ಈ ಮಾತು ನಾವು ಹೇಳುತ್ತಿರುವ ಮಾತಲ್ಲ ಬಿಜೆಪಿ ವರಿಷ್ಠರು ಹೇಳುತ್ತಿರುವ ಮಾತು. ಬರುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ . ಆದರೆ ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಯಾರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬುದು ವರಿಷ್ಠರಿಗೆ ಯಕ್ಷ ಪ್ರಶ್ನೆಯಾಗಿದೆ .

ಪ್ರಬಲ ಟಿಕೆಟ್ ಆಕಾಂಕ್ಷಿಗಳ ದಂಡೇ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿರುವುದು ಈಗ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಿದ್ದಾರೆ ಹಿರಿಯರು.ಯಾರನ್ನು ಕಣಕ್ಕಿಳಿಸಬೇಕು? ಕಣಕ್ಕಿಳಿಸಿದ ನಂತರ ಇತರರನ್ನು ಹೇಗೆ ಸಲಹಬೇಕು? ಎಂಬುದು ವರಿಷ್ಠರ ಮುಂದಿರುವ ಪ್ರಶ್ನೆಯಾಗಿದೆಯಂತೆ. ಹೀಗಾಗಿಯೇ ಇನ್ನೂ ಕೂಡಾ ಟಿಕೆಟ್ ಗೊಂದಲ ಬಗೆಹರಿದಿಲ್ಲ.

ಆದರೆ ಜನತೆಯ ಆಶಯದಂತೆ ಜನರು ಇಷ್ಟಪಡುವ ನಾಯಕರನ್ನೇ ಮುಂದಿನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ. ಬಿಜೆಪಿಯ ಆಪ್ತ ವಲಯ ಸತ್ವಾಧಾರ ನ್ಯೂಸ್ ಗೆ ನೀಡಿದ ಮಾಹಿತಿಯಂತೆ ನೇರವಾಗಿ ಜನತೆಯಿಂದಲೇ ಅವರ ಆಪ್ತ ವಲಯ ಹಾಗೂ ಮುಖಂಡರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಅದನ್ನು ಆಧಾರವಾಗಿಟ್ಟುಕೊಂಡು ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂಬ ಅಭಿಪ್ರಾಯ ನೀಡಿದ್ದಾರೆ. ಫೋನ್ ಕಾಲ್ ಮೂಲಕ ಮಾತನಾಡಿದ ಬಿಜೆಪಿ ಪ್ರಮುಖರು ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಉತ್ತಮ‌ನಾಯಕನನ್ನೇ ಕಣಕ್ಕಿಳಿಸುತ್ತೇವೆ. ಜನತೆಯ ಅಭಿಪ್ರಾಯವೇ ಪಕ್ಷದ ನಿಲುವಾಗಿದೆ ಎಂದಿದ್ದಾರೆ.

RELATED ARTICLES  ಇಂದು (ಜೂ. ೪) ಹಣತೆ ವೇದಿಕೆಯಲ್ಲಿ ಜಯಚಂದ್ರನ್ ಕೃತಿ ಬಿಡುಗಡೆ

ಅನೇಕ ಜನರ ನಡುವೆ ಯಾರು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ನಿಖರವಾಗಿ ಉತ್ತರ ಸಿಕ್ಕಿಲ್ಲವಾದರೂ ಇನ್ನು ಒಂದೆರಡು ದಿನದಲ್ಲಿಯೇ ಈ ಬಗ್ಗೆ ಸ್ಪಷ್ಟ ಮಾಹಿತಿ ನಿಮ್ಮ ಕಣ್ಣೆದುರು ಬರಲಿದೆ ಎಂದು ಬಿಜೆಪಿ ಮುಖಂಡರೇ ಸ್ಪಷ್ಟಪಡಿಸಿದ್ದಾರೆ .

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಅರಬೈಲ್ ಘಟ್ಟದಲ್ಲಿ ಉರುಳಿಸಿದ ಲಾರಿ

ಆದರೆ ಜನತೆ ಮೆಚ್ಚುವ ನಾಯಕನೇ ಈ ಬಾರಿಯ ಟಿಕೆಟ್ ಪಡೆದುಕೊಳ್ಳುತ್ತಾರೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸುವ ವರಿಷ್ಠರು ಯಾರನ್ನೇ ಚುನಾವಣಾ ಕಣದಲ್ಲಿ ನಿಲ್ಲಿಸಿದರೂ ಅವರನ್ನು ಬೆಂಬಲಿಸುವಂತೆ ಇತರರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ .

ಒಟ್ನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ, ಜನತೆ ಮಾತ್ರ ಬಿಜೆಪಿ ಟಿಕೆಟ್ ಯಾರಿಗೆ ನೀಡುತ್ತದೆ ಎನ್ನುವುದನ್ನು ಕಾದು ಕುಳಿತಿರುವುದು ಮಾತ್ರ ಸತ್ಯ .