ಭಾರತದ ಒಬ್ಬ ಮನುಷ್ಯನೂ ಒಂದು ವೇಳೆ ಇಷ್ಟೊಂದು ದೀರ್ಘಕಾಲದ ಯಾತ್ರೆ ಕೈಗೊಂಡಿರಲು ಸಾಧ್ಯವಿಲ್ಲ.
ಬಹುಶಃ ಇದೊಂದು ವಿಶ್ವದಾಖಲೆಯೇ ಆಗಿರಬಹುದು.
ಆದರೆ ಯಾತ್ರೆ ಕೈಗೊಂಡ ವ್ಯಕ್ತಿಗೆ ಇದರ ಪರಿವೆಯೇ ಇಲ್ಲ.

ಜನರನ್ನು ಹತ್ತಿರದಿಂದ ಕಂಡು, ಅವರೊಂದಿಗೆ ಸಂವಾದ ಮಾಡಿ, ಅವರೊಂದಿಗೆ ಒಬ್ಬರಾಗಿ, ಆ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಉಪಹಾರ ಸೇವಿಸಿ, ಅಲ್ಲಿ ಒಂದು ಗಿಡವನ್ನು ನೆಟ್ಟು, ಗೋಪೂಜೆ ನಡೆಸಿ, ಕೃಷಿ ವಿಷಯಗಳನ್ನು ಚರ್ಚಿಸಿ, ಗ್ರಾಮೀಣತೆಯನ್ನು ಅನುಭವಿಸಿ, ಅಲ್ಲಿನ ಸಂಸ್ಕಾರವನ್ನು ಅರಿಯುತ್ತಾ.. ಈ ವ್ಯಕ್ತಿ ನಡೆದದ್ದು ಬರೋಬ್ಬರಿ 23000 ಕಿಲೋಮೀಟರ್!!!

RELATED ARTICLES  ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ! ಹೀಗೆಂದರು ಶ್ರೀಧರರು

ಐದು ವರುಷಗಳ ದೀರ್ಘ ತಪಸ್ಸು.. ಮಾ‌ಧ್ಯಮ ಪ್ರಚಾರದ ಅಬ್ಬರವಿಲ್ಲದೆ, ಸದ್ದಿಲ್ಲದೆ 23 ರಾಜ್ಯಗಳ 2200 ಗ್ರಾಮಗಳನ್ನು ಸಂದರ್ಶಿಸಿದ್ದಾರೆ ಈ ಕಠಿಣ ವೃತಧಾರಿ…

ಇದು “ಭಾರತ ಪರಿಕ್ರಮ ಯಾತ್ರೆ” … 2012 ಆಗಸ್ಟ್‌ 09 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ.. ಭಾರತವನ್ನು ಕಾಣಲು, ಭಾರತದ ವೈವಿಧ್ಯ ಸಂಸ್ಕೃತಿಯ ಅನುಭವಿಸಲು ಯಾತ್ರೆಯ ಮೂಲಕ ಹೊರಟ ಆ ವ್ಯಕ್ತಿಯೇ 50 ವರುಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರೂ, ಅಖಿಲ ಭಾರತೀಯ ಸೇವಾಪ್ರಮುಖರೂ ಆಗಿದ್ದ ಕರ್ನಾಟಕದ ಪುತ್ತೂರಿನ *ಶ್ರೀ ಸೀತಾರಾಂ ಕೆದಿಲಾಯ*

RELATED ARTICLES  ಭಾವಕ್ಕೆ ಅಭಾವವಿಲ್ಲದಿರಲಿ….!

“ಭಾರತ ಪರಿಕ್ರಮ ಯಾತ್ರೆ” ಯಲ್ಲಿ ಅವರು ಸುಮಾರು 23000 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಗ್ರಾಮ ಸಂದರ್ಶನ ನಡೆಸಿ ಆಗಿದೆ…
ಭಾರತವನ್ನ ಸಂಪೂರ್ಣವಾಗಿ ಸಂಚರಿಸಿದ ಈ ಅಪೂರ್ವ ಯಾತ್ರೆಯು 2017 ಜುಲೈ 9ರಂದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.. ಒಂದು ಇತಿಹಾಸದಲ್ಲಿ ಸ್ಥಾನ ಪಡೆಯುವ ಈ ಯಾತ್ರೆಗೆ ಸಾಕ್ಷಿಯಾಗಲು ಕನ್ಯಾಕುಮಾರಿ ಸಂಭ್ರಮದಿಂದ ಅಣಿಯಾಗುತ್ತಿದೆ..