ಬೆಂಗಳೂರು: ವಿಧಾನ ಪರಿಷತ್ ಗೆ ಹನ್ನೊಂದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಸೋಮವಾರ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಈ ಮೂರು ಪಕ್ಷಗಳಿಂದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಹನ್ನೊಂದು ಮಂದಿ ವಿರುದ್ಧ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇರುವ ಕಾರಣ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ನ ಕೆ. ಗೋವಿಂದರಾಜ್, ಸಿಎಂ ಇಬ್ರಾಹಿಂ, ಅರವಿಂದ ಕುಮಾರ ಅರಳಿ ಹಾಗೂ ಹರೀಶ ಕುಮಾರ್ ಬಿಜೆಪಿಯಿಂದ ರುದ್ರೇಗೌಡ, ರಘುನಾಥ್ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್. ರವಿಕುಮಾರ್ ಹಾಗೂ ಕೆಪಿ ನಂಜುಂಡಿ, ಜೆಡಿಎಸ್ ಪಕ್ಷದಿಂದ ಬಿಎಂ ಫಾರೂಕ್, ಎಸ್.ಎಲ್. ಧರ್ಮೇಗೌಡ ಅವರು ಅವಿರೋಧವಾಗಿ ಮೇಲ್ಮನೆಗೆ ನೇಮಕವಾಗಿದ್ದಾರೆ.