ಆತ್ಮೀಯ ಹಿರಿ ಕಿರಿಯ ಬಂಧುಗಳೇ..ಶಿಕ್ಷಣದ ಕೆಲವೇ ಮಜಲುಗಳನ್ನು ಕಂಡ ನಾನು ಮಕ್ಕಳಿಗೆ ವಿವಿಧ ವಿಷಯಗಳ ಬೋಧನೆಯ ಸಮಯದಲ್ಲಿ ಎದುರಿಸಿದ ಕೆಲವು ಸಮಸ್ಯೆಗಳ ಹಾಗೂ ಜೀವನ ಶಿಕ್ಷಣದ ಅಗತ್ಯತೆಗಳ ಬಗ್ಗೆ ಚಿಂತನೆಯನ್ನು ನಡೆಸಿದೆ.ಹಾಗೂ ಜೀವನೋಪಯೋಗಕ್ಕೆ ಶಿಕ್ಷಣ ಯಾವ ರೀತಿ ಬದಲಾಗಬೇಕು? ಎಂಬ ವಿಷಯದ ಕುರಿತಾಗಿ ಹಿರಿಯ ಶಿಕ್ಷಕರನ್ನು,ಸಾಧಕರನ್ನು ಹಾಗೂ ಸಾಮಾನ್ಯರನ್ನು ಭೇಟಿಮಾಡಿ ಅನೇಕ ವಿಷಯಗಳನ್ನು ಸಂಗ್ರಹಿಸಿದೆ. ನನ್ನ ಜೀವನದ ಹೊಸ ಯೋಜನೆಗಾಗಿ ಸಿದ್ಧಗೊಳಿಸುತ್ತಿದ್ದ ಈ ಕಾರ್ಯದಲ್ಲಿ ನನ್ನ ಸ್ನೇಹಿತನ ಸಹಾಯದಿಂದ ಸಿಕ್ಕ ಅನೇಕ ಪುಸ್ತಕಗಳನ್ನು ಓದಿದೆ ಆ ಎಲ್ಲ ಪ್ರಯತ್ನಗಳ ಕಿರು ನುಡಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ನನ್ನ ಸಂಗ್ರಹವಿಷಯ ಹಾಗೂ ಬದಲಾವಣೆಯ ಬಗೆಗೆ ಮುಕ್ತ ಚರ್ಚೆಯ ಅಗತ್ಯವಿದ್ದು ಈ ಮೂಲಕ ನನ್ನ ಅನಿಸಿಕೆಯನ್ನು ಬಿತ್ತರಿಸುತ್ತಿದ್ದೇನೆ.
ಸಮಸ್ಯೆಯ ಅಂದ ಅರಿಯದೇ ಮುಂದುವರಿಯುವುದು ಹೇಗೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ಶಿಕ್ಷಕರನ್ನು ಕಾಡುವುದುಂಟು.ಅದೆಷ್ಟೋ ಮಕ್ಕಳ ವರ್ತನೆ ಕೆಲ ಸಮಯದಲ್ಲಿ ಇದೇಕೆ ಹೀಗೆ? ಎಂಬುದಕ್ಕೆ ಕೊನೆಯವರೆಗೂ ಉತ್ತರವೇ ಸಿಗುವುದಿಲ್ಲ.ಆದರೆ ಅಲ್ಲಿ ಅಗತ್ಯವಿರುವ ಬದಲಾವಣೆಯ ಬಗ್ಗೆ ನಾವು ಮನಸ್ಸುಮಾಡಿದಾಗ ಮಾತ್ರ ಹೊಸದಾರಿ ನಮಗೆ ಸಿಗುತ್ತದೆ.ಕೆಲವೊಂದು ಭಾಷಾ  ವಿಷಯದ ಸಮಸ್ಯೆಗಳಿರಬಹುದು,ಗಣಿತ ,ಸಮಾಜ,ಹಾಗೂ ವಿಜ್ಞಾನ ವಿಷಯಗಳ ಮಂಡನೆ ಹಾಗೂ ಕೆಲವು ಹೊಸ ದಾರಿಗಳು ಮಕ್ಕಳಿಗೆ ಜೀವನ ಶಿಕ್ಷಣವೇ ಆಗಬಹುದು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯ ದಾರಿಯಲ್ಲಿಯೇ ಸಾಗಿದರೆ ಅದು ಅಸಂಭವ ಎನ್ನುವುದು ಸಾಧಕರ,ಪಾಲಕರ,ಶಿಕ್ಷಣ ಜ್ಞಾನಿಗಳ ಅಭಿಮತ. ಹಾಗಾದರೆ ಆ ಸಮಸ್ಯೆಗಳಾವವು ಅವುಗಳನ್ನು ನಾವು ಎದುರಿಸುವುದು ಹೇಗೆ? ಎಂಬುದರ ಕುರಿತಾದ ಚಿಂತನೆ ಇಲ್ಲಿದೆ.

