123 copy 1

 

ದೇಶ ಮುಂದುವರೆಯುತ್ತಿದೆ, ಜನರ ಬುದ್ಧಿ ವಿಕಾಸಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಕೆಲಸಗಳು ದುಬಾರಿಯಾಗುತ್ತಿವೆ. ಅದರಲ್ಲೂ ಭಾರತದಂತ ಲಂಚಗುಳಿತನದಲ್ಲಿ ನಿಜವಾದ ಪ್ರತಿಭೆಗೆ ಕೆಲಸ ಸಿಗುವುದು ಕಷ್ಟಸಾಧ್ಯವಾಗಿದೆ. ಎಷ್ಟು ಒಳ್ಳೆಯ ಅಂಕ ಪಡೆದರು ಒಂದು ಉದ್ಯೋಗ ಅಥವಾ ಬೇರೆಯಾವ ಕೆಲಸಕ್ಕಾದರೂ ಮೊದಲು ಅನುಭವ ಮತ್ತು ಲಂಚದ ಅವಶ್ಯಕತೆ ಇದೆ ಎನ್ನುವುದು ಸತ್ಯದ ವಿಚಾರ. ಇದರ ಮಧ್ಯದಲ್ಲಿ ಒಂದು ಹುದ್ದೆಗೆ ನೂರಾರು ಜನ ಕ್ಯೂದಲ್ಲಿ ನಿಂತಿರುತ್ತಾರೆ. ಅದೇ ಒಂದು ಹುದ್ದೆಗಾಗಿ ಪರಿಕ್ಷೆಯ ಒಂದೊಂದು ಅಂಕವೂ ಮುಖ್ಯವಾಗುತ್ತದೆ. ಸ್ಪರ್ಧಾತ್ಮಕವಾದ ಮನಸು ಈ ಅಂಕ ಪಡೆಯಲು ಉದ್ಯೋಗ ಪಡೆಯಲು ಬೇಕಾಗುತ್ತದೆ.

ತಾನು ಈ ವ್ಯವಸ್ಥೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂದು ದೃಡತೆಯೂ ಬೇಕು ಇದಕ್ಕಾಗಿ ಪೂರ್ವ ತಯಾರಿಯೂ ಆಗಬೇಕಿದೆ. ಎಲ್ಲರೂ ಮುಂದೆ ಹೋಗುತ್ತಾರೆ ನನ್ನಿಂದ ಆಗದು ಎಂದು ಸುಮ್ಮನೆ ಕುಳಿತರೆ ಸಾಧನೆಯ ದಾರಿ ಕಾಣುವುದಿರಲಿ ದಿಕ್ಕು ಕೂಡ ತೋಚುವುದಿಲ್ಲ. ಸ್ಪರ್ಧೆಗೆ ತಯಾರಾಗಲು ಮನಸು ಮಾಡುವುದರ ಜೊತೆ ಕಠಿಣ ಶ್ರಮ ಬೇಕು. ಸ್ಪರ್ಧೆಯನ್ನು ಎದುರಿಸುವ ಮನೋಶಕ್ತಿಯನ್ನು ತಂದುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕವಾದ ಒತ್ತಡವಿದೆ. ಅದನ್ನು ಯಾವ ರೀತಿ ಎದುರಿಸಿ ಪೈಪೋಟಿಯನ್ನು ನೀಡುತ್ತಾ ಮುಂದೆ ಸಾಗಬೇಕು ಎನ್ನುವುದು ಕೂಡ ಒಂದು ಛಲವೇ ಸರಿ.
ಹಾಗೆ ಸಾಗುವಾಗ ಅವಮಾನ, ಆರೋಪ, ಪರ ವಿರೋಧಗಳು ಸುತ್ತಿಕೊಳ್ಳುತ್ತವೆ. ಅದನ್ನು ಕೂಡ ಎದುರಿಸಬೇಕಾಗುತ್ತದೆ. ವಿರೋಧವಿರುವಾಗ ಅದನ್ನು ಸಮಸ್ಯೆಯಾಗಿಸಿಕೊಳ್ಳದೆ ಸುಲಭವಾಗಿ ಬಗೆಹರಿಸಿಕೊಂಡು ಮುಂದೆ ಸಾಗುತ್ತ ನಮ್ಮ ಮುಂದಿನ ಕೆಲಸದ ಬಗ್ಗೆ ಒತ್ತು ನೀಡಬೇಕು. ಹಾಗೆ ಆ ಕೆಲಸಕ್ಕೆ ಯಾವ ರೀತಿಯ ಸ್ಪರ್ಧೆ ಎದುರಾಗುತ್ತದೆ ಅದರ ಫಲಿತಾಂಶ ಹೇಗೆ ಬರುತ್ತದೆ ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ಪ್ರತಿ ಕ್ಷಣವು ಸ್ಪರ್ಧೆಗಳು ಎದುರಾಗುತ್ತದೆ. ಅದನು ಎದುರಿಸುವ ಒತ್ತಡ ಎಲ್ಲರಿಗೂ ಇದೆ. ಕೆಲವರಿಗೆ ಆ ಒತ್ತಡ ಎದುರಿಸಲಾರದೆ ಸೋತು ಸುಮ್ಮನಾಗಿ ತಮಗೆ ಬಂದದ್ದು ಪಂಚಾಂಮೃತ ಎಂದು ಕೊಳ್ಳುತ್ತಾರೆ. ಆದರೆ ಕೆಲವರು ಆ ಸ್ಪರ್ಧಾತ್ಮಕವಾದ ಜಗತ್ತನ್ನು ಜಾಣ್ಮೆಯಿಂದ ಎದುರಿಸಿ ಅಸಾಧಾರಣವಾದ ಗುರಿಯನ್ನು ತಲುಪಿ ಹೊರಹೊಮ್ಮುತ್ತಾರೆ.

RELATED ARTICLES  ಕರ್ಮಪ್ರವಾಹದಲ್ಲಿ ತೇಲುತ್ತ, ಹುಟ್ಟುತ್ತ, ಸಾಯುತ್ತ ಸಾಗಿದಾಗ ಯಾವುದೋ ಪುಣ್ಯದ ಫಲವಾಗಿ ದೊರಕುವದು ನರಜನ್ಮ! (‘ಶ್ರೀಧರಾಮೃತ ವಚನಮಾಲೆ’).

ಹಾಗೆ ಹೊರ ಜಗತ್ತಿಗೆ ಕಾಣಿಸಿಕೊಂಡಗಲೇ ಪ್ರಪಂಚ ಮಾತನಾಡುವುದು. “ ಅರೇ! ಎನೋ ಅಂದುಕೊಂಡಿದ್ದೆ ಇವನನ್ನು, ಮನೆಕೆಲಸವನ್ನೋ, ಅಥವಾ ಇಲ್ಲಿಯೆ ಯಾವುದಾದರೂ ಕೆಲಸ ಮಾಡುತ್ತಾನೆ ಎಂದುಕೊಂಡರೆ ತಾನೇ ಒಂದು ಕಂಪನಿ ತೆಗೆದುಬಿಟ್ಟನಲ್ಲ” ಎಂದು ಬೆರಳಿಟ್ಟು ಆಶ್ಚರ್ಯ ಪಡುತ್ತಾರೆ. ಅಂತಹ ಸಾಲಿನಲ್ಲಿ ನಾರಾಯಣ ಮೂರ್ತಿ, ಅಬ್ದುಲ್ ಕಲಾಂ. ವಿಶ್ವೇಶ್ವರಯ್ಯ ನಂತ ಮಹಾನ್ ವ್ಯಕ್ತಿಗಳು ಹೊರತಾಗಿಲ್ಲ. ಯಾರೂ ಹುಟ್ಟುತ್ತ ಹೆಸರು ಗಳಿಸುವುದಿಲ್ಲ. ಜಗತ್ತಿನೆದುರು ತಮ್ಮದೇ ಆದ ಒಂದು ಬುದ್ಧಿ ಉಪಯೋಗಿಸಿ, ಇವರಂತೆ ವೇಗವಾಗಿ ಬೇಳೆಯುವವರಿಗೆ ಸ್ಪರ್ಧೆ ನೀಡಿ ಮುಂದೆ ಸಾಗುತ್ತಿರುತ್ತಾರೆ.

RELATED ARTICLES  ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ.

ಜಗತ್ತಿನಲ್ಲಿ ಸ್ಪರ್ಧಾತ್ಮಕವಾದ ಒತ್ತಡವು ಕಲೆ, ಸಾಹಿತ್ಯ,ಉದ್ಯೋಗ, ಶಿಕ್ಷಣ, ರಾಜಕೀಯ, ಕೃಷಿ, ಐಟಿ ಬಿಟಿ ಯಂತಹ ಉದ್ಯಮದಲ್ಲೂ ನಡೆದಿದೆ. ನಾವು ಯಾವುದೇ ಕ್ಷೇತ್ರದಲ್ಲಿಯೇ ಇದ್ದರೂ ಸ್ಪರ್ಧೆಯನ್ನು ಎದುರಿಸುವ ಗುಣವನ್ನು ಕಲಿತು ನಮ್ಮ ನಡೆಯಲ್ಲಿ ಚಲಿಸುತ್ತಿರಬೇಕು. ಒತ್ತಡದ ನಡುವೆಯೇ ಬದುಕು ಕಟ್ಟಿಕೊಳ್ಳುವ ಛಾತಿಯನ್ನು ನಾವು ಹೊಂದಬೇಕು.