ಹೊನ್ನಾವರ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಖಂಡಿಸಿ ಅನಂತಕುಮಾರ್ ಹೆಗಡೆಯವರ ನೇತೃತ್ವದಲ್ಲಿ ಅಂಕೋಲಾ ತಾಲೂಕಿನಲ್ಲಿ ಪ್ರಾರಂಭವಾಗಿರುವ ಜನ ಸುರಕ್ಷಾ ಯಾತ್ರೆ ಇಂದು ಹೊನ್ನಾವರದ ಶರಾವತಿ ಸರ್ಕಲನಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೂಡಗಣಪತಿ ಸಭಾಭವನದ ವರೆಗೆ ಪಾದ ಯಾತ್ರೆ ನಡೆಸುವ ಮೂಲಕ ಯಶಸ್ವಿಯಾಗಿ ನಡೆಯಿತು.

ಈ ಜನ ಸುರಕ್ಷಾ ಯಾತ್ರೆಯ ಬಗ್ಗೆ ಮಾತನಾಡಿದ ಅನಂತಕುಮಾರ್ ಹೆಗಡೆ ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಕೊಲೆಗಾರರನ್ನು ಬಂಧಿಸಿ ಶಿಕ್ಷೆ ಕೊಡುವ ಬದಲು ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳು ತಕ್ಕ ಉತ್ತರವನ್ನು ನೀಡುತ್ತಾರೆ.ಗೂಡಾಗಳನ್ನು ಹೊರಗೆ ಬಿಟ್ಟು ಅರಾಜಕ ರಾಜ್ಯ ನಿರ್ಮಾಣ ಕಾಂಗ್ರೆಸ್ ಗುರಿಯಾಗಿದೆ ಎಂದು ಕಿಡಿ ಕಾರಿದ ಅವರು, ಮುಂದಿನ‌ದಿನದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಗುರಿ ಎಂದರು.

RELATED ARTICLES  ಶಿರಸಿಯಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಮಾಲೀಕರ ಪ್ರತಿಭಟನೆ.

ಈ ಯಾತ್ರೆಯ ಸಮಾರೋಪ ಕಾರ್ಯಕ್ರಮ ಮಂಗಳೂರಿನ ಸುರತ್ಕಲ್ ನಲ್ಲಿ ಮಾರ್ಚ್ 6 ರಂದು ನಡೆಯಲಿದ್ದು ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಡಿತ್ಯನಾಥ್ ಯೋಗಿ ಭಾಗವಹಿಸಲಿದ್ದಾರೆ. ನಂತರ ಅಲ್ಲಿಂದ ಬೆಂಗಳೂರು ಚಲೋ ಕಾರ್ಯಕ್ರಮ ನಡೆಯುತ್ತದೆ ಎಂದು ಅವರು ತಿಳಿಸಿದರು

RELATED ARTICLES  ಡಾ. ವೆಂಕಟರಮಣ ಹೆಗಡೆ ದಂಪತಿಗೆ ಸಮ್ಮಾನನಮ್ಮೊಳಗಿನ ಅಹಂ, ಹೊರಗಿನ ಆಡಂಬರ ಬಿಟ್ಟರೆ ನೆಮ್ಮದಿ: ಹುಕ್ಕೇರಿ ಶ್ರೀ

ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ, ನಾಗರಾಜ ನಾಯಕ ತೊರ್ಕೆ, ಸೂರಜ್ ನಾಯ್ಕ್ ಸೋನಿ,ಮಾಜಿ ಶಾಸಕ ದಿನಕರ ಶೆಟ್ಟಿ, ಶ್ರೀಕಲಾ ಶಾಸ್ತ್ರಿ, ವೆಂಕಟ್ರಮಣ ಹೆಗಡೆ,ಸುಬ್ರಾಯ ವಾಳ್ಕೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.