123 copy 1

ಯಾವುದೇ ಭಾಷೆಯಾಗಲಿ ಹೇಳುವಾಗ ಮತ್ತು ಬರೆಯುವಾಗ ಸ್ಪಷ್ಟತೆ ಬೇಕಾಗುತ್ತದೆ. ಒಂದು ಅಕ್ಷರ ತಪ್ಪಿದರೂ ಅರ್ಥ ಬೇರೆ ಎನ್ನಿಸಿಕೊಳ್ಳುತ್ತದೆ. ಅಕ್ಷರವೇಕೆ ಒಂದು ದೀರ್ಘ, ಒತ್ತಕ್ಷರ ಕೊಡುವಲ್ಲಿ ಹಿಂದೆ ಮುಂದಾದರೂ ಅರ್ಥ ಬೇರೆ ಆಗುತ್ತದೆ. ಉದಾಹರಣೆಗೆ ಆದರ ಆಥಿತ್ಯ ಎಂದು ಹೇಳುವಲ್ಲಿ ಕೆಲವರು ಹೇಳುವ ಮಾತು ಕೇಳಲು ಆಗದಷ್ಟು ಕೆಟ್ಟದಾಗುತ್ತದೆ. ಕೆಲವರು ಅ ಇರುವಲ್ಲಿ ಹ ಹಾಗೆ ಹ ಇರುವಲ್ಲಿ ಅ ಅಕ್ಷರ ಸೇರಿಸುತ್ತಾರೆ. ಅದರಂತೆ ಆದರ ಆಥಿತ್ಯ ಎನ್ನುವಲ್ಲಿ ಹ ಸೇರಿಸಿ ನೀವೆ ಉಹಿಸಿಕೊಳ್ಳಿ ಏನಾಗುವುದು ಎಂದು.

