ಸ್ವಲ್ಪ ಪುರುಷಾರ್ಥ ಮಾಡಿ, ಆತ್ಮದ ಮೇಲಿನ ಆವರಣ ಬದಿಗೆ ಸರಿಸಿ ನೋಡಿದರೆ, ನಿನಗೂ ಇದೆಲ್ಲಾ ವಿಷಯಗಳಿಂದ ಏನೂ ಪ್ರಯೋಜನವಿಲ್ಲವೆಂಬುದು ಕಂಡುಬರುತ್ತದೆ. ನೀನು ಶುದ್ಧ ಆತ್ಮಸ್ವರೂಪದಲ್ಲಿ ತದ್ರೂಪವಾಗೇ ಇರು.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಮಗಳೇ!
ಗುರು ಅಂದರೆ ಸಚ್ಚಿದಾನಂದ ಘನ-ಸ್ವರೂಪವೇ. ಶಿಷ್ಯನಿಗೆ ಆ ಸಚ್ಚಿದಾನಂದಘನ ಗುರು ಪರಮಪದದ ದಯೆಮಾಡುತ್ತಾರೆ. ಗುರುನಾಥನಿಗೆ ಯಾವುದೇ ಪ್ರಕಾರದ ಸಹಾಯದ ಆವಶ್ಯಕತೆಯೇ ಇರುವದಿಲ್ಲ. ಯಾರು ದೇಹಾಕಾರ ದೃಷ್ಟಿಯಿಂದ ನನ್ನ ಆರಾಧನೆ ಮಾಡುತ್ತಾರೋ ಮತ್ತು ಸೇವೆಯಲ್ಲಿಯೇ ತತ್ಪರರಾಗಿರುತ್ತಾರೋ, ಅಂತಹ ಶಿಷ್ಯರ ದೇಹಾಕಾರದೃಷ್ಟಿಯ ಉಪಾಸನೆ ಮಾಡುವ ಪ್ರವೃತ್ತಿ ನನಗೆ ಸೇರುವದಿಲ್ಲ. ಗುರುವಿನ ಯಥಾರ್ಥ ಮಹಿಮೆ ತಿಳಿದುಕೊಂಡು ‘ಗುರು ಕೇವಲ ಬ್ರಹ್ಮನದೇ ಮೂರ್ತಿಯಾಗಿದೆ’, ‘ಈಶ್ವರೋ ಗುರುರಾತ್ಮೇತಿ’ ಈ ರೀತಿ ಭಾವನೆಯಿಂದಲೇ ಗುರು ಆರಾಧನೆ ಮಾಡುವದು ಶ್ರೇಷ್ಠವು.

RELATED ARTICLES  ಕಳೆದುಹೋದ ಎಳೆಯ ದಿನಗಳು ಭಾಗ೧೭

ಮಗಳೇ!

‘ಅಹಮ್ ಬ್ರಹ್ಮಾಸ್ಮಿ’ ಈ ಸ್ಫೂರ್ತಿಯ ಬ್ರಹ್ಮಸ್ವರೂಪವೇ ಲಕ್ಷ್ಯಸ್ವರೂಪವು. ಈ ಶುದ್ಧ ನಿಸ್ಫೂರ್ತಿಕ ಬ್ರಹ್ಮಸ್ವರೂಪದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಈ ಸ್ಫೂರ್ತಿಯದ್ದೂ ಏನೂ ಪ್ರಯೋಜನವಿಲ್ಲ. ನಂತರ ಅದರ ಮುಂದಿನ ಆ ಅವ್ಯಕ್ತ ಮಹತತ್ವದಲ್ಲಿ ಬ್ರಹ್ಮಾಂಡ-ಪಿಂಡಾಂಡ, ಈಶ-ಜೀವ, ಮಾಯೆ-ಅವಿದ್ಯೆ ಇತ್ಯಾದಿ ನಾನಾಪ್ರಕಾರಗಳ ಭಾವನೆಗಳಿಂದ ಏನು ಪ್ರಯೋಜನವಿದೆ? ನಮ್ಮ ನಿಜಸ್ವರೂಪ ನಿತ್ಯಜ್ಞಾನರೂಪ, ನಿರಾಭಾವ, ನಿಸ್ಸೀಮ, ನಿರ್ಗುಣ, ನಿರ್ವಿಕಾರ, ನಿರಾಧಾರ, ನಿರಾತಂಕ, ಸ್ವಾನುಭವಗಮ್ಯವಿದೆ.
ಪ್ರಾರಂಭದಲ್ಲಿ ನಿಶ್ಶಬ್ದ ಬ್ರಹ್ಮದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಈ ಸ್ಮೃತಿಯ ಆಭಾಸವಾದಂತೆಯೇ ಸೃಷ್ಟಿಯ ಪ್ರಾರಂಭವಾಗಿ ಮಾಯಾ-ಪ್ರಪಂಚದ ಬಲೆ ಹಬ್ಬಿತು ಮತ್ತು ಅದರಿಂದ ಸ್ವರೂಪದ ಸಂಪೂರ್ಣ ವಿಸ್ಮೃತಿಯಾಯಿತು. ಸ್ವಲ್ಪ ಪುರುಷಾರ್ಥ ಮಾಡಿ, ಆತ್ಮದ ಮೇಲಿನ ಆವರಣ ಬದಿಗೆ ಸರಿಸಿ ನೋಡಿದರೆ, ನಿನಗೂ ಇದೆಲ್ಲಾ ವಿಷಯಗಳಿಂದ ಏನೂ ಪ್ರಯೋಜನವಿಲ್ಲವೆಂಬುದು ಕಂಡುಬರುತ್ತದೆ. ನೀನು ಶುದ್ಧ ಆತ್ಮಸ್ವರೂಪದಲ್ಲಿ ತದ್ರೂಪವಾಗೇ ಇರು.
ಇತಿ,
ನಿನ್ನದೇ ಆತ್ಮ
ಶ್ರೀಧರ

RELATED ARTICLES  ಶ್ರೀಧರರು ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಪತ್ರದ ಮೊದಲ ಭಾಗ