ಬೆಂಗಳೂರು: ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಹಾಗೂ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಗರವನ್ನಾಗಿ ರೂಪಿಸಲು ಬೆಂಗಳೂರು ರಾಜಕೀಯ ಕಾರ್ಯ ಸಮಿತಿಯ(ಬಿಎಪಿಸಿ) ಶಿಫಾರಸ್ಸಿನಂತೆ ಕಾಲದ ಪರಿಮಿತಿಯಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಪಿಎಸಿಯ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಉಪಾಧ್ಯಕ್ಷ ಟಿ ವಿ ಮೋಹನ್ ದಾಸ್ ಪೈ, ಸಿಇಒ ರೇವತಿ ಅಶೋಕ್ ಅವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ತಿಳಿಸಿದೆ.
ಈಗಿರುವ ಯೋಜನೆಗಳ ಪ್ರಗತಿ ಬಗ್ಗೆ ತಂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಅವುಗಳಲ್ಲಿ ಅತಿ ಸಂಚಾರ ದಟ್ಟಣೆಯ ಕಾರಿಡಾರ್ ಗಳು ಸೇರಿವೆ.
ಬೆಂಗಳೂರು ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಸಂಸ್ಥೆಗಳ ಸಭೆಯನ್ನು ಸದ್ಯದಲ್ಲಿಯೇ ತಾವು ಮತ್ತು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕರೆಯಲಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.