ravi soori

‘ವಿದ್ಯಾ ವಿನಯೇನ ಶೋಭತೆ’ ವಿನಯವಿದ್ದಾಗ ಮಾತ್ರ ವಿದ್ಯೆ ಶೋಭಿಸುತ್ತದೆ. ನಿಜವಾದ ವಿದ್ಯೆ ಇದ್ದರೆ ವಿನಯ ತನ್ನಿಂದ ತಾನೇ ಬರುತ್ತದೆ. ಪಂಡಿತ ವಿದ್ಯಾ ಮಂಡಿತನಾಗಿರಬೇಕು ಗಮಂಡಿತನಾಗಬಾರದು ಅಂದಾಗ ಮಾತ್ರ ಅವನಿಗೆ ಗೌರವ ಪ್ರಾಪ್ತವಾಗುತ್ತದೆ. ವಿದ್ಯೆ ಮತ್ತು ವಿನಯ ಪುಲ್ಲಿಂಗ-ಸ್ತ್ರೀಲಿಂಗವಿದ್ದಂತೆ, ಅವು ಪರಸ್ಪರ ಮದುವೆಯಾದರೆ ಚೆಂದ.

ನಾನು ಎಲ್ಲವನ್ನೂ ಬಲ್ಲವನು ಎನ್ನುವ ಭಾವ ನಮ್ಮನ್ನು ಆವರಿಸಿದರೆ ಅದು ನಮ್ಮ ಅವನತಿಯ ಪ್ರಾರಂಭ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕಲಿಕೆ, ಬೆಳವಣಿಗೆ ಎಲ್ಲವನ್ನೂ ಕುಂಟಿತ ಮಾಡುವ ಭಾವವದು. ನಮಗೆ ಸರಿ ಎನಿಸಿದ್ದು ವಿಶ್ವಕ್ಕೇ ಸಮ್ಮತವಾಗಬೇಕು ಎಂಬುದು ಸರಿಯಲ್ಲ. ನಮ್ಮ ಸರಿ-ತಪ್ಪುಗಳನ್ನು ಇತರರ ಮೇಲೆ ಹೇರಬಾರದು. ಬೇರೆಯವರ ಅಭಿಪ್ರಾಯಕ್ಕೂ ಮನ್ನಣೆ ನೀಡುವ ಮನಸ್ಸು ನಮ್ಮದಾಗಬೇಕು. ಗರ್ವ ಎಂಬುದು ಕೇಡಿಗೆ ಮೂಲ “ಸರ್ವರೂ ಒಂದೆನುವ ಭಾವವದೆ ಸದ್ಭಾವ” ಎಂಬ ನುಡಿ ನಮ್ಮ ನಡೆಯಲ್ಲಿ ಬರಬೇಕು”

RELATED ARTICLES  ಕಳೆದುಹೋದ ಎಳೆಯ ದಿನಗಳು ಭಾಗ ೨೧

ಇಂದು ವಿದ್ಯಾವಂತರೇ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ, ಜಗತ್ತಿನ ಕಷ್ಟಗಳಿಗೆಲ್ಲ ಕಾರಣರಾಗುತ್ತಿದ್ದಾರೆ. ಮೆದುಳಿನಲ್ಲಿ ಬದುಕುವವರು ಕಾಣುತ್ತಿದ್ದಾರೆಯೇ ವಿನಃ ಹೃದಯದಲ್ಲಿ ಬದುಕುವವರು ಕಾಣಸಿಗುತ್ತಿಲ್ಲ, ವಿದ್ಯೆ ಸಮಾಜಕ್ಕೆ ಪೂರಕವಾಗುವ ಬದಲು ಮಾರಕವಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ಹಾಗಾಗಬೇಕಾದರೆ ವಿದ್ಯೆಯ ಜೊತೆ ವಿನಯ ಬರುವಂತಾಗಬೇಕು. “ವಿದ್ಯೆ ಬಂತು ಬುದ್ಧಿ ಹೋಯ್ತು” ಎಂಬಂತಾಗದಿರಲಿ. ವಿದ್ಯಾವಂತರೆಲ್ಲಾ ಹೃದಯವಂತರಾಗಲಿ, ವಿನಯವಂತರಾಗಲಿ.

RELATED ARTICLES  ತಂದೆಯ ಸಂಪಾದನೆಯನ್ನು ಮಗ ಪ್ರಶ್ನಿಸಿದರೆ?