ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸಿ ವೃಂದದ ಶೀಘ್ರಲಿಪಿಕಾರರು, ಬೆರಳಚ್ಚುಗಾರರು, ಕ್ಲರ್ಕ ಕಂ ಟೈಪಿಸ್ಟ್ ಹಾಗೂ ಡಿ ವೃಂದದ ದಲಾಯತ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 67
ಹುದ್ದೆಗಳ ವಿವರ
1.ಶೀಘ್ರಲಿಪಿಕಾರರು – 13
2.ಬೆರಳಚ್ಚುಗಾರರು – 09
3.ಕ್ಲರ್ಕ ಕಂ ಟೈಪಿಸ್ಟ್ – 32
4. ದಲಾಯತ್ – 13

ವಿದ್ಯಾರ್ಹತೆ : ಕ್ರ. ಸಂ 1 ರಿಂದ 3ರವರೆಗಿನ ಹುದ್ದೆಗಳಿಗೆ ಪದವಿ ಪೂರ್ಣ ಶಿಕ್ಷಣ ಪರೀಕ್ಷೆ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಕ್ರ ಸಂ 4 ರ ಹುದ್ದೆಗೆ ಎಸ್ ಎಸ್ ಎಲ್ ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.

RELATED ARTICLES  ಮತ್ತೆ ಮಳೆಯ ಮುನ್ಸೂಚನೆ : ಮತ್ತೆ ಧಾರಾಕಾರ ಮಳೆ : ಎಲ್ಲೆಲ್ಲಿ ಮಳೆಯಾಗಲಿದೆ..?

ವಯೋಮಿತಿ : ಕನಿಷ್ಠ 18 ವರ್ಷ ವಯಸ್ಸು ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ, ಪ್ರ.-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಮಾಡಲಾಗಿದೆ.
ಶುಲ್ಕ : ಸಾಮಾನ್ಯ ವರ್ಗ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ ಮತ್ತು ಮಾಜಿ ಸೈನಿಕರಿಗೆ ಕ್ರ. ಸಂ 1ರ ಹುದ್ದೆಗೆ 300 ರೂ, ಕ್ರ. ಸಂ 2 ಮತ್ತು 3ರ ಹುದ್ದೆಗೆ 250 ರೂ, ಕ್ರ. ಸಂ 4ರ ಹುದ್ದೆಗೆ 150 ರೂ ನಿಗದಿಗೊಳಿಸಲಾಗಿದೆ. ಪ.ಜಾ, ಪ.ಪಂ, ಪ್ರವರ್ಗ 1 ಮತ್ತು ವಿಕಲಚೇತನ ಆಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2018

RELATED ARTICLES  ಭಟ್ಕಳ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ/ಶಿಕ್ಷಕಿ ಹಾಗೂ ಉಪನ್ಯಾಸಕರುಗಳಿಗೆ ಕವನ ರಚನಾ ಸ್ಪರ್ಧೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.lokayukta.kar.nic.in ಗೆ ಭೇಟಿ ನೀಡಿ.