ಲೇಖಕರು :- ಕಾರ್ತಿಕ ಭಟ್ಟ ಮೈಸೂರು.

ಧರ್ಮ ಎರಡೇ ಅಕ್ಷರದ ಪದ ಎಂತಹ ಕ್ರಾಂತಿಯನ್ನೇ, ಎಂತಹ ಸಾಹಸವನ್ನೇ ಸೃಷ್ಠಿಸಬಲ್ಲದಾದಂತಹ ಶಕ್ತಿಯುಳ್ಳದ್ದು. ದೇಶದ ಯಾವುದೇ ಇರಲಿ ,ಬೇಡ ಪ್ರಪಂಚದ ಯಾವುದೇ ಭಾಗಕ್ಕೆ,ಯಾವುದೇ ಮೂಲೆಗೆ ಹೋದರೂ ಯಾವುದೇ ವಿಚಾರವೇ ಬಂದರೂ ಮೂಲಬಿಂದು ಅಥವಾ ಆ ವಿಚಾರದ ನೆಲೆಗಟ್ಟು ಧರ್ಮವೇ ಆಗಿರುತ್ತದೆ,ಪರೋಕ್ಷವಾಗಿ “ಧರ್ಮೋ ರಕ್ಷತೀ ರಕ್ಷಿತಃ” ಎಂಬ ಉಕ್ತಿಯನ್ನು ಅನುಸರಿಸಿದಂತೆ ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಜಗತ್ತಿನ ಯಾವುದೇ ಧರ್ಮವೂ ಕೂಡ ಸ್ವಧರ್ಮವನ್ನು ಮಾತ್ರ ಗೌರವಿಸೂ ಪರಧರ್ಮವನ್ನು ದ್ವೇಷಿಸು ಎಂಬುದಾಗಿ ಉಲ್ಲೇಖಿಸಿಲ್ಲ. ಇತಿಹಾಸದ ಕೆಲವು ವಿಕೃತ ಮನಸ್ಸಿಗರ ಪರಿಣಾಮವಾಗಿ ಧರ್ಮದ ಸಾರವನ್ನು ಮನಬಂದಂತೆ ಗಾಳಿಗೆ ತೂರಿ ತಮ್ಮ ಅಸ್ತಿತ್ತ್ವವನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದ್ದಾರೆಯೇ ಹೊರತು ಧರ್ಮದ ನಿಜವಾದ ಅಮೃತ ಸಾರವನ್ನು ಹಂಚಲು ಪ್ರಯತ್ನಿಸಿದವರು ಅಂತಹ ಮನಸ್ಥಿತಿಯವರಲ್ಲಿ ಕಾಣ ಸಿಗುವುದು ತೀರ ವಿರಳ, ಅಂದ ಮಾತ್ರಕ್ಕೆ ಈ ವಿಚಿತ್ರ ಮನಸ್ಥಿತಿಯವರಿಗೆ ಯಶಸ್ಸು ಸಿಕ್ಕಿದೆಯೆಂದಿಲ್ಲ ಬದಲಾಗಿ ಹೇರಿಕೆಯಿಂದಾಹಲೀ ಅಥವಾ ಬಲತ್ಕಾರದಿಂದಲೇ ಆಗಲಿ ಯಾವುದನ್ನೂ ಸಾಧಿಸಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹಣೆಗಳಾದರು ಅಷ್ಟೇ. ಮರಕ್ಕಿಂತ ಮರ ದೊಡ್ಡದಿರುತ್ತದೆ ಗುಡ್ಡಕ್ಕಿಂತ ಗುಡ್ಡ ದೊಡ್ಡದಿರುತ್ತದೆ ಇಂದು ಹೇರಿಕೆಯ ಪ್ರಯತ್ನ ಮಾಡಿದವನ ಸಾಮಥ್ರ್ಯ ಕ್ಷೀಣಿಸಲೇಬೇಕು. ಅರ್ಥಪೂರ್ಣವಾದ, ಸರ್ವರಿಗೂ ಒಳಿತನ್ನು ಮಾಡುವ, ಸರ್ವರನ್ನೂ ಸಮಾಭಾವದಿಂದ ಕಾಣುವಂತೆ ಪ್ರೇರೇಪಿಸುವುದು ಒಂದು ಧರ್ಮದ ಸಾರವಾಗಿದ್ದಲ್ಲಿ ಹೇರುವ ಪ್ರಯತ್ನವೆಸಗಿದವನ ಸಾಮಥ್ರ್ಯ ಕಳೆಗುಂದಿದಾಕ್ಷಣ ಮಣ್ಣಿನ ಮೇಲ್ಪದರ ಮೃದುವಾದಾಗ ಕುದಿಯುತ್ತಿದ್ದ ಲಾವಾರಸವು ಸ್ಪೋಟಿಸಿದಂತೆ ಹೊರಬಂದು ತನ್ನ ಅಸ್ತಿತ್ವ ಸ್ಥಾಪಿಸುತ್ತದೆ. ಆ ಹೊರಬಂದ ಅಮೃತಸಾರವನ್ನು ಉತ್ತಮ ದಿಶೆಯಲ್ಲಿ ಹರಿಯುವಂತೆ ಮಾಡಿ ಉತ್ತಮೋತ್ತಮ ಕೆಲಸಗಳನ್ನು ಮಾಡಿದಲ್ಲಿ ಧರ್ಮದ ಉಳಿವು ಸಾಧ್ಯ ಮಿಗಿಲಾಗಿ ಧರ್ಮ ಎಂಬುದಕ್ಕೆ ಸ್ಪಷ್ಟ ಅರ್ಥ ನೀಡಿದಂತಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಬಹುಮುಖ್ಯವಾಗಿ ಸ್ವಧರ್ಮದ ಅಮೃತಸಾರವನ್ನು ನಿಜವಾಗಿ ಗ್ರಹಿಸಿದವನು ಪರಧರ್ಮಸಹಿಷ್ಣುವಾಗಿಯೇ ಇರುತ್ತಾನೆ. ಈ ಅನ್ಯಧರ್ಮವನ್ನು ದ್ವೇಷಿಸಿ ಏನು ತಾನೇ ಸಾಧಿಸಲು ಸಾಧ್ಯ ಎಂದು ಶಾಂತಚಿತ್ತನಾಗಿ ಒಮ್ಮೆ ಯೋಚಿಸಿದರೆ ಸಾಕು ದ್ವೇಷಿಸುತ್ತಿದ್ದವನೂ ಪ್ರೀತಿಸಲು ಪ್ರಾರಂಭಿಸಿದರೆ ಆಶ್ಚರ್ಯಪಡಬೇಕಾದ್ದೇನಿಲ್ಲ. ಹËದು ಎಷ್ಟು ಸಂಕೀರ್ಣ ಬದುಕಿನಲ್ಲಿ ಎಂತಹ ಬೃಹದಾಕಾರದ ನಕ್ಷೆಯನ್ನೇ ರೂಪಿಸಿರುತ್ತೇವೆ ಪ್ರಯೋಜನವೇನೆಂದು ಒಬ್ಬರಿಗೂ ತಿಳಿಯದು. ಎಂತೆಂತಹ ಅತಿರಥಮಹಾರಥರು,ಪುಣ್ಯಪುರುಷರೂ,ಸಾಧುಸಂತಗಳೂ ಶತಶತಮಾನಗಳಿಂದ ಭಾಷಣ-ಪ್ರವಚನಗಳಿಂದ ಮನಮುಟ್ಟುವ ಪ್ರಯತ್ನ ಮಾಡಿದರೂ ಇಂದಿಗೂ ಕೋಮುಗಲಭೆಗಳಿಗೇನು ಕೊರತೆಯಿಲ್ಲ, ಒಂದು ದೃಷ್ಠಿಕೋನದಲ್ಲಿ ಹೇಳುವುದಾದರೆ ಕೋಮುಗಲಭೆಯೆಂದರೆ ವ್ಯರ್ಥಪ್ರಯತ್ನ. ಹಾಗಾದರೆ ಈ ವ್ಯರ್ಥ ಪ್ರಯತ್ನ ಯಾವ ಸಾರ್ಥಕತೆಗಾಗಿ,ಯಾರ ಉದ್ಧಾರಕ್ಕಾಗಿ ಎಂದು ಒಂದೇ ಒಂದು ಕ್ಷಣವಾದರೂ ಕೂಲಂಕೂಷವಾಗಿ ಯೋಚಿಸಿದರೆ ಉದ್ಭವಿಸಿದ ಹಾಗೂ ಉದ್ಭವಿಸುವ ಸಮಸ್ಯೆಯ ಅರ್ಧ ಭಾಗ ನಿವಾರಣೆಯಾದಂತೆಯೇ.
ಎಂತಹ ಸುಂದರ ಅರ್ಥಗರ್ಭಿತವಾದ ಮಾತು “ವಸುದೈವ ಕುಟುಂಬಕಂ” ಅರ್ಥಾಥ್ ಭೂಮಿಯಲ್ಲಿರುವವರೆಲ್ಲರೂ ಒಂದೇ ಕುಟುಂಬದವರಿದ್ದಂತೆ ಎಂದು ಈಒಂದೇ ಒಂದು ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಪರಧರ್ಮಸಹಿಷ್ಣುತಾ ಮನೋಭಾವನೆ ತನ್ನಿಂತಾನಾಗಿಯೇ ಮೈಗೂಡುತ್ತದೆ ತನ್ಮೂಲಕ ಸರ್ವರೂ ತನ್ನವರು ಸರ್ವರಿಗೂ ಈ ಭೂಮಿಯ ಮೇಲೆ ಬದುಕುವ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿದಂತಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು