ತಾಯಿಗೆ ತನ್ನ ಮಗುವಿನ ಮೇಲೆ ಪ್ರೀತಿ ಮಾಡುವದನ್ನು ಕಲಿಸುವದು ಬೇಕಾಗುವದಿಲ್ಲ. ಅದೇ ರೀತಿ ಗುರುದೇವ ನಿಮ್ಮೆಲ್ಲರ, ಎಲ್ಲ ಭಕ್ತರ ಸಂಪೂರ್ಣ ಜೀವನದ ಇಹ ಮತ್ತು ಪರಲೋಕಗಳ ಸಂಪೂರ್ಣ ಭಾರ ತನ್ನ ಮೇಲೆ ತೆಗೆದುಕೊಂಡು, ತನ್ನ ಭಕ್ತರನ್ನು ಪ್ರತಿಕ್ಷಣವೂ ರಕ್ಷಣೆ ಮಾಡುತ್ತಿರುತ್ತಾರೆ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಮಗಾ,
ಬ್ರಹ್ಮನು ಹೇಗೆ ಅಸಂಗ, ನಿರ್ವಿಕಾರ, ನಿರೋಗ, ಸ್ವತಃಪರಿಪೂರ್ಣ, ಅದ್ವಿತೀಯ ಆನಂದರೂಪನಿರುತ್ತಾನೋ ಅದೇ ರೀತಿ ಜ್ಞಾನಿಯೂ ಇರಬೇಕು.
ಜಗತ್ಕಾರ್ಯಕ್ಕೋಸ್ಕರ ಜ್ಞಾನಿಯು ಸದೃಢ ದೇಹ, ಸ್ಥಿತಪ್ರಜ್ಞತೆ, ಆದರ್ಶಪೂರ್ಣ ಜೀವನ, ಪಾರಮಾರ್ಥಿಕ ಮಾರ್ಗದ ದಿಗ್ದರ್ಶನ ಮಾಡಲು ಯೋಗ್ಯವಾದ ಗುಣಶೀಲತೆ ಇತ್ಯಾದಿ ಗುಣಾನ್ವಿತನಾಗಿದ್ದರೆ ಜಗತ್ಕಾರ್ಯವಾಗುತ್ತದೆ. ನೀನು ಈ ಸರ್ವ ಗುಣಸಂಪನ್ನನಾಗಿರಬೇಕೆಂದು ನನ್ನ ಇಚ್ಛೆ ಮತ್ತು ಹಾಗೆ ನನ್ನ ಆಶೀರ್ವಾದವೂ ಇದೆ.
ಮಗಳೇ! ನಿನಗೆ ಶಾರೀರಿಕ ವ್ಯಾಧಿಯಿಂದ ಕಷ್ಟ ಅವಶ್ಯ ಆಗುತ್ತಿದೆ. ನಾನು ನನ್ನಿಂದಾಗುವ ಎಲ್ಲ ಪ್ರಯತ್ನ ಮಾಡಿ ನಿನ್ನ ಬಾಧೆ ತೆಗೆದುಹಾಕುವಂತಾಗಿ, ನಿನಗೆ ನಿರಂತರ ಆರೋಗ್ಯವಾಗಲಿ ಎಂದು ನನ್ನ ಇಚ್ಛೆ ಇದೆ ಅಥವಾ ನಿನ್ನ ವ್ಯಾಧಿಯಿಂದೇನು ನಿನಗೆ ಕಷ್ಟವಾಗುತ್ತಿದೆಯೋ ಅದು ನನಗೇ ಆಗಲಿ.
ಮಗಳೇ! ಮಕ್ಕಳಿಗಾಗುವ ಕಷ್ಟ ಮಕ್ಕಳಿಗಾಗದೇ ಅವರ ತಾಯಿಗೇ ಆಗುತ್ತದೆ. ತಾಯಿ ತನ್ನ ಬಾಲಕನ ಸಂಪೂರ್ಣ ಕಷ್ಟ ಮತ್ತು ಜೀವನದ ಎಲ್ಲ ಭಾರ ತನ್ನ ಮೇಲೇ ತೆಗೆದುಕೊಳ್ಳುತ್ತಾಳೆ. ಬಾಲಕನನ್ನು ತೊಟ್ಟಿಲಿಗೆ ಹಾಕಿದಾಗಿನಿಂದ, ದೇಹದ ಅಂತ್ಯದ ವರೆಗೂ ತಾಯಿಗೇ ಬಾಲಕನ ಎಲ್ಲ ಕಾಳಜಿ ಇರುತ್ತದೆ. ತಾಯಿಗೆ ತನ್ನ ಮಗುವಿನ ಮೇಲೆ ಪ್ರೇಮ ಮಾಡುವದನ್ನು ಕಲಿಸುವದು ಬೇಕಾಗುವದಿಲ್ಲ. ಅದೇ ರೀತಿ ಗುರುದೇವ ನಿಮ್ಮೆಲ್ಲರ, ಎಲ್ಲ ಭಕ್ತರ ಸಂಪೂರ್ಣ ಜೀವನದ ಇಹ ಮತ್ತು ಪರಲೋಕಗಳ ಸಂಪೂರ್ಣ ಭಾರ ತನ್ನ ಮೇಲೆ ತೆಗೆದುಕೊಂಡು, ತನ್ನ ಭಕ್ತರನ್ನು ಪ್ರತಿಕ್ಷಣವೂ ರಕ್ಷಣೆ ಮಾಡುತ್ತಿರುತ್ತಾರೆ. ಗುರುದೇವ ಹತ್ತಿರವಿರಲೀ, ದೂರವಿರಲೀ ಅವರು ತಮ್ಮ ಸೊಂಟದಿಂದ ಭಕ್ತರನ್ನು ಕೆಳಗಿಳಿಸುವದಿಲ್ಲ. ಗುರುದೇವರು ತಮ್ಮ ಸರ್ವತ್ರ ವ್ಯಾಪಕತ್ವದಿಂದ, ತಪೋಮಯ ಮಹಾನ ಶಕ್ತಿಯಿಂದ ಭಕ್ತರ ರಕ್ಷಣೆ ಮಾಡುತ್ತಾರೆ. ಅರೇ, ಮಗಳೇ! ಭಕ್ತರ ಬೆನ್ನಹಿಂದೇ ನಿಂತಿರುತ್ತಾರೆ.