ಹೀಗೆ ಈ ಶಬ್ದ ಬಳಕೆಯಲ್ಲಿ ಬಹಳ ಅಪಬ್ರಂಶುವಾಗಿ ಉಪಯೋಗಿಸಿ ಕೆಲವು ಸಲ ದೊಡ್ಡ ಜನ ಎನ್ನಿಸಿಕೊಂಡವರು ನಗೆಪಾಟಲಿಗೆ ಒಳಗಾದವರು ಇದ್ದಾರೆ. ಜೀವಿ ಎಂದು ಹೇಳಲು ಜೀಂವಿ, ಹಾವಿಗೆ ಹಾಂವು ಎಂದು ಮಧ್ಯದಲ್ಲಿ ಸೊನ್ನೆಯನ್ನು ಸೇರಿಸುವುದು ಕೇಳಿದ್ದೇವೆ. ಮೊದಲೆಲ್ಲ ಇದು ಮೋಜೆನಿಸುತ್ತಿತ್ತು. ಆದರೆ ಇದು ಕೊನೆಯಲ್ಲಿ ತಿಳಿಯಿತು ಇವರಿಗೆ ಉಚ್ಚಾರಣೆ ಮಾಡಲು ಬರುವುದಿಲ್ಲ ಎಂದು. ‘ಶ’ ಇದ್ದಲ್ಲಿ ‘ಸ’ ಎಂದು ‘ಸ’ ಇದ್ದಲ್ಲಿ ‘ಶ’ ಎಂದು ಶಬ್ಧಗಳಲ್ಲಿ ಬಳಸುತ್ತಾರೆ ಕಸೂತಿ ಎನ್ನುವಲ್ಲಿ ಕಶೂತಿ ಎಂದು ಶಕ್ತಿ ಎನ್ನುವಲ್ಲಿ ಸಕ್ತಿ ಎಂದು ಹೇಳುತ್ತಿರುತ್ತಾರೆ. ಈ ರೀತಿಯ ಉಚ್ಚಾರ ಅಥವಾ ಬರವಣಿಗೆಯಿಂದ ಶಬ್ಧಗಳ ಸಂಗತಿಗಳೆ ಬದಲಾಗಬಹುದು.
ನನಗೆ ಕೆಲವು ಹೊಸ ಬರಹಗಾರರು ಕವನ ಕಥೆಗಳನ್ನು ಕಳುಹಿಸಿ ಸರಿಯಾಗಿದೆಯಾ ನೋಡಿ ಎಂದು ಕಳಿಸುತ್ತಾರೆ. ಹಾಗೆ ಮೊನ್ನೆದಿನ ಒಬ್ಬ ಹುಡುಗನ ಪುಟ್ಟ ಲೇಖನ ನನ್ನ ಕೈಯ್ಯಲ್ಲಿತ್ತು. ಅದರಲ್ಲಿ ಸಂಸಾರದ ಬಗ್ಗೆ ಬರೆದಿದ್ದನು. ಅಲ್ಲಿ ‘ಗಂಡ ಹೆಂಡತಿಯ ಮಧ್ಯ ವಿರಸ’ ಎಂದು ಬರೆಯುವ ಬದಲು ‘ಗಂಡ ಹೆಂಡತಿಯ ಮದ್ಯ ವಿರಸ’ ಎಂದು ಬರೆದಿದ್ದ. ನಾನು ಆ ಹುಡುಗನನ್ನು ಪ್ರಶ್ನಿಸಿದೆ. ಮದ್ಯಕ್ಕೂ ಮಧ್ಯಕ್ಕೂ ಇರುವ ವ್ಯತ್ಯಾಸ ನಿನಗೆ ಗೊತ್ತೆ ಎಂದು. ಆತ ನನ್ನ ಮುಖವನ್ನು ನೋಡಿದ. ಮಧ್ಯ ಅಂದರೆ ನಡುವೆ, ಮದ್ಯ ಎಂದರೆ ಶರಾಬು ಅಥವಾ ಸರಾಯಿ ಎಂದೆ ಆತನಲ್ಲಿ ಒಮ್ಮೆ ನೀನು ಈ ಸಾಲನ್ನು ಓದು ಎಂದೆ. ಆಗ ತಿಳಿಯಿತು. ತಪ್ಪು ಬರವಣಿಗೆಯಲ್ಲಿ ಮಾತ್ರವಲ್ಲ. ಮಾತಿನಲ್ಲಿದೆ ಎಂದು. ನಿತ್ಯ ಸರಳವಾದ ಆಡುಮಾತಿನಲ್ಲಿ ಅಕ್ಷರಗಳಿಗೆ ಒತ್ತು, ಧೀರ್ಘಗಳು ಇಲ್ಲದೆ ಮಾತಾಡಿ ಬಿಡುತ್ತೇವೆ. ಅದೇ ಮಾತು ಬರಹದಲ್ಲೂ ಇಳಿಯುತ್ತದೆ. ಮಾತನಾಡುವಾಗ ಹೆಚ್ಚು ಗಮನಹರಿಸುವುದಿಲ್ಲ. ಆದರೆ ಬರವಣಿಗೆಯ ರೂಪ ತಾಳಿದಾಗ ಸ್ಪಷ್ಟವಾಗಿ ನಾವು ಕಂಡು ಹಿಡಿಯುತ್ತೇವೆ.

RELATED ARTICLES  ಮೋದಿಗೆ ಬಯ್ಯೋ ಮೊದಲು ಇಲ್ಲಿ ಗಮನಿಸಿ.

ಎಷ್ಟೋ ಮಕ್ಕಳು ಹತ್ತನೇ ತರಗತಿ ಪಿಯುಸಿ ಯಲ್ಲಿ ಈ ಅಕ್ಷರದ ಬರವಣಿಗೆಯಲ್ಲಿ ತಪ್ಪು ಮಾಡಿ ತುಂಬಾ ಕಡಿಮೆ ಅಂಕ ಪಡೆದವರಿದ್ದಾರೆ. ನಂತರ ಪರ್ಸೆಂಟೆಜ್ ಕಡಿಮೆಯಾಯಿತು ಎಂದು ಹೇಳುತ್ತಾರೆ. ಅದರಲ್ಲು ಕನ್ನಡ ಭಾಷೆಯಲ್ಲಿ ಈ ಒತ್ತಕ್ಷರ ಮತ್ತು ಧೀರ್ಘಗಳು ಹೆಚ್ಚು. ಸ್ವಲ್ಪ ಗಮನದಲ್ಲಿಟ್ಟು ಬರೆದರೆ ಸುಂದರದ ಜೊತೆ ತಪ್ಪಿಲ್ಲದ ಅಕ್ಷರಗಳು ಮೂಡುತ್ತವೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).