ಬರವಣಿಗೆ :- ಶಿಶಿರ ಅಂಗಡಿ.
ಒಂದು ಕಪ್ ಟೀ ಬೆಲೆ ಹೆಚ್ಷಾಗಿದ್ದನ್ನೇ ಇಟ್ಕಂಡು ಮೋದಿಗೆ ಬೈದ್ರಲ್ಲಾ.. ಸ್ವಲ್ಪ ನೋಡಿ ಇಲ್ಲಿ ,
ದೇಶದಲ್ಲಿ ಏಕರೂಪದ ವ್ಯವಸ್ಥೆ ಜಾರಿ ಮಾಡುವ ನಿಟ್ಟಿನಲ್ಲಿ ಕೆಲ ಸರಕುಗಳ ಮೇಲೆ ತೆರಿಗೆ ಜಾಸ್ತಿ ಆಗಿದೆ, ಕೆಲವುದರಗಳ ಮೇಲೆ ಕಡಿಮೆ ಆಗಿದೆ. ಹಾಗೆ ಆದಾಗಲೇ ಒಂದು ಸಮತೋಲನ ಸೃಷ್ಟಿಯಾಗಲು ಸಾಧ್ಯ!
ಇದುವರೆಗೆ ನಮಗೆ ಗೊತ್ತೇ ಇಲ್ಲದ ಸುಮಾರು ೫೦೦ ಬಗೆಯ ತೆರಿಗೆಗಳನ್ನು ವಿವಿಧ ಸಂದರ್ಭದಲ್ಲಿ ಕಟ್ಟುತ್ತಾ ಬಂದಾಗ ಸುಮ್ಮನಿದ್ದ ನಾವು, ಈಗ ಭಾರತ ಸರ್ಕಾರ ಆರ್ಥಿಕ ದೃಢತೆಯತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ; ನಿಜ ಮೊದಲ ನೋಟಕ್ಕೆ ಇದರ ಆಳ-ಅಗಲ ನಮಗೆ ಅರ್ಥವಾಗುವುದಿಲ್ಲ, ಕ್ಲಿಷ್ಠ ಎಂಬ ಭಾವನೆ ಬರುತ್ತದೆ. ಹಾಗೆಂದುಕೊಂಡು ಈ ಯೋಜನೆಯನ್ನೋ ಅಥವ ಯೋಜನೆಯನ್ನು ಅನುಷ್ಠಾನಕ್ಕೆ ತಂದವರನ್ನೋ ಅಥವಾ ಈ ಮಹತ್ತರ ಯೋಜನೆಯ ಹಿಂದಿರುವ ವ್ಯಕ್ತಿಗಳನ್ನು ತೆಗಳುತ್ತಾ ಸಮಯ ವ್ಯಯಿಸುವುದರ ಬದಲು, ಈ GST ಯ ಕುರಿತು ಸ್ವಲ್ಪ ಅಧ್ಯಯನ ಮಾಡಿ, ಸಾಮಾನ್ಯ ಜನತೆಗೆ ಅರ್ಥ ಮಾಡಿಸುವ ಕೆಲಸ ಮಾಡೋಣ.. ಈ ಯೋಜನೆಗೆ ಪೂರಕವಾಗಿ ನಾವು ಯಾವ ರೀತಿ ಹೆಜ್ಜೆ ಇಡಬಹುದು ಎಂಬುದನ್ನು ಚಿಂತಿಸಿ ಕಾರ್ಯರೂಪಕ್ಕೆ ತರೋಣ.