ಈತ ಒಬ್ಬ ದೇಹದಾರ್ಢ್ಯ ಪಟು, ಕಬ್ಬಡ್ಡಿ ಆಟಗಾರ, ಮರಗೆಲಸ ಮಾಡುವ ಕುಶಲಕರ್ಮಿ ಮತ್ತು ಸೆಕ್ಯುರಿಟಿ ಗಾರ್ಡ್. ಇದೆಲ್ಲದರ ಮಧ್ಯೆ ಈತ ರಾಜ್ಯದ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್.

ಹೇಗೆ ಕಷ್ಟಪಟ್ಟು ಸಾಧನೆಯ ಹೆಜ್ಜೆಗಳನ್ನಿಡುತ್ತಿರುವ ಯುವಕನೇ 24 ವರ್ಷದ ಮನ್ಸೂರ್‌ ಅಹ್ಮದ್‌ ದಾರ್‌. ಐಪಿಎಲ್ ನಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಅವರು IPL 2018ರ ಆವೃತ್ತಿಯಲ್ಲಿ ಪಂಜಾಜ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉತ್ತರ ಕಾಶ್ಮೀರದ ಸೋನಾವರಿಯ ಇವರು ಅತೀ ದೂರಕ್ಕೆ ಸಿಕ್ಸರ್ ಬಾರಿವಲ್ಲಿ ಪ್ರವೀಣರು. ‘ಆತ ಮಿ.100 ಮೀಟರ್‌ ಸಿಕ್ಸರ್‌ ಮ್ಯಾನ್‌. ಅತ್ಯಂತ ದೂರಕ್ಕೆ ಸಿಕ್ಸರ್‌ಗಳನ್ನು ಬಾರಿಸುತ್ತಾರೆ. ಕಳೆದ ವರ್ಷ ಪಂಜಾಬ್‌ ವಿರುದ್ಧ ಅವರು ಬಾರಿಸಿದ ಸಿಕ್ಸರ್‌ಗಳೆಲ್ಲಾ 100 ಮೀ.ಗೂ ಹೆಚ್ಚಿನ ದೂರಕ್ಕೆ ಹೋಗಿ ಬಿದ್ದಿದ್ದವು. ಆತ 12ರಿಂದ 15 ಎಸೆತಗಳನ್ನೆದುರಿಸಿದರೆ ಸಾಕು, ಪಂದ್ಯ ನಮ್ಮ ತಂಡದತ್ತ ವಾಲುತ್ತದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಮ್ಮು ಮತ್ತು ಕಾಶ್ಮೀರ ತಂಡದ ಕೋಚ್‌ ಅಬ್ದುಲ್‌ ಖಯೂಮ್‌.

RELATED ARTICLES  ನವಜಾತ ಶಿಶುವನ್ನೇ ರಟ್ಟಿನ ಬಾಕ್ಸ್ ನಲ್ಲಿಟ್ಟು ರಸ್ತೆಯಲ್ಲಿ ಬಿಟ್ಟುಹೋದ ತಾಯಿ.

ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿ ಮಿಂಚಿದ ಇವರು ‘ಇದು ನನ್ನ 2ನೇ ಕ್ರಿಕೆಟ್ ಟೂರ್ನಿಯಾಗಿದೆ, ಉತ್ತಮವಾಗಿ ಆಡಿ ಐಪಿಎಲ್ ನಲ್ಲಿ ಸ್ಥಾನ ಗಳಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅದು ಈಗ ಈಡೇರಿದೆ’ ಎನ್ನುತ್ತಾರೆ 6.2 ಎಡಿ ಎತ್ತ ಹಾಗೂ 84 ಕೆಜಿ ತೂಕದ ಅಜಾನುಬಾಹು ಮನ್ಸೂರ್‌.

RELATED ARTICLES  ಒಂದೆರಡು ದಿನಗಳಲ್ಲಿಯೇ ಕೆಮ್ಮು, ಕಫ ಹೋಗಲಾಡಿಸುವ ಮನೆಮದ್ದುಗಳು

‘ಜೀವನ ನಿರ್ವಹಿಸಲು ರಾತ್ರಿ ಹಗಲು ದುಡಿಯಬೇಕಾಗುತ್ತದೆ. ಮಧ್ಯೆ ಕ್ರಿಕೆಟ್ ಅಭ್ಯಾಸ ನಡೆಸುತ್ತೇನೆ. ದೊಡ್ಡ ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವ ಕಾರಣಕ್ಕಾಗಿ ಸ್ಥಳೀಯ ಕ್ರಿಕೆಟ್‌ ತಂಡಗಳು ನನ್ನನ್ನು ಆಡಲು ಕರೆದು ಹಣವನ್ನೂ ನೀಡುತ್ತಾರೆ’ ಎನ್ನುತ್ತಾರೆ ಅವರು.

ಮನ್ಸೂರ್ ತಂದೆ ದಿನಗೂಲಿ ನೌಕರನಾಗಿದ್ದು, 3 ಮಂದಿ ಸಹೋದರರಿದ್ದಾರೆ. ಕುಟುಂಬ ನಿರ್ವಹಣೆ ಜವಾಬ್ದಾರಿ ಅವರ ಹೆಗಲ ಮೇಲಿರುವುದರಿಂದ ಮೋಟಾರ್‌ ಕಂಪನಿಯೊಂದರಲ್ಲಿ ರಾತ್ರಿ ಹೊತ್ತು ಸೆಕ್ಯುರಿಟಿ ಗಾರ್ಡ್‌ ಆಗಿ, ಹಗಲು ಹೊತ್ತಿನಲ್ಲಿ ಮರದ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಾರೆ.