕೆ ನೇಮಕವಾಗಿರುವುದಾಗಿ ವರದಿಯಾಗಿದೆ.

ಹೊನ್ನಾವರದಲ್ಲಿ ಕಳೆದ ಎರಡು ವರ್ಷಕ್ಕಿಂತ
ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಉತ್ತಮ ಅಧಿಕಾರಿ ಎಂದು ಹೆಸರು ಮಾಡಿರುವ ಇವರು ಜಿಲ್ಲೆಯ ಹಲವು ಕಡೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಜಿಲ್ಲೆಯ ಸದಾಶಿವಗಡ (ಚಿತ್ತಾಕುಲ) ಮಲ್ಲಾಪುರ, ಕುಮಟಾ, ಶಿರಸಿ ಮಾರ್ಕೆಟ್ ಹಾಲಿ ಹೊನ್ನಾವರದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.