ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ವಿಭಾಗವು ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ವಾಕ್ ಇನ್ ಇಂಟರ್ ವ್ಯೂ ಕರೆಯಲಾಗಿದೆ.
ಹುದ್ದೆಗಳ ಸಂಖ್ಯೆ : 25
ಹುದ್ದೆಗಳ ವಿವರ
01.ಸ್ಟ್ಯಾಪ್ ನರ್ಸ್ ಹೆಲ್ತ್ – 12
02.ಮಲೇರಿಯಾ ಇನ್ಸ್’ಪೆಕ್ಟರ್ – 04
03.ಫಿಜಿಯೋ ಥೆರಫಿಸ್ಟ್ – 01
04.ಇಸಿಜಿ ತಂತ್ರಜ್ಞ – 01
05.ದಂತ ಆರೋಗ್ಯ ಶಾಸ್ತ್ರಜ್ಞ – 01
06.ರಿಫ್ರಷನಿಸ್ಟ್ – 01
07.ಶ್ರವಣ ಮತ್ತು ಮಾತಿನ ಚಿಕಿತ್ಸಕ – 01
08.ಔಷಧಿಗಾರ – 02
09.ರೇಡಿಯಾಗ್ರಾಫರ್ – 01
10.ಲ್ಯಾಬ್ ಸೂಪರಿಟೆಂಡೆಂಟ್ – 01
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ 3 ವರ್ಷದ ನರ್ಸಿಂಗ್ ಅಥವಾ ಬಿಎಸ್ಸಿ ನರ್ಸಿಂಗ್, ಕ್ರ.ಸಂ 2ರ ಹುದ್ದೆಗೆ ಬಿಎಸ್ಸಿ ಕೆಮಿಸ್ಟ್ರಿ, ಕ್ರ.ಸಂ 3ರ ಹುದ್ದೆಗೆ ಫಿಜಿಯೋ ಥೆರಪಿಯಲ್ಲಿ ಪದವಿ, ಕ್ರ.ಸಂ 4ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ದ್ವಿತೀಯಾ ಪಿಯುಸಿ/ ಪದವಿ, ಕ್ರ.ಸಂ 5ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪದವಿ, ಕ್ರ.ಸಂ 6,7,10ರ ಹುದ್ದೆಗೆ ಬಿಎಸ್ಸಿ, ