ಸರಕಾರದ ಬೆಳೆ ಸಾಲ ಮನ್ನಾ ದ ಸೌಲಭ್ಯ,ಸರಕಾರದ ಆದೇಶದಂತೆ ಅರ್ಹರು ಯಾರು?
ಅರ್ಹರಿದ್ದೂ ನತದೃಷ್ಠರಾದವರಾರು?
ಮನ್ನಾ ಮಾನದಂಡವನ್ನು ಹೇಗೆ ಮಾರ್ಪಾಟುಮಾಡಿದಲ್ಲಿ ಸೂಕ್ತ ವಾದೀತು! ?
ಒಂದು ಟಿಪ್ಪಣಿ :
ಬೆಳೆ ಸಾಲದ ಸೌಲಭ್ಯ ಪಡೆದವರಿಗೆ ಸಾಲದ ವಾಯಿದೆ :ತಾ : 31 ಮೇ 2017 ಎಂದು ನೀಡಲಾಗಿತ್ತು.
೧) ಹಲವರು ಪುನ: ಬೆಳೆ ಸಾಲ ಪಡೆದರಾಯಿತು ಎಂದು ಈ ಮೇಲಿನ ವಾಯಿದೆಯೊಳಗೆ ಹೇಗೋ ರಖಂ ಹೊಂದಿಸಿ ಸಾಲ ಮರುಪಾವತಿಸಿ ಹೊಸ ಸಾಲದ ಅರ್ಜಿ ನೀಡಿ ಪುನ: ಬೆಳೆ ಸಾಲ ಪಡೆದರು.
೨)ಕೆಲವರಿಗೆ ಈ ವಾಯಿದೆಯೊಳಗಾಗಿ /ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ.
ಸರಕಾರದ ಆದೇಶದಂತೆ ಈ ಮೇಲಿನ ಎರಡೂ ವಿಧದ ರೈತರು ಪಡೆದ ರೂ.50000 ವರೆಗಿನ ಸಾಲದ ಮೊತ್ತವನ್ನು ಮನ್ನಾ ಮಾಡುತ್ತಾರೆ
” ಇವರೆಲ್ಲ ಸಾಲ ಮನ್ನಾದ ಫಲಾನುಭವಿಗಳು”.
ಸರಿ,…
ಇಲ್ಲೊಂದು ಸ್ಥಿತಿಯ ರೈತರ ಕುರಿತು ಪ್ರಸ್ಥಾಪಿಸಲೇ ಬೇಕು.ಅವರಾರೆಂದರೆ,
ವಾಯಿದೆಯೊಳಗಾಗಿ ಬೆಳೆಸಾಲ ಪೂರ್ತಿ ಜಮಾಪಡಿಸಿ ಸಾಲ ಚುಕ್ತಾ ಪಡಿಸಿದ್ದಾರೆ.ಹೊಸ ಸಾಲದ ಅರ್ಜಿ ಗೆ ಸಂಬಧಿಸಿದ ಕಾಗದ ಪತ್ರ ತಯಾರಿ ನಡೆಸಿದ್ದಿದೆ /ಅರ್ಜಿ ಪರಿಶೀಲನಾ ಹಂತದಲ್ಲಿದೆ.ಅಂದರೆ ಮತ್ತೆ ಸಾಲ ಪಡೆದಿಲ್ಲದವರು ಇವರು.ಮತ್ತೆ ಖಂಡಿತವಾಗಿಯೂ ಸಾಲ ಪಡೆಯಲೇಬೇಕಾದವರಿವರು.
*ಈ ವಿಧದ ರೈತರು ಸಾಲ ಮನ್ನಾದ ಸೌಲಭ್ಯದಿಂದ ವಂಚಿತ ನತದೃಷ್ಠರಾಗಿದ್ದಾರೆ*.ಇವರು ಮಾಡಿದ ತಪ್ಪೇನು ಗೊತ್ತಾ ? ಸಕಾಲದಲ್ಲಿ ಸಾಲ ತುಂಬಿದ್ದು ಹಾಗು ಸಾಲದ ಅರ್ಜಿ ಇನ್ನೂ ನೀಡದೇ ಇದ್ದದ್ದು.ಇದು ಎಷ್ಟರ ಮಟ್ಟಿಗೆ ಸರಿ?
ಖಂಡಿತ ಇದು ನ್ಯಾಯಸಮ್ಮತವಲ್ಲ.
ಹಾಗಿದ್ದರೆ ಇದಕ್ಕೆ ಪರಿಹಾರ?
ಇಚ್ಛಾಶಕ್ತಿಯಿದ್ದರೆ ಸಾಲ ಮನ್ನಾ ಜ್ಯಾರಿ ಕ್ರಮದಲ್ಲಿ ಈ ಕೆಳಗಿನಂತೆ ಮಾನದಂಡ ಅನುಸರಿಸಬಹುದೆಂತ ಅಭಿಪ್ರಾಯಿಸಿದೆ.:
ಈಗಲೂ ಕಾಲ ಮಿಂಚಿಲ್ಲ,ಸುತ್ತೋಲೆಗೆ ತಿದ್ದುಪಡಿ ತಂದು
2016-2017 ನೇ ಸಾಲಿನಲ್ಲಿ ಯಾವ ಯಾವ ರೈತರು ಬೆಳೆ ಸಾಲ ಪಡೆದಿದ್ದರೋ(ಅಂದರೆ ಮೇ 31 ರವರೆಗಿನ ಅವಧಿಯಲ್ಲಿ ಸಾಲ ಮರುಪಾವತಿಸಿದವರಾಗಲೀ ಅಥವಾ ಸಾಲ ಮರುಪಾವತಿಸದೇ ಕಟಬಾಕಿದಾರರಾಗಿರಲಿ)
ಅವರೆಲ್ಲರನ್ನೂ ಈ ಸಾಲ ಮನ್ನಾ ದ ಫಲಾನುಭವಿಗಳೆಂದು ಘೋಷಿಸಬೇಕು. ಆಗ ಈ ಜೂನ 20 ರ ತಾರೀಖಿನ ಸಮಸ್ಯೆ ಉದ್ಭವಿಸುವುದಿಲ್ಲ.
ಅದಿಲ್ಲವಾದರೆ ಇನ್ನು ಮುಂದೆ ವಾಯಿದೆಯೊಳಗಾಗಿ ಸಾಲ ಮರುಪಾವತಿಸುವ ಗುಣವೇ ಸಾಮಾನ್ಯ ಜನರಿಂದ ದೂರವಾದೀತು,ಈ ಮನಸ್ಥಿತಿ ಬದಲಾವಣೆಗೆ ಸರಕಾರವೇ ಕಾರಣವಾದಂತಾಗುವುದಂತೂ ಖಚಿತ.
ಅಲ್ಲವೇ?
ನೀವೇನಂತೀರೀ ?
ಜಯದೇವ ಬಳಗಂಡಿ. ಕುಮಟಾ