Home Food ‘ಮಸಾಲೆ ಇಡ್ಲಿ’ ಹೇಗೆ ಮಾಡುವುದು ಗೊತ್ತೇ?; ಇಲ್ಲಿದೆ ನೋಡಿ ರೆಸಿಪಿ!

‘ಮಸಾಲೆ ಇಡ್ಲಿ’ ಹೇಗೆ ಮಾಡುವುದು ಗೊತ್ತೇ?; ಇಲ್ಲಿದೆ ನೋಡಿ ರೆಸಿಪಿ!

ಇಡ್ಲಿ ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತು. ಆದರೆ ಅದನ್ನು ತಿಂದೂ ತಿಂದೂ ಬೋರಾಗಿದ್ದರೆ, ಇಲ್ಲಿ ನಿಮಗೊಂದು ಅದ್ಭುತವಾದ ‘ಮಸಾಲ ಇಡ್ಲಿ’ ಅಂದರೆ ಇಡ್ಲಿಯನ್ನೇ ಇನ್ನೊಂದು ವಿಧವಾಗಿ ಮಾಡುವ ರೀತಿಯನ್ನು ತೋರಿಸುತ್ತೇವೆ ಬನ್ನಿ.

ಬೇಕಾಗುವ ಪದಾರ್ಥಗಳು:

ಇಡ್ಲಿ ಹಿಟ್ಟು – 2 ಬಟ್ಟಲು
ಕರಿಬೇವು- 5-6 ಎಳೆ
ಸಾಸಿವೆ – ಸ್ವಲ್ಪ
ಇಂಗು- ಚಿಟಿಕೆ
ಈರುಳ್ಳಿ-ಸಣ್ಣಗೆ ಹೆಚ್ಚಿದ್ದು

ಜೀರಿಗೆ- ಸ್ವಲ್ಪ
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸಿನ ಕಾಯಿ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:

ಮೊದಲು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು.
ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಬೇಕು. ಆಮೇಲೆ ಹಸಿಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು.

ಹಿಟ್ಟು ತೆಗೆದುಕೊಂಡು ಅದಕ್ಕೆ ಈ ಒಗ್ಗರಣೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಇಡ್ಲಿ ತಟ್ಟೆಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು.
ನಂತರ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಮಸಾಲೆ ಇಡ್ಲಿ ಸವಿಯಲು ಸಿದ್ಧ.