RELATED ARTICLES  ಅಪಘಾತಗಳು !! –ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ .

ಜ್ಞಾನದೃಷ್ಟಿಯಿಂದ ನೋಡಿದರೆ ಶರೀರಕ್ಕೆ ಏನೂ ಅಸ್ತಿತ್ವವೇ ಇಲ್ಲ. ತಾಯಿತಂದೆಗಳ ಮಲರೂಪಿ ಸ್ವಪ್ನದೃಷ್ಟಿಯಂತ, ಮಿಥ್ಯಾ ಮತ್ತು ಆಭಾಸಾತ್ಮಕ ಈ ದೇಹ, ಇಂದೇ ಹೋಗಲಿ ಅಥವಾ ಇರಲಿ, ಜ್ಞಾನಿಯಾದವನು ಯಾವಾಗಲೂ ವಿದೇಹರೂಪದಲ್ಲೇ ಇರುತ್ತಾನೆ.
ನೋಡು! ನಿರಂತರ ಬ್ರಹ್ಮಧಾರಣೆ ಹೆಚ್ಚಿಸು; ಅದರಿಂದ ನಿನ್ನ ಸ್ವಾಸ್ಥ್ಯ ಸರಿಯಾಗಿರುತ್ತದೆ; ರೋಗ ಔಷಧಿ, ಮಂತ್ರ ಮೊದಲಾದವುಗಳಿಂದ ಗುಣವಾಗುತ್ತದೆ; ಹಾಗಿದ್ದಾಗ ಅದು ನಿತ್ಯಾನಂದಸ್ವರೂಪ ಧಾರಣೆಯಿಂದ ಗುಣವಾಗುವದಿಲ್ಲವೇ? ಅವಶ್ಯ ಗುಣವಾಗುತ್ತದೆ.

RELATED ARTICLES  ಸಾಧಕನು ಯಾರ ಮೇಲೂ ಪ್ರೇಮ ಇಡಬಾರದು ಮತ್ತು ಯಾರನ್ನೂ ದ್ವೇಷ ಮಾಡಬಾರದು ಎಂದರು ಶ್ರೀಧರರು.

ಬ್ರಹ್ಮಸತ್ತೆಯ ಒಂದು ಅಂಶಾತ್ಮಕ ಅಸ್ತಿತ್ವ ಮಂತ್ರ, ತಂತ್ರ, ಔಷಧಿಗಳಲ್ಲಿ ಇರುವದರಿಂದಲೇ ಅವುಗಳ ಶಕ್ತಿ ಇಷ್ಟು ಹೆಚ್ಚಾಗಿರುವಾಗ, ಪ್ರತ್ಯಕ್ಷ ‘ಅಹಂಬ್ರಹ್ಮಾಸ್ಮಿ’ ಯ ಧಾರಣೆಯಿಂದ ಅದೇನು ಆಗಲಿಕ್ಕೆ ಶಕ್ಯವಿಲ್ಲದ್ದಿದೆ? ಯಾವ ಸಂಪೂರ್ಣ ಮಂತ್ರ-ತಂತ್ರ-ಔಷಧಿ ಇತ್ಯಾದಿಗಳಿಂದಾಗುವ ಲಾಭವಿದೆಯೋ, ಅದು ಅಖಂಡ ಸ್ವರೂಪದ ಧಾರಣೆಯಿಂದ ಆಗೇ ಆಗುತ್ತದೆ.
ಮಗಳೇ! ಪಾರಮಾರ್ಥಿಕರ ಜೀವನ ಸರ್ವತೋಪರಿ ಆನಂದರೂಪ, ಹಾಗೇ ಪರಮಾರ್ಥದ ಮಹತ್ವದರ್ಶಕ ಮತ್ತು ಶಿಕ್ಷಣಪ್ರದವಾಗಿರಬೇಕು. ನಿನ್ನ ಶಾರೀರಿಕ-ಮಾನಸಿಕ ಮೊದಲಾದ ಯಾವುದೇ ಕ್ರಿಯೆ ಸರ್ವ ಸಮಾಜಕ್ಕೆ ಬೋಧಪ್ರದವಾಗಲಿ ಮತ್ತು ಬ್ರಹ್ಮಾಭಿನ್ನಪೂರ್ಣಸ್ಥಿತಿಯಲ್ಲಿ ನೀನು ಅಖಂಡವಾಗಿರಬೇಕು.
ನಿನ್ನದೇ ಪ್ರೀತಿಯ ಆತ್ಮ
ಶ್ರೀಧರ