ಕುಮಟಾ: ಬ್ಲಾಕ್ ಕಾಂಗ್ರೆಸ್ ಕುಮಟಾ ಇವರ ವತಿಯಿಂದ ದೇವಗಿರಿ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವನ್ನು ಬೆಂಬಲಿಸಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ವಿನಂತಿಸಿಕೊಂಡರು.

ಮಹೇಶ ನಾಯ್ಕರವರು ಮಾತನಾಡಿ ಸಿದ್ಧರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದೆ. ಇಂತ ಸರ್ಕಾರವನ್ನು ಪುನಃ ಆಯ್ಕೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿ ಎಂದರು.

RELATED ARTICLES  ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಶಿಕ್ಷಣ ಸಚಿವರ ಭೇಟಿ : ಶಿಕ್ಷಣದಲ್ಲಿ ಭಾರತೀಯತೆ ಇಂದಿನ ಅಗತ್ಯ ಎಂದ ಬಿ.ಸಿ ನಾಗೇಶ್

ಅದರಂತೆ ಶಾಸಕಿ ಶಾರದಾ ಶೆಟ್ಟಿ ಕೂಡ ತುಂಬಾ ಜನಾನುರಾಗಿಗಳು, ಕಳೆದ ಇವರ ಅವಧಿಯಲ್ಲಿ ನಮ್ಮ ಭಾಗಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ನುಡಿದಂತೆ ಮಾಡಿಸಿಕೊಟ್ಟಿದ್ದಾರೆ. ಆ ಒಂದು ದಿಸೆಯಲ್ಲಿ ನಾವು ಶಾಸಕರನ್ನು ಪುನಃ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಶ್ರೀ ರವಿಕುಮಾರ್ ಮೋಹನ್ ಶೆಟ್ಟಿ, ಶ್ರೀಮತಿ ತಾರಾ ಗೌಡ, ಶ್ರೀಮತಿ ಸುರೇಖಾ ವಾರೆಕರ, ಶ್ರೀ ನಾಗಪ್ಪ ಹರಿಕಂತ್ರ, ಶ್ರೀ ಸಚಿನ್ ನಾಯ್ಕ, ಶ್ರೀ ರವಿ ಅಂಬಿಗ ಧಾರೇಶ್ವರ, ಶ್ರೀ ಪಾಂಡು ಪಟಗಾರ,ಶ್ರೀ ಪಾಂಡು ಹರಿಕಂತ್ರ ಹಾಗೂ ಶ್ರೀ ರಾಜು ಅಂಬಿಗ ದಿವಗಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯ- ಡಾ. ನಾಗರಾಜ ಭಟ್.