ನವದೆಹಲಿ: ಆಘಾತಕಾರಿ ಘಟನೆಯಲ್ಲಿ, ಕನಿಷ್ಠ 59 ನರ್ಸರಿ ಬಾಲಕಿಯರು ಬೋಧನಾ ಶುಲ್ಕವನ್ನು ಪಾವತಿಸದ ಕಾರಣ ದೆಹಲಿಯ ಪ್ರಮುಖ ಶಾಲೆಯೊಂದರ ನೆಲಮಾಳಿಗೆಯಲ್ಲಿ ಬಂಧಿಸಿಟ್ಟ ಘಟನೆ ನಡೆದಿದೆ.
ಸುಮಾರು ನಾಲ್ಕರಿಂದ ಐದು ವರ್ಷದ ಈ ಬಾಲಕಿಯರನ್ನು ಶಾಲಾ ಅಧಿಕಾರಿಗಳು ಬಂಧಿಸಿಟ್ಟಿದ್ದರು ಎಂದು ತಿಳಿದು ಬಂದಿದೆ. ರಾಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು ಬಾಲಕಿಯರ ಪೋಷಕರು ಮಧ್ಯಾಹ್ನದಂದು ಶಾಲೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಸಂದರ್ಭದಲ್ಲಿ ವಾರ್ಡ್ ಗಳಲ್ಲಿ ಮಕ್ಕಳು ಕಾಣದೆ ಇದ್ದಾಗ ರೊಚ್ಚಿಗೆದ್ದ ಪೋಷಕರು ಶಾಲಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಆಗ ಮಕ್ಕಳನ್ನು ಶುಲ್ಕ ನೀಡದ ಕಾರಣ ಅವರನ್ನು ನೆಲ ಮಾಳಿಗೆಯಲ್ಲಿ ಬಂದಿಸಲಾಗಿದೆ ಎಂದು ತಿಳಿಸಿದರು. ಆಗ ತಕ್ಷಣ ಪೋಷಕರು ಹತ್ತಿರದ ಪೋಲಿಸ್ ಠಾಣೆ ದೂರು ದಾಖಲಿಸಿದ್ದಾರೆ.ಮಕ್ಕಳನ್ನು ನೆಲಮಾಳಿಗೆಯಿಂದ ಹಲವು ಬಾರಿ ಮುಕ್ತಗೊಳಿಸಲು ಮನವಿ ಮಾಡಿಕೊಂಡರು ಸಹಿತ ಶಾಲಾ ಆಡಳಿತ ಮಂಡಳಿ ಅದನ್ನು ನಿರಾಕರಿಸಿದೆ. ಸುಮಾರು 5 ಗಂಟೆಗಳ ಕಾಲ ಮಕ್ಕಳನ್ನು ನೆಲಮಾಳಿಗೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಅವರು ಪೋಲಿಸರಿಗೆ ದೂರು ನೀಡಿದ್ದಾರೆ.
ಇದೆ ಸಂದರ್ಭದಲ್ಲಿ ಕೆಲವೊಂದು ಪೋಷಕರು ತಾವು ಶಾಲಾ ಶುಲ್ಕವನ್ನು ಮುಂಚಿತವಾಗಿ ಪಾವತಿಸಿದ್ದೇವೆಂದು ಹೇಳಿಕೊಂಡಿದ್ದರೂ, ಅವರ ಮಕ್ಕಳನ್ನು ನೆಲಮಾಳಿಗೆಯಲ್ಲಿ ಲಾಕ್ ಮಾಡಲಾಗಿದೆ ಎಂದು ದೂರಿದರು.ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೂಡಿಟ್ಟಿರುವ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಪೊಲೀಸರು ಕೂಡ ಈ ವಿಷಯವನ್ನು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ. ಹಮ್ ದರ್ದ್ ಗ್ರೂಪ್ಗೆ ಸೇರಿರುವ ಈ ಶಾಲೆ ಪ್ರತಿ ಮಗುವಿಗೆ ಶುಲ್ಕವಾಗಿ 2,500 ಮತ್ತು 2,900 ರೂ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.