ಸಾಮಾಜಿಕ ತಾಣಗಳಲ್ಲಿ ಒಂದಾದ ಹಾಗೂ ಅತೀ ಹೆಚ್ಚು ಬಳಸಲ್ಪಡುವ ವಾಟ್ಸ್ಯಾಪ್ ಸಂದೇಶಗಳನ್ನು ರಹಸ್ಯವಾಗಿ ಹೇಗೆ ಓದಬಹುದೆಂದು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಇತರರಿಗೆ ಕಳುಹಿಸಿದ ವಾಟ್ಸ್ಯಾಪ್ ಸಂದೇಶಗಳು ಸೆಂಡ್ ಆದಾಗ ಬೂದು ಬಣ್ಣದ ಒಂದು ಟಿಕ್ ಮಾರ್ಕ್ ಬೀಳುತ್ತೆ. ಆ ಸಂದೇಶವು ಕಳಿಸಲ್ಪಟ್ಟು ಇನ್ನೊಂದು ಪೋನ್ ತಲುಪಿದಾಗ ಎರಡು ಬೂದು ಬಣ್ಣದ ಟಿಕ್ ಮಾರ್ಕ್ ಬೀಳುತ್ತೆ. ಆ ಸಂದೇಶವನ್ನು ರಿಸೀವ್ ಮಾಡಿದಾತ ಓದಿದಾಗ ಆ ಟಿಕ್ ಮಾರ್ಕ್ ಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಆದರೆ ಗೆಳೆಯರು ಕಳುಹಿಸಿದ ಸಂದೇಶಗಳನ್ನು ಓದಿಯೂ ಕೂಡಾ ಕಳುಹಿಸಿದವರಿಗೆ ಇದರ ಸೂಚನೆ ತಿಳಿಯದಂತೆ (ಟಿಕ್ ಮಾರ್ಕ್ ಗಳು ಹಸಿರು ಬಣ್ಣಕ್ಕೆ ತಿರುಗದಂತೆ) ಮಾಡುವ ಉಪಾಯ ಕೆಳಗೆ ಕೊಡಲಾಗಿದೆ.

RELATED ARTICLES  ಹೊನ್ನಾವರ : ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾದ ದಂಪತಿ.

Step 1: ನಿಮ್ಮ ಮೊಬೈಲ್ ಗೆ ಯಾವುದೇ ವಾಟ್ಸ್ಯಾಪ್ ಸಂದೇಶ ಬಂದಾಗ, ಮೊದಲು ನಿಮ್ಮ ಫೋನ್ ನ ನೋಟಿಫಿಕೇಶನ್ ಬಾರ್ ಕೆಳಗೆಳೆದು, ನಿಮ್ಮ ಫೋನ್ ಅನ್ನು ಏರೋಪ್ಲೇನ್ ಮೋಡ್ ಗೆ ಹಾಕಿರಿ.

Step 2: ಮೊಬೈಲ್ ಏರೋಪ್ಲೇನ್ ಮೋಡ್ ನಲ್ಲಿ ಆಫ್ ಲೈನ್ ಆದ ನಂತರ ನಿಮ್ಮ ವಾಟ್ಸ್ಯಾಪ್ ಆ್ಯಪ್ ತೆರೆದು ಓದಿರಿ.

RELATED ARTICLES  ಜುಲೈ 27 ಕ್ಕೆ ಸಂಭವಿಸಲಿದೆ ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣ: ಇಲ್ಲಿದೆ ಪೂರ್ಣ ಮಾಹಿತಿ

Step 3: ಮೆಸೆಜ್ ಓದಿದ ನಂತರ ಆ್ಯಪ್ ಕ್ಲೋಸ್ ಮಾಡಿ. ನಂತರ ಮೈನ್ ಮೆನು ಕೀ ಒತ್ತಿ ಮಲ್ಟಿ ವಿಂಡೋ ತೆರೆದು ಅಲ್ಲಿ ತೆರೆದಿರುವ ವಾಟ್ಸ್ಯಾಪ್ ಆ್ಯಪ್ ಸ್ವೈಪ್ ಮಾಡಿ ಮುಚ್ಚಿರಿ. ಇಲ್ಲಾಂದ್ರೆ ನಮ್ತರ ಆನ್ ಲೈನ್ ಆದಾಗ ಆ ಆ್ಯಪ್ ತೆದೆದುಕೊಂಡು ಗ್ರೀನ್ ಟಿಕ್ ಆಗುತ್ತೆ.

Step 4: ವಾಟ್ಸ್ಯಾಪ್ ಆ್ಯಪ್ ಅನ್ನು ಸಂಪೂರ್ಣ ಮುಚ್ಚಿದ ನಂತರ ಮತ್ತೆ ಏರೋಪ್ಲೇನ್ ಮೋಡ್ ಆಫ್ ಮಾಡಿ.

ಈ ರೀತಿಯಾಗಿ ಕೆಲವೊಬ್ಬರ ಅಂದೇಶಗಳನ್ನು ಓದಿದರೂ ಅವರಿಗೆ ತಿಳಿಯದಂತೆ ಮಾಡು ಉಪಾಯವಾಗಿದೆ.