ಭಾಷೆ
ಭಾಷಾ ವಿಷಯಗಳಲ್ಲಿ ಎಲ್ಲವೂ ಸಾಮಾನ್ಯ.ಮಗು ಪ್ರಾಥಮಿಕ ಶಾಲಾ ಹಂತದಲ್ಲಿ ಎಲ್ಲ ಭಾಷೆಗಳನ್ನೂ ಕಲಿಯಬಲ್ಲ ಎನ್ನುತ್ತೆ ವರದಿ.ಹಾಗಾದರೆ ಎಲ್ಲ ಭಾಷೆಗಳನ್ನೂ ಕಲಿಯಬಲ್ಲ ಮಕ್ಕಳು ಕನ್ನಡ,ಇಂಗ್ಲೀಷ್,ಹಿಂದಿ ಇಂತಹ ಬಾಷೆಗಳಲ್ಲಿ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.ಅವುಗಳಲ್ಲಿ ಸಾಮಾನ್ಯವಾದವು ಮಕ್ಕಳಿಗೆ ಭಾಷಾವಿಷಯದಲ್ಲಿ ಅಕ್ಷರವನ್ನೇ ಬರೆಯಲು ಬರುವುದಿಲ್ಲ ಎಂಬುದು. ಭಾಷಾ ವಿಷಯವನ್ನು ಓದಲೂ ಬರದ 42.03ಪ್ರತಿಷತ ಮಕ್ಕಳಿದ್ದಾರೆ ಎನ್ನುತ್ತೆ ಶೈಕ್ಷಣಿಕ ವರದಿ. ಮುಂದಿನದು ಭಾಷೆಗೆ ಸಂಬಂಧಿಸಿ ವ್ಯಾಕರಣದ ತೊಂದರೆ. ಈ ಎಲ್ಲಾ ತೊಂದರೆಗಳನ್ನು ನಿಭಾಯಿಸುವುದು ಹೇಗೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ?
ಇಂದಿನ ಶಿಕ್ಷಣ ಪದ್ದತಿಯ ರೀತಿಯಲ್ಲಿ ಹೋದರೆ ಒಬ್ಬರಿಗೊಬ್ಬರು ಹೇಳಿಕೊಳ್ಳುವುದೇ ಬಿಟ್ಟರೆ ಮಕ್ಕಳ ಅಭಿವೃದ್ಧಿ ಮಾತ್ರ ಶೂನ್ಯ. ನಮಗಿರುವ ತೊಂದರೆ ಹಾಗೂ  ಇದಕ್ಕೆ ಕೆಲ ಪುಸ್ತಕಗಳೂ ಹಾಗೂ ಕೆಲವರು ಸೂಚಿಸಿದ ಪರಿಹಾರ ಇಲ್ಲಿದೆ.
ಭಾಷಾ ಬೋಧನೆಯಲ್ಲಿ ನಾವು ಆಲಿಸುವಿಕೆಗೆ ಮೊದಲು ಅವಕಾಶ ನೀಡಬೇಕು. ಆದರೆ ನಾವು ಓದಿಸುವ ಪ್ರಯತ್ನ ಮಾಡುತ್ತೇವೆ. ಹಾಗಾಗಿ ಆಲಿಸುವಿಕೆಯನ್ನು ಮಕ್ಕಳಿಗೆ ಬೆಳೆಸೋಣ.ಅದೂ ಕೇವಲ ಪುಸ್ತಕದ ಪಠ್ಯವಾಗದಿರಲಿ.ಹೊಸತನ್ನು ಕಲಿಯಬೇಕು ಎಂದಾದರೆ ಹೊರ ಪ್ರಪಂಚಕ್ಕೆ ಮಕ್ಕಳನ್ನು ಕೊಂಡೊಯ್ಯಿರಿ.

RELATED ARTICLES  ನಿರಶನ ಮತ್ತು ಹೆಚ್ಚಿನ ಕಾಯಕ್ಲೇಶ ಯೋಗಾಭ್ಯಾಸದ ಸಾಧಕರಿಗೆ ವರ್ಜ್ಯವಾಗಿದೆ.

ಭಾಷೆಯ ಕಲಿಕೆಯಲ್ಲಿ ಪ್ರಾರಂಭದಲ್ಲಿ ಅಕ್ಷರಕ್ಕೆ ಮಹತ್ವ ನೀಡಬೇಕು. ಆದರೆ ನಮ್ಮ ವ್ಯವಸ್ಥೆಯಲ್ಲಿ ನಾವು ಪಾಠಕ್ಕೆ ಮಹತ್ವ ನೀಡುತ್ತೇವೆ. ನಿಧಾನಕ್ಕೆ ಬರವಣಿಗೆಗೆ ಅವಕಾಶ ಕೊಡುವುದಾದಲ್ಲಿ ಅಕ್ಷರ ಬರವಣಿಗೆಯ ಬಗ್ಗೆ ಕಾಳಜಿ ನೀಡಿ…ಉದಾಹರಣೆಗೆ ಮಗು ತ,ಹ,ಳ ಇಂತಹ ಅಕ್ಷರಗಳನ್ನು ತಪ್ಪಾಗಿ ಬರೆಯುತ್ತಾನೆ. ಅವುಗಳನ್ನು ನೋಡಿ.ಹುಡುಕಿ ಸರಿಪಡಿಸಬಹುದು.

ಭಾಷೆಯ ಕಲಿಕೆಯಲ್ಲಿ ಉಚ್ಚಾರಕ್ಕೆ ಮಹತ್ವ ನೀಡುವ ಬದಲು. ಪ್ರಶ್ನೋತ್ತರಕ್ಕೆ ಮಹತ್ವ ನೀಡುತ್ತೇವೆ. ಪ್ರಶ್ನೋತ್ತರವನ್ನು ಮಗುವೇ ಸ್ವಂತ ಬರೆಯುವಂತೆ ಅಥೈಸುವಿಕೆಯ ಪ್ರಯತ್ನ ಮಾಡಿ. ನಿಜವಾಗಿಯೂ ೯ ರಿಂದ ೧೦ ವರ್ಷದ ಮಗು ಸ್ವಂತ ಉತ್ತರ ಬರೆಯಬಲ್ಲದು.

ಭಾಷೆ ಸಂವಹನದ ಮಾದ್ಯಮವಾಗಬೇಕಿತ್ತು ನಮ್ಮ ವ್ಯವಸ್ಥೆ ಕಂಠಪಾಠಕ್ಕೆ ಮಹತ್ವ ನೀಡುತ್ತೆ. ಪುಸ್ಥಕದಲ್ಲಿರುವುದು ಪಟ್ಟಿ ಸೇರಿತು,ಪಟ್ಟಿಯಲ್ಲಿರುವುದು ಉತ್ತರ ಪತ್ರಿಕೆ ಸೇರಿತು .ಇದು ತಲೆಗೇ ಸೇರಲೇ ಇಲ್ಲ ಅಂತ ಹಾಸ್ಯ ಮಾಡಿ ಬರೀತಾರೆ ಶಿಕ್ಷಣ ಪ್ರೇಮಿ ಡಾ.ರೆಡ್ಡಿ. ಹೀಗಾಗಿ ಹೊಸ ವಿಚಾರ ಕಲಿಯಲು ಮಗುವಿಗೆ ಅವಕಾಶ ಮಾಡಿಕೊಡಿ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಭಾಷೆಯಲ್ಲಿ ಸಮರ್ಪಕವಾಗುವುದು ಸ್ವಲ್ಪಮಟ್ಟಿಗೆ ಆಳದ ಅಧ್ಯಯನದಿಂದ.ನಾವು ಮಕ್ಕಳನ್ನು ಪುಸ್ಥಕ ಹಾಗೂ ಪಟ್ಟಿಗೇ ಸೀಮಿತಗೊಳಿಸುತ್ತಿದೆ. ಹೀಗಾಗಿ ಹೊಸ ಕಲಿಕೆಗೆ ಅವಕಾಶ ನೀಡಬೇಕು. ವಿಷಯಗಳನ್ನು ಹುಡುಕಲಿ ಎನ್ನುವುದು ಇದರ ಅರ್ಥ.ಪುಸ್ಥಕದಲ್ಲಿರುವ ಉತ್ತರ ಹುಡುಕಿ ಪರೀಕ್ಷೆ ಬರೆಯುವವನೂ ಪಿ ಎಚ್ ಡಿ ಮಾಡುತ್ತಾನೆ ಎನ್ನುತ್ತಾರೆ ಮನಶ್ಶಾಸ್ರಜ್ಞರು.

ಒಂದುವಿಷಯವಾಗಿ ಮಗುವಿಗೇ ಸ್ವತಂತ್ರವಾಗಿ ಮಾತನಾಡಲು ಬಿಡಿ,ಬರೆಯಲು ಬಿಡಿ ಆಗ ಹೊಸ ವಿಷಯಗಳ ಹುಡುಕಾಟ ಪ್ರಾರಂಭವಾಗುತ್ತೆ.

ಕವಿ,ಸಾಹಿತಿ,ವಾಗ್ಮಿಗಳನ್ನು ಪರಿಚಯಿಸಿ ನಿಮ್ಮ ಪ್ರಯತ್ನ ಮುಂದಿನ ಅವರ ಬದುಕನ್ನು ಹಸನಾಗಿಸುತ್ತೆ.

ಹೊಸ ಪುಸ್ಥಕವನ್ನು ಅದರ ವಿಶೇಷತೆಗಳನ್ನು ಮಕ್ಕಳಿಗೆ ತಿಳಿಸಿಕೊಡಿ. ಓದುವ ಹವ್ಯಾಸ ಶಾಲೆಯ ಹಾಗೂ ಇಂದಿನ ಶಿಕ್ಷಣಕ್ಕಿಂತ ಸಾವಿರ ಪಟ್ಟು ಉತ್ತಮ.

ಕವನ ರಚನೆ,ಆಶು ಭಾಷಣ,ಚುಟುಕಗಳು,ಚಿಂತನಗಳು,ಗಾದೆಯ ವಿಸ್ಥರಣೆ ಪುಸ್ತಕದಿಂದ ಹೊರಬರಲಿ.ಹೊಸದಾಗಿ ವಿವರಿಸಲು ಅವಕಾಶ ನೀಡಿ.ಗಿಳಿ ಪಾಠ ಆಗದಿರಲಿ.
ಅಂಕಗಳು ಕಡಿಮೆ ಬಂದರೂ ಚಿಂತೆಯಿಲ್ಲ ಹೊಸತು ಬರೆಯುವ ಮನಸ್ಸು ಮಾಡಲಿ ಆಗ ಮಾತ್ರ ಮಕ್ಕಳು ಕಂಟಪಾಠ ಬಿಟ್ಟು ಹೊರ ಜಗಕ್ಕೆ ಬರುತ್ತಾರೆ.
ಇದೆಲ್ಲವೂ ನೀವು ತಿಳಿದ ವಿಚಾರವೇ ಇರಬಹುದು.ಆದರೆ ನಾನು ಹಿರಿಯರಿಂದ ತಿಳಿದು ಓದಿ ಹಸದಾಗಿ ಅರಿತೆ.ಹಾಗಾಗಿ  ಇಲ್ಲಿ ಅಕ್ಷರ ರೂಪು ನೀಡಿದ್ದೇನೆ.ಭಾಷೆಯನ್ನು ಹೊರತುಪಡಿಸಿ ಇನ್ನು ಕೆಲ ವಿಷಯಗಳ ಹೊಸ ಕಲಿಕಾ ವಿಧಾನ ಹಾಗೂ ಜೀವನ ಹೊಂದಿಕೆಯ ಶಿಕ್ಷಣದ ಬಗ್ಗೆ ನನ್ನ ಅಧ್ಯಯನ ನಡೆಯುತ್ತಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಮುಂದಿನ ವಿಷಯದ ಬಗ್ಗೆ ನಿಮ್ಮ ಜೊತೆಗೆ ಮುಕ್ತ ಚರ್ಚೆಗೆ ಬರುತ್ತೇನೆ.
ಈ ಮೇಲಿನ ವಿಷಯಗಳ ಬಗ್ಗೆ.ಹಾಗೂ ಇವುಗಳಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನನಗೆ ತಿಳಿಸಿ.