ಕಾಲವೊಂದಿತ್ತು ಗುಣ, ವಿದ್ಯೆ, ಸಾಮರ್ಥ್ಯಕ್ಕೆ ತಕ್ಕನಾದ ಬೆಲೆ ಸಿಗುವ ಕಾಲವದು.
ಈಗ ಕಾಲ ಬದಲಾಯಿತೋ, ನಾವೇ ಬದಲಾದೆವೋ ತೆಳ್ಳಗಿನ ಯದು. ಪರಿಸ್ಥಿತಿಯಂತೂ ಬದಲಾಗಿದೆ.
ಯಸ್ಯಾಸ್ತಿವಿತ್ತಂ ಸನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತೀ.
ದುಡ್ಡೇ ದೊಡ್ಡಪ್ಪ ಎನ್ನುವ ಕಾಲವಿದು. ದುಡ್ಡಿರುವವರ ಕಾಲವಿದು. ಅವರದ್ದೇ ಆಟ, ಇಲ್ಲದಿರುವವರಿಗೆ ಅವರದ್ದು ಕಾಟ.
ದುಡ್ಡಿರುವವರದ್ದು ಯಾರನ್ನೂ , ಏನನ್ನೂ ಕೊಳ್ಳಬಲ್ಲೆನೆಂಬ ವಿಶ್ವಾಸವಾದರೆ, ದುಡ್ಡು ಮಾಡಬಯಸುವವರದ್ದು ದುಡ್ಡಿಗಾಗಿ ತನ್ನನ್ನೂ ಮಾರಿಕೊಳ್ಳಬಲ್ಲೆ ಎನ್ನುವ ಭಾವ.
ದುಡ್ಡಿಗಾಗಿ ದೇಶವನ್ನೂ ಮಾರಿಬಿಟ್ಟಾರು ಎನ್ನುವ ಭಯ ನಮ್ಮನ್ನು ಕಾಡದಿರದು.
ದುಡ್ಡಿರುವ ದೊಡ್ಡಪ್ಪಂದಿರ ಹಾಗೂ ದೊಡ್ಡಪ್ಪರಾಗಲು ಹಪಹಪುಸುವವರ ನಡುವೆ ಜನಸಾಮಾನ್ಯ ಸಿಕ್ಕು ಅಮಾನ್ಯನಾಗುತ್ತಾ ಬದುಕುತ್ತಿದ್ದಾನೆ. ಅವನುಗೂ ದೊಡ್ಡಪ್ಪನಾಗುವ ಹುಚ್ಚು ಹಿಡಿದರೆ…?‍?

RELATED ARTICLES  “ ದೇವರ ಇರುವಿಕೆಗೆ ಶ್ರುತಿ-ಸ್ಮ್ರತಿ ಆಧಾರ”( ಶ್ರೀಧರಾಮೃತ ವಚನಮಾಲೆ’).