ಸಚಿನ  ಹಳದೀಪುರ

ಪ್ರಪಂಚದ ಅತಿ ದೊಡ್ಡ ಭೂವಾಸಿ ಪ್ರಾಣಿ ಯಾವದು ಎಂದರೆ ಎಲ್ಲರು ಆಫ್ರಿಕಾದ ಆನೆ ಎನ್ನಬಹುದು.ಅತಿ ದೊಡ್ಡ ಪಕ್ಷಿ ಕೇಳಿದರೆ ಎಲ್ಲರು ಆಸ್ಟ್ರೀಚ ಎನ್ನಬಹುದು.ಹೀಗೆಯೇ ಪ್ರಪಂಚದಲ್ಲಿ ಅಧಿಕ ತೂಕ ಹೊಂದಿರುವ ಮಹಿಳೆ ಯಾರೆಂದರೆ ಎಲ್ಲರು ಈಜಿಪ್ಟನ ಎಮನ ಅಹ್ಮದ ಎನ್ನುತ್ತಾರೆ.ಈ ಮಾತು ಸುಳ್ಳಲ್ಲ ಯಾಕಂದರೆ 35 ವರ್ಷದ ಈಜಿಪ್ಟಿನ ಈ ಮಹಿಳೆ ತನ್ನ ದೇಹದ ತೂಕದ ಕಾರಣದಿಂದ ಕಳೆದ 25 ವರ್ಷಗಳಿಂದ ಮನೆಯಿಂದ ಹೊರಬಂದಿಲ್ಲ.ಅಷ್ಟಕ್ಕೂ ಇವಳ ತೂಕ ಬರೋಬ್ಬರಿ 500ಕೆ.ಜಿ. ಈ ತೂಕದ ದೇಹದಿಂದ ಕುಳಿತು ಕೊಳ್ಳಲೂ ಕೂಡಾ ಸಾಧ್ಯವಾಗುತ್ತಿಲ್ಲ.ಏನೇ ಆಗಲಿ ,ಈಕೆಯ ದೇಹದ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರೇಲ್ಲಾ ಪಣ ಕಟ್ಟಿ ಬಂದವರೆಲ್ಲ ಸೋತು ಹೋದರು.ಪ್ರಪಂಚ ವೈದ್ಯಕೀಯ ಕ್ಷೇತ್ರದಲ್ಲಿ ನಿಪುಣತೇ ಸಾಧಿಸಿದ ವೈದ್ಯರೇಲ್ಲ ಇವಳ ತೂಕ ಕರಗಿಸುವ ಪ್ರಯತ್ನ ಮಾಡಿ ತಮ್ಮ ಬೆವರನ್ನು ಇಳಿಸಿದರೆ ವಿನಃ  ಎಮನಳ ತೂಕ ಇಳಿಸಲು ಆಗಲೇ ಇಲ್ಲಾ.ಪ್ರಪಂಚದ ವೈದ್ಯರ ಶಸ್ತ್ರ ಚಿಕಿತ್ಸೆಯಿಂದ  ಪ್ರಯತ್ನಿಸಿ ಸೋತಿರುವ ಆ ಹೆಣ್ಣು ಮಗಳು ಭಾರತದ ವೈದ್ಯರನ್ನು ನಂಬಿ ಎರಡೆರಡು ಕ್ರೈನಗಳ ಮೂಲಕ ಭಾರತಕ್ಕೆ ಬಂದು ಶಸ್ತ್ರಕ್ರಿಯೆಗೆ ಒಳಪಟ್ಟೀರುವುದು  ವಿದೇಶಿಗರು ನಮ್ಮ ಭಾರತದ ಮೇಲಿರುವ ಇಟ್ಟಿರುವ ನಂಬಿಕೆಯು ಜೊತೆಗೇ ಭಾರತಿಯ ವೈದ್ಯಕೀಯ ಕ್ಷೇತ್ರದ ಕೀರ್ತಿ ಜಗದಗಲ ಹರಡಿದ್ದು ಮಾತ್ರ ಸುಳ್ಳಲ್ಲ.
ಇಲ್ಲಿ ಒಂದೂ ವಿಚಾರದ ಸಂಗತಿ ಇದೇ.ಅದೇನೆಂದರೆ ಭಾರತೀಯರ ಸಾಧನೆ ನೋಡಿ ವಿದೇಶಿಗರು ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದರೂ, ಭಾರತೀಯರಾದ ನಾವುಗಳು ಮಾತ್ರ ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವುದು ಏತಕ್ಕೆ ಎಂದು ಅರ್ಥವಾಗುವುದಿಲ್ಲ.”ಅಂಗೈಯಲ್ಲಿ ಮಾಣಿಕ್ಯ ಇಟ್ಟುಕೊಂಡು ಊರೆಲ್ಲಾ ಸುತ್ತಿದ “ಎಂದು ಭಾರತೀಯರು ಹೇಳಿದ ಮಾತೇ ಭಾರತೀಯರಿಗೆ ಹೇಳಿ ಮಾಡಿದ ಹಾಗೇ ಇದೇ ಎಂದರೆ ತಪ್ಪಾಗಲಾರದು.ಯಾಕಂದರೆ ಭಾರತದ ಸಿರಿವಂತರೆಲ್ಲಾ  ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿ ಭಾರತದ ಹಣವನ್ನು ಅಲ್ಲಿ ವ್ಯಯ ಮಾಡುವುದಲ್ಲದೆ ,ಭಾರತದ ವೈದ್ಯಕೀಯ ಕ್ಷೇತ್ರದ ಮೇಲೆ ನಂಬಿಕೆ  ಇಲ್ಲವೆಂಬುದು ಪರೋಕ್ಷವಾಗಿ ಸಾಭಿತು ಪಡಿಸುತ್ತಿದ್ದಾರೆ.ಇವರ ಈ ಪ್ರಯತ್ನ ಕಾಯಿಲೆ ನಮ್ಮದು ,ಪಾಯೀದೆ ಅವರದು ಎಂಬಂತಾಗಿದೆ. ಭಾರತೀಯರಿಗೆ ಭಾರತದ ವೈದ್ಯಕೀಯದ ಮೇಲೆ ನಂಬಿಕೆ ಇಲ್ಲದಿರಬಹುದು ಆದರೆ ವಿದೇಶಿಗರಿಗೆ ಖಂಡಿತಾ ಭಾರತೀಯರ ಮೇಲೆ ನಂಬಿಕೆ ಇದೇ.ಹಾಗಾಗಿಯೇ ನಮ್ಮವರನ್ನು ನಂಬಿ ವಿದೇಶದಿಂದ ಇಲ್ಲಿಗೆ ಬರೋದು ಮತ್ತು ಭಾರತದ ವೈದ್ಯರಿಗೆ ವಿದೇಶಗಳಲ್ಲಿ ಬೇಡಿಕೆ ಇರೋದು.

RELATED ARTICLES  ಮೋಹವೆಂಬ ಜಾಲ

ನಮ್ಮ  ವೈದ್ಯಕೀಯ ಕ್ಷೇತ್ರದ ಪ್ರಗತಿ ಹೇಗಿದೆ ಅಂದರೆ ಇತ್ತೀಚ್ಛಿಗಷ್ಟೇ ಅಮೇರಿಕಾದ ಕ್ಲಿನಿಕಲ ಸರ್ಜರಿಯ ಪ್ರೊಫೆಸ್ಸರ ರಾಬರ್ಟ್ ಪರ್ಲ್ ಭಾರತಕ್ಕೆ ಬಂದಿದ್ದರು.ಭಾರತದ  ಪ್ರಮುಖ 9 ಆಸ್ಪತ್ರೆಗಳಿಗೆ ಬೇಟಿ ನೀಡಿದ್ದರು.(ಅದರಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯ ಕೂಡಾ ಒಂದೂ.ಕನ್ನಡಿಗರು ಹೆಮ್ಮೆ ಪಡುವ  ಸಂಗತಿ) ಭಾರತದ ಆಸ್ಪತ್ರೆಗಳ ವ್ಯವಸ್ಥೆ,ಗುಣಮಟ್ಟವನ್ನು ನೋಡಿ ಅಮೆರಿಕಾ ದೇಶಕ್ಕಿಂತ ಭಾರತದ ವೈದ್ಯಕೀಯ ಕ್ಷೇತ್ರ 10 ಪಟ್ಟು ಮುಂದೆ ಇದೇ,ಅಲ್ಲದೆ ಅಮೆರಿಕಾ ಭಾರತದಿಂದ ಕಲಿಯುವಂತದ್ದು ತುಂಬಾ ಇದೇ ಎಂದು ಉದ್ಗರಿಸಿದ್ದರು.ಭಾರತವೇಂದರೇ ಬಡತನ,ಅನಕ್ಷರತೆ,ಕೃಷಿ ಪ್ರಾಧಾನ್ಯತೆಯ ದೇಶವೆಂದು ಪ್ರಪಂಚ ನಂಬಿದೆ ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಮುನ್ನಡೆಯನ್ನು ಪ್ರಪಂಚಕ್ಕೆ ನಂಬಲು ಕಷ್ಟವಾಗಿದೆ ಎಂದರು.ಅಷ್ಟೇ ಅಲ್ಲದೆ ವಿಶ್ವದ ಮುಂದುವರಿದ ದೇಶಗಳಲ್ಲೂ ಕಾಣಸಿಗದ ಮತ್ತು ಲಭ್ಯವೀರದ ಚಿಕಿತ್ಸಾ ವಿಧಾನ,ತಂತ್ರಜ್ಞಾನ ಭಾರತದಲ್ಲಿ ಮಾತ್ರ ಕಾಣಸಿಗುತ್ತದೆ ಹಾಗಾಗಿ ಭಾರತದ ಹಲವು ಮಾದರಿಯನ್ನು  ಅಮೆರಿಕಾ ಅಳವಡಿಸಿ ಕೊಳ್ಳಬೇಕಾಗಿದೆ ಎಂದರು.ಪರ್ಲ್ ರ ಪ್ರಕಾರ ಒಂದೂ ಹೃದಯದ ಶಸ್ತ್ರ ಚಿಕಿತ್ಸೆಗೆ ಅಮೆರಿಕದಲ್ಲಿ ಏನಿಲ್ಲಾ ಅಂದರು 55 ಲಕ್ಷದಿಂದ 60 ಲಕ್ಷ ತಗಲುತ್ತದೆ .ಆದರೆ ಅಮೆರಿಕದಲ್ಲಿ ಸಿಗುವ ಸೌಕರ್ಯದಂತೆ ಅದೇ ಶಸ್ತ್ರ ಚಿಕಿತ್ಸೆಗೆ ಭಾರತದಲ್ಲಿ 1.25 ಲಕ್ಷದಿಂದ 1.50 ಲಕ್ಷ  ತಗಲಬಹುದು.  ವಿಮಾ ಸೇವೆಯಿಂದ ಚಿಕಿತ್ಸೆ ಮಾಡಿಸಿದ್ದಲ್ಲಿ 75 ಸಾವಿರ ರೂಪಾಯಿಗಳಾಗುತ್ತದೆ.ಅಷ್ಟು ಮಾತ್ರವಲ್ಲದೆ ಅಮೆರಿಕದಲ್ಲಿ 250 ರೂಪಾಯಿಗೆ ಸಿಗುವ ಮಾತ್ರೆ ಭಾರತದಲ್ಲಿ ಕೇವಲ 15 ರೂಪಾಯಿಗೆ ಸಿಗುತ್ತದೆ ಎಂದು ಆಶ್ಚರ್ಯಪಟ್ಟಿಕೊಂಡರು.ಇಷ್ಟೆಲ್ಲಾ ಒಳ್ಳೆಯ ಸೌಲಭ್ಯವೀದ್ದುದ್ದರಿಂದ ವಿದೇಶಿಗರೇ ಭಾರತವನ್ನು ಆಶ್ಚರ್ಯ ದ್ರಷ್ಠಿಯಿಂದ ಕಾಣುತ್ತಿದ್ದಾರೆ.ಆದರೆ ಭಾರತೀಯರು ಮಾತ್ರ  ಚಿಕಿತ್ಸೆಗಾಗಿ ವಿದೇಶದತ್ತ ಸಾಗುವುದು ಕಂಡರೆ ನಮಗೆ ಆಶ್ಚರ್ಯವಾಗುತ್ತದೆ .
ನಿಜವಾಗಿಯೂ ರಾಬರ್ಟ್ ಪರ್ಲ್ ರು ಮಂಡಿಸಿದ ಭಾರತದ ವೈದ್ಯಕೀಯ ಕ್ಷೇತ್ರದ ಸಾಧನೆ ಒಪ್ಪಿಕೊಳ್ಳಲೇ ಬೇಕು.ಯಾಕೆಂದರೆ ಭಾರತದ ವೈದ್ಯಕೀಯ ನಂಬಿ ಬಂದಿರುವ ಎಮನಗೆ ಪ್ರತಿ ದಿನಕ್ಕೆ 1800 ಕ್ಯಾಲೋರಿ ಆಹಾರ ನೀಡಲಾಗಿಯು ಸಹಿತ  ಆರಂಭದಲ್ಲೇ 5 ಕೆ. ಜಿ ಕಡಿಮೆ ಯಾಗಿದ್ದವಳೂ, ನಂತರದ 3 ವಾರದಲ್ಲಿ 108 ಕೆ.ಜಿ ಕಡಿಮೆಯಾಗಿದ್ದಾಳೆ.ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎದ್ದು ಕುಳಿತು ಕೊಳ್ಳಲು ಸಾಧ್ಯವಾಗಿದೆ.ಇದು ನಮ್ಮ ಮುಂದುವರಿದ ಚಿಕಿತ್ಸೆಗೆ ಜೀವಂತ ಸಾಕ್ಷಿ .ಭಾರತ ಎಂದರೆ ಪ್ರಾಚೀನ ಕಾಲದಿಂದಲೂ ಎಲ್ಲ ಕ್ಷೇತ್ರದಲ್ಲಿ ಗುರುವಾಗಿ ನಿಂತ ರಾಷ್ಟ್ರ.ಇತರೆ ರಾಷ್ಟ್ರಗಳಿಗೂ  ಸಹಿತ ಮಾದರಿಯಾಗಿ ಕಂಡ ಅಪರೂಪದ ಮಹಾನ ಭಾರತ. ಅಂದಿಗೂ ಮಹಾನ ಇಂದಿಗೂ ಮಹಾನ ಎನ್ನುವುದರಲ್ಲಿ ಎರಡೂ ಮಾತಿಲ್ಲ.ಆದರೆ ಭಾರತದ ಪ್ರಜೆಗಳ ಚಿಂತನೆಗಳು  ಕೋಮನ (common) ಆಗುವ ಬದಲು ಮಹಾನ ಆಗಬೇಕಿದೆ .ಆಗ ನಮ್ಮವರಿಗೂ ಭಾರತ ಮಹಾನ ಆಗಿ ಕಾಣುವುದರಲ್ಲಿ ಅನುಮಾನವಿಲ್ಲ.ವೈದ್ಯಕೀಯ ಕ್ಷೇತ್ರದ ಪ್ರಗತಿಯನ್ನು ಕಾಣದೇ  ಇಂಡಿಯನ್ಸ್ ವಿದೇಶಕ್ಕೆ ಹೋಗುವುದು,ವಿದೇಶಿಗರು ಪ್ರಗತಿಯನ್ನು ಕಂಡು ಇಂಡಿಯಾಗೆ ಬರುವುದು ಅಂದರೆ “ದೇಶಿಗರು ಕಾಣದನ್ನು ,ವಿದೇಶಿಗರು ಕಂಡದ್ದು” ಎನ್ನುವ ನನ್ನ ಅಂಕಣದ ಶೀರ್ಷಿಕೆ ಸರಿ ತಾನೇ…

RELATED ARTICLES  ಅಂಜಲಿ ನಿಂಬಾಳಕರ್ ವಿರುದ್ಧ ಮಹಿಳಾ ಅಭ್ಯರ್ಥಿ ನಿಲ್ಲಿಸಬಹುದೇ ಬಿಜೆಪಿ ?