ರಾತ್ರಿ ವೇಳೆಯಲ್ಲಿ ಆರಾಮದಾಯಕವಾಗಿರಲು ಆಹಾರ ಪ್ರಮುಖವಾದ ಪಾತ್ರ ವಹಿಸುತ್ತದೆ. ನೀವು ತಿನ್ನುವ ಆಹಾರದಿಂದ ಧೀರ್ಘಕಾಲದ ವರೆಗೂ ಉತ್ತಮ ನಿದ್ರೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಬಾದಾಮಿ, ಕಿವಿ ಹಣ್ಣು, ಬಾಳೆಹಣ್ಣು, ಗಜ್ಜರಿ, ಹಾಲು, ಓಟ್ಮೀಲ್ ಮತ್ತು ಬಿಳಿ ಅಕ್ಕಿಗಳು ನಿದ್ರೆ ಹೆಚ್ಚಿಸುವ ಪದಾರ್ಥಗಳನ್ನು ಹೊಂದಿರುವ ಆಹಾರಗಳಾಗಿವೆ.
ಇಂತಹ ಆಹಾರಗಳು ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಲು ಹೇಗೆ ನೆರವಾಗಲಿವೆ ಎಂಬುದರ ಬಗ್ಗೆ ಸಂಡೇ ಮ್ಯಾಟ್ರೆಸೆಸ್ ಸಿಇಓ ಅಲ್ಫಾಸೆ ರೆಡ್ಡಿ ಹಾಗೂ ಸಿಕ್ಲೊ ಕೆಫೆ ಕುಲಿನಾರಿ ಮುಖ್ಯಸ್ಥ ರಿನ್ ಮೈ ಅಚಾರ್ಯ, ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಓಟ್ಮೀಲ್ ಮತ್ತು ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಮಲಗುವ ಮುಂಚೆ ಇವುಗಳನ್ನು ಸೇವಿಸುವುದರಿಂದ ಮೃದುತ್ವ ಉಂಟಾಗುತ್ತದೆ ಎಂದು ಮಾಹಿತಿ ತಿಳಿದುಬಂದಿದೆ.ಓಟ್ಮೀಲ್ ಕೂಡಾ ಮೆಲಟೊನಿನ್ ಮೂಲವಾಗಿದ್ದು, ಕತ್ತಲೆಯಿಂದ ಪ್ರಚೋದಿಸಲ್ಪಟ್ಟ ಹಾರ್ಮೋನ್ ನಿಮ್ಮ ದೇಹವನ್ನು ನಿದ್ರೆ ಮಾಡುವ ಸಮಯ ಎಂದು ಸೂಚಿಸುತ್ತದೆ.
ಆಹಾರದೊಂದಿಗೆ ಸಲಾಡ್ ಹಾಗೂ ಕಾಬೂಲಿ ಚನ್ನ ಸೇವಿಸುವುದರಿಂದಲೂ ಉತ್ತಮವಾಗಿ ನಿದ್ರೆ ಮಾಡಬಹುದಾಗಿದೆ. ಈ ಆಹಾರಗಳಲ್ಲಿ ಪ್ರೋಟಿನ್ ಅಧಿಕ ಪ್ರಮಾಣದಲ್ಲಿರುತ್ತದೆ. ಗಜ್ಜರಿಯಲ್ಲಿ ಬಿ 6 ವಿಟಮಿನ್ ಇದ್ದು, ದೇಹ ಮೆಲಟೊನಿನ್ ಬಿಡುಗಡೆ ಮಾಡಲು ನೆರವಾಗುತ್ತದೆ ಎಂದು ತಿಳಿದುಬಂದಿದೆ.
ಇಲ್ಲಿ ಕೆಲವೊಂದು ಪಾಕ ವಿಧಾನಗಳಿವೆ
ಕ್ವಿನೋ, ಬೀಟ್ರೂಟ್ ಮತ್ತು ಕಿತ್ತಳೆ ಸಲಾಡ್
ಬೇಕಾಗುವ ಪದಾರ್ಥಗಳು
ಕ್ವಿನೋ -50 ಗ್ರಾಂ.
ಬಿಸಿ ನೀರು – 150 ಮಿಲಿ
ಬೀಟ್ರೋಟ್ – ಒಂದು
ಕಿತ್ತಳೆ- ಒಂದು
ಸಂಯೊಜಿತ ಲೆಟ್ಯುಸ್ -100 ಗ್ರಾಂ.
ಆಲಿವ್ ಎಣ್ಣೆ- ಒಂದು ಸ್ಪೂನ್
ಬಾಲ್ಸಾಮಿಕ್ ವಿನೆಗರ್- ಒಂದು ಸ್ಪೂನ್
ಹುರಿದ ಬಾದಾಮಿ – 2 ಗ್ರಾಂ
ರುಚಿಗೆ ಸಾಕಷ್ಟು ಉಪ್ಪು ಮತ್ತು ಖಾರ
ಮಾಡುವ ವಿಧಾನ : ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 150 ಮಿಲಿ ಬಿಸಿ ನೀರು ಹಾಕಿ,10 ನಿಮಿಷಗಳ ಕಾಲ ಕ್ವಿನೋವನ್ನು ನೆನೆಸಿ, ಅದನ್ನು ತಗ್ಗಿಸಿ ಮತ್ತು ತಾಜಾ ಬಟ್ಟಲಿನಲ್ಲಿ ಇರಿಸಿ, ಸ್ವಲ್ಪ ಪ್ರಮಾಣ ಆಲಿವ್ ಎಣ್ಣೆ ಹಾಗೂ ಬಾಲ್ಸಾಮಿಕ್ ವಿನೆಗರ್ ಹಾಕಿ. ಅದನ್ನು ಸರಿಯಾಗಿ ಬೆರೆಸಲು ವರ್ಗೀಕರಿಸಿದ ಲೆಟಿಸ್ ಹಾಕಿ, ತದನಂತರ ಅದನ್ನು ಹೊಸದಾಗಿ ಸೇವಿಸುವ ಪ್ಲೇಟ್ನಲ್ಲಿ ಇರಿಸಿ, ತದನಂತರ ಬಿಟ್ರೋಟ್ ತೆಗೆದುಕೊಂಡು ಸಣ್ಣ ಸಣ್ಣ ತುಂಡಗಳಾಗಿ ಕತ್ತರಿಸಿ, ಮಸಾಲೆ ಪದಾರ್ಥ ಹಾಗೂ ಆಲಿವ್ ಎಣ್ಣೆಯೊಂದಿಗೆ ಬೆರೆಸಿ, ಇವುಗಳನ್ನು ಅದೇ ತಟ್ಟೆಯಲ್ಲಿ ಹಾಕಿ ಮತ್ತು ಸಿಪ್ಪೆ ಸುಲಿದ ಕಿತ್ತಳೆ ಸ್ಲೈಸ್ನಿಂದ ಮೇಲಕ್ಕೆ ಇರಿಸಿ.
ಸ್ಪಿರುಲಿನಾ ಮತ್ತು ಜಲಪೇನೋ ಹ್ಯೂಮಸ್
ಪದಾರ್ಥಗಳು:
ಸಂಪೂರ್ಣ ಬೇಯಿಸಿದ ಗಜ್ಜರಿ – 125 ಗ್ರಾಂ
ತಾಹಿ ಪೇಸ್ಟ್ – ಒಂದು ಟೀಸ್ಪೂನ್
ಬೆಳ್ಳುಳ್ಳಿ – 1/2 ಟೀಸ್ಪೂನ್
ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ – 2 ಟೀಸ್ಪೂನ್
ನಿಂಬೆ ರಸ 1/2 ಟೀಸ್ಪೂನ್
ರುಚಿಗೆ ಉಪ್ಪು
ಸ್ಪಿರುಲಿನಾ 1/4 ಟೀ ಚಮಚ
ಸ್ಪಿರುಲಿನಾ ಪುಡಿ 1 ಪಿಂಚ್
ವಿಧಾನ: ಬ್ಲೆಂಡರ್ನಲ್ಲಿ, ಗಜ್ಜರಿ, ತಾಹಿನಿ, ಬೆಳ್ಳುಳ್ಳಿ, ನಿಂಬೆ ರಸ, ಉಪ್ಪನ್ನು ಸೇರಿಸಿ. ಮೃದುವಾದ ಪೇಸ್ಟ್ ಮಾಡಿ, ನಿಧಾನವಾಗಿ ಆಲಿವ್ ಎಣ್ಣೆ ಹಾಗೂ ಸ್ಪಿರುಲಿನ ಪುಡಿ ಸೇರಿಸಿ. ಜಾರ್ ನಿಂದ ತೆಗೆದ ನಂತರ ಕತ್ತರಿಸಿದ ಜಲಾಪೆನೋಸ್ ಸೇರಿಸಿ, 30 ನಿಮಿಷಗಳವರೆಗೆ ರೆಪ್ರಿಜ್ರಿರೇಟರ್ ನಲ್ಲಿಡಿ. ಸುಟ್ಟ ಪಿಟಾ ಅಥವಾ ಮೆಲೆಂಜಿನೊಂದಿಗೆ ತಂಪಾದ ಸಲಾಡ್ ನ್ನು ಸೇವಿಸಿ
ಬಾದಾಮಿ ಹಾಲಿನ ಕ್ರೀಮ್ ಬ್ರೂಲೆ
ಪದಾರ್ಥಗಳು:
ಬಾದಾಮಿ ಹಾಲು – 200 ಮಿಲಿ
ತಾಜಾ ಕೆನೆ – 400 ಮಿಲೀ
ಕ್ಯಾಸ್ಟರ್ ಸಕ್ಕರೆ – 80 ಗ್ರಾಂ
ಬಿಳಿ ಚಾಕೊಲೇಟ್ – 60 ಗ್ರಾಂ
ಎಗ್ ಹಳದಿ – 8
ಡೆಮಾರಾರಾ ಸಕ್ಕರೆ (ಪುಡಿ) – 1 ಟೀಸ್ಪೂನ್
ವಿಧಾನ: ಒಂದು ಪ್ಯಾನ್ ನಲ್ಲಿ, ಬಾದಾಮಿ ಹಾಲು, ಕೆನೆ, ಸಕ್ಕರೆ ಮತ್ತು ಬಿಳಿ ಚಾಕೊಲೇಟ್ ಅನ್ನು ಸಕ್ಕರೆ ಮತ್ತು ಚಾಕೊಲೇಟ್ ಕರಗಿಸುವವರೆಗೆ ಒಂದು ನಿಮಿಷದವರೆಗೆ ಬಿಸಿ ಮಾಡಿ. ನಂತರ ತೆಗೆದುಹಾಕಿ ತಂಪು ಮಾಡಿ. ಮೊಟ್ಟೆಯ ಹಳದಿ ಭಾಗವನ್ನು ರಾಮಿಕಿನ್ಸ್ ನಲ್ಲಿ ಸುರಿಯಿರಿ. ಬೆಳ್ಳಿ ಹಾಳೆಯೊಂದಿಗೆ ರಾಮೆಕಿನ್ಸ್ ಮುಚ್ಚಿ. ರಾಮಿ ಅರ್ಧದಷ್ಟು ಮುಚ್ಚಲು ನೀರನ್ನು ತಟ್ಟೆಗೆ ಸುರಿಯಿರಿ. 170 ಡಿಗ್ರಿ ಸೆಲ್ಸಿಯಸ್ ನಲ್ಲಿ 25-30 ನಿಮಿಷ ಬೇಯಿಸಿ. ತೆಗೆದುಹಾಕಿ, ತಂಪುಗೊಳಿಸಿ ಶೈತ್ಯೀಕರಣ ಮಾಡಿ. ಸೇವನೆಗಾಗಿ ಮೇಲ್ಭಾಗದಲ್ಲಿ ಸಕ್ಕರೆ ಪೌಡರ್ ಸಿಂಪಡಿಸಿ.