FB IMG 1496813182689

ರಾಮಪ್ರಸಾದ ಜೋಶಿ

 

ನಿಸ್ಸಾರಾ ಪ್ರಥಿವೀ ನಿರೌಷಧರತಾ ನೀಚಾ ಮಹತ್ವಂಗತಾಃ
ರಾಜಾ ಸ್ವಾರ್ಥಪರಾ ಸ್ವಕಾರ್ಯ ನಿರತಾಃ ಪುತ್ರಾಃ ಪಿತೃ ದ್ವೇಷಿತಾಃ
ಭಾರ್ಯಾ ಭರ್ತೃ ವಿನಿಂದಿತಾ ಚ ಸತತಂ
ವಿಪ್ರಾಃ ಕುಧರ್ಮಾ ಗತಾಃ
ಇತ್ಥಂ ಭೂತಮಿದಂ ತಥಾ ಕಲಿಯುಗೇ ಧರ್ಮೋ ವನಾಂತರ್ಗತಾ||
ಪ್ರಸ್ತುತ ಸುಭಾಷಿತದ ವಿವರಣೆಯ ಅಗತ್ಯ ಇಲ್ಲವೇನೋ…!
ಪ್ರಪಂಚವನ್ನ ಕಣ್ಬಿಟ್ಟು ಸರಿಯಾಗಿ ನೋಡಿದ್ರೆ ಸುಭಾಷಿತಕಾರನ ಮನದ ಮಾತು ಗೋಚರಿಸುತ್ತದೆ.
ಸಾರ ರಹಿತವೂ ಔಷಧ ರಹಿತವೂ ಆದ ಪ್ರಥ್ವಿ. ನೀಚರೇ ಮಹತ್ವವನ್ನ ಪಡೆಯುತ್ತಿರುವುದು. ಪ್ರಜಾಪ್ರಭುಗಳು ಸ್ವಾರ್ಥದ ಪರಾಕಾಷ್ಠೆಯನ್ನ ಹೊಂದಿ ಸ್ವ ಕಾರ್ಯಗಳಲ್ಲಿ ನಿರತರಾಗುತ್ತಿರುವುದು. ಮಕ್ಕಳೇ ತಂದೆ ತಾಯಿಗಳನ್ನ ದ್ವೇಷಿಸುತ್ತುರುವುದು.
ಹೆಂಡತಿಯರು ಸತತವಾಗಿ ಗಂಡನನ್ನು ನಿಂದಿಸುತ್ತಿರುವುದು. ಬ್ರಾಹ್ಮಣರು ಸ್ವಧರ್ಮ ಬಿಟ್ಟು ಕುಧರ್ಮಿಗಳಾಗುತ್ತಿರುವುದು. ಇದನ್ನೆಲ್ಲ ನೋಡಿ ಕಲಿಯುಗದಲ್ಲಿ ಧರ್ಮವು ವನಾಂತರ್ಗತಾ (ವನವಾಸಿಯಾಯಿತು.
ಈ ವನವಾಸಕ್ಕೂ ಧರ್ಮಕ್ಕೂ ಏನೋ ಅವಿನಾಭಾವ ಸಂಬಂಧ.
ನಮ್ಮ ಪುರಾಣಗಳನ್ನ ಗಮನಿಸಿ ಧರ್ಮಾಚರಣೆಯನ್ನ ಧರ್ಮವನ್ನು ರಕ್ಷಿಸುವವರನ್ನ ನಾವು ವನವಾಸದಲ್ಲಿ ಕಾಣುತ್ತೇವೆ.
ಋಷಿಮುನಿಗಳು ವನವಾಸಿಗಳು, ಇನ್ನು ಧರ್ಮ ನಿಷ್ಠರಾದ ಅನೇಕ ರಾಜರು ವನವಾಸವನ್ನ ಆಚರಿಸಿ ನಂತರ ಧರ್ಮವನ್ನ ಪ್ರತಿಷ್ಠಾಪಿಸಿದ್ದು ಕಾಣಬಹುದು..
ಶ್ರೀರಾಮ, ಪಾಂಡವರು, ಸತ್ಯಹರಿಶ್ಚಂದ್ರ ಇವರೆಲ್ಲ ವನವಾಸವನ್ನ ಮಾಡಿ ಧರ್ಮವನ್ನ ರಕ್ಷಿಸಿದವರು!!
ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆಯಷ್ಟೇ.
ಧರ್ಮವೇ ವನವಾಸ ಮಾಡಿ ತನ್ನನ್ನ ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿದೆ. ಯಾಕೆಂದರೆ ನಾವೆಲ್ಲ ಕುಧರ್ಮಿಗಳಾಗುತ್ತಿದ್ದೇವೆ. #ಧರ್ಮೋ #ರಕ್ಷತಿ #ರಕ್ಷಿತಃ ಎನ್ನುವುದನ್ನು ಮರೆತಿದ್ದೇವೆ.ಹಾಗಾಗಿ ಸ್ವಾಭಿಮಾನಿಯಾದ ಧರ್ಮ ನಮ್ಮನ್ನ ಬಿಟ್ಟು ವನವಾಸಿಯಾಗಿದೆ. “ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ತಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್” ಎಂಬ ಭಗವಂತನ ವಾಕ್ಯವನ್ನ ನಂಬಿ ಅವನ ಮತ್ತೊಂದು ಅವತಾರಕ್ಕೆ ಕಾಯುತ್ತಿದೆ…
ಧರ್ಮ ರಕ್ಷಣೆ ನಮ್ಮೆಲ್ಲರ ಕೈಮೀರಿ ವನವಾಸಿಯಾಗಿ “ವನಾಂತರ್ಗತವಾಗಿದೆ. ಧರ್ಮ “ದಿವಂಗತಾ” ಆಗುವ ಮೊದಲು ಮತ್ತೊಮ್ಮೆ ಭಗವಂತ ಅವತರಿಸಲಿ, ಅಧರ್ಮ ಗ್ಲಾನಿಯಾಗಿ ಧರ್ಮೋತ್ಥಾನವಾಗಲಿ. ಕುಧರ್ಮಿಗಳಾದ ನಮ್ಮಲ್ಲು ಧರ್ಮ ನೆಲೆಸುವಂತಾಗಿ ನಾವೂ ಧರ್ಮ ರಕ್ಷರಾಗುವಂತಾಗಿ ಧರ್ಮವು ನಮ್ಮನ್ನ ರಕ್ಷಿಸುವಂತಾಗಲಿ ಎನ್ನುವ ಪ್ರಾರ್ಥನೆ ನನ್ನದು, ನಮ್ಮೆಲ್ಲರದ್ದು…
ಧರ್ಮೋ ರಕ್ಷತಿ ರಕ್ಷಿತಃ….

RELATED ARTICLES  ಕರಾವಳಿಯಲ್ಲಿ ಚಳಿಯೋ ಚಳಿ..! ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