ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ.

ಪ್ರತೀ ಮಗುವು ತನ್ನದೇ ಆದ ವೈಶಿಷ್ಟ್ಯತೆ ಹಾಗೂ ಹಿನ್ನಲೆಯೊಂದಿಗೆ ಶಾಲೆಗೆ ಬರುತ್ತದೆ. ಮಗುವಿನ ಆಸಕ್ತಿ ಹಾಗು ಸಾಮರ್ಥ್ಯಕ್ಕನುಗುಣವಾಗಿ ತನ್ನನ್ನು ಅಭಿವೃದ್ಧಿಪಡಿಸಿಕೊಳ್ಳಲು ನೀಡುವ ಶಿಕ್ಷಣ ದೇಶದ ಅಭ್ಯುದಯವನ್ನು ಸಾಧಿಸುವ ನಿಟ್ಟಿನಲ್ಲಿ ಗುರುತರವಾದ ಅಂಶ. ಶಾಲೆಯಲ್ಲಿ ಮಕ್ಕಳಿಗೆ ಪೂರಕವಾದ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ‘ಇಂದಿನ ಮಕ್ಕಳೇ ಇಂದಿನ ಪ್ರಜೆಗಳು’ ಈ ನಿಟ್ಟಿನಲ್ಲಿ ಶಿಕ್ಷಣ ಸಾರಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ.

ಶಿಕ್ಷಣ, ಈಗ ಸರ್ಕಾರದ ಒಂದು ಸೇವಾ ಚಟುವಟಿಕೆಯಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಅದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. 1994ರಲ್ಲಿ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿವರ್ತನೆ ಮಾಡಲು ಮತ್ತೊಂದು ಪ್ರಮುಖ ಪ್ರಯತ್ನ ನಡೆಯಿತು. ಭಾರತದ ಸರ್ವೋಚ್ಚ ನ್ಯಾಯಾಲಯದ ಒಂದು ಪ್ರಮುಖ ತೀರ್ಪಿನಲ್ಲಿ ಶಿಕ್ಷಣವು ಜೀವಿಸುವ ಹಾಗು ಸ್ವತಂತ್ರದ ಹಕ್ಕಿನಿಂದ ಹೊರಹೊಮ್ಮುವ ಒಂದು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಈ ತೀರ್ಪಿನಿಂದಾಗಿ ಸಂವಿಧಾನದ 45ನೇ ಕಲಂನಲ್ಲಿ ಸೂಚಿಸಿದಂತೆ ಶಿಕ್ಷಣ ಕೇವಲ ಒಂದು ಸೇವೆಯಲ್ಲದೆ, ಜಾರಿಗೊಳಿಸಲೇ ಬೇಕಾದ ಹಕ್ಕಾಗಿ ಮಾರ್ಪಾಡಾಯಿತು. 2002ರ 86ನೇ ಸಂವಿಧಾನದ ತಿದ್ದುಪಡಿ ಕಾಯಿದೆಯು ‘ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವು’ ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸಿತು [ಕಲಂ 21 ಎ]

RELATED ARTICLES  ರಾಷ್ಟ್ರೀಯ ಹೆದ್ದಾರಿಗಳನ್ನು ಯಮಲೋಕದ ದಾರಿ ಮಾಡಿದ್ದಾರೆ : ಜಿಲ್ಲಾಧಿಕಾರಿಗಳ ಮುಂದೆ ಸಾಲು ಸಾಲು ಸಮಸ್ಯೆ ತೆರದಿಟ್ಟ ಸಾರ್ವಜನಿಕರು : ಅವೈಜ್ಞಾನಿಕ ಕಾಮಗಾರಿ ವಿರುದ್ಧ ಆಕ್ರೋಶ

ಶಿಕ್ಷಣದ ಸಾರ್ವತ್ರೀಕರಣದ ಅಂತಿಮ ಆಶಯ ಎಲ್ಲಾ ಮಕ್ಕಳ ಕಲಿಕೆಯ ಗುಣಮಟ್ಟದಲ್ಲಿನ ಹೆಚ್ಚಳವನ್ನು ಸಾಧಿಸುವುದಾಗಿದೆ. ಖ್ಯಾತ ಶಿಕ್ಷಣ ತಜ್ಞ ಡೆಮಿಂಗ್ ರವರ ಪ್ರಕಾರ ಗುಣಮಟ್ಟ ಎಂದರೆ, ಪ್ರಕ್ರಿಯೆ ಪ್ರೇರಿತ ಚಿಂತನೆ ಮಾಡುವುದು, ಪ್ರಕ್ರಿಯೆಯಲ್ಲಿ ನಿರಂತರ ಸುಧಾರಣೆ ಮಾಡುವುದು, ವಾಸ್ತವಾಂಶಗಳೊಂದಿಗೆ ನಿರ್ವಹಿಸುವುದು, ಆದ್ಯತೆಯ ಮೇರೆಗೆ ಆಡಳಿತ ನಡೆಸುವುದು, ಎಲ್ಲರೂ ಭಾಗವಹಿಸುವಂತೆ ಮಾಡುವುದು, ಈ ಎಲ್ಲಾ ಅಂಶಗಳನ್ನು ಗುಣಾತ್ಮಕ ಶಿಕ್ಷಣವನ್ನು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈ ಉದ್ದೇಶವನ್ನು ಈಡೇರಿಸುವುದು ಸವಾಲಾಗಿದ್ದು, ಕಾಲಕಾಲಕ್ಕೆ ತಕ್ಕಂತೆ ಹಾಗೂ ಪ್ರಚಲಿತ ಬದಲಾವಣೆಗಳಿಗೆ ಮತ್ತು ಉದ್ದೇಶಗಳಿಗೆ ತಕ್ಕಂತೆ ಇಲಾಖೆಯಲ್ಲಿನ ವೃತ್ತಿಪರರಲ್ಲಿ ಅವಶ್ಯಕವಾಗಿ ಬೇಕಾದ ಸಾಮಾರ್ಥ್ಯಾಭಿವೃದ್ಧಿಯನ್ನು ಮಾಡಬೇಕಾಗಿರುವುದು ಸರ್ಕಾರದ ಮೂಲಭೂತ ಜವಾಬ್ದಾರಿ

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ವೃತ್ತಿಪರರಲ್ಲಿ ಶೈಕ್ಷಣಿಕ ಮತ್ತು ನಿರ್ವಹಣಾ ಕೌಶಲವನ್ನು ಹೆಚ್ಚಿಸುವುದು ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿ ಶೈಕ್ಷಣಿಕ ನಾಯಕತ್ವ ಅಭಿವೃದ್ಧಿಗೊಳಿಸುವುದರ ಮೂಲಕ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಸಾಕಾರಗೊಳಿಸುವುದು ಶೈಕ್ಷಣಿಕ ನಾಯಕತ್ವ ತರಬೇತಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.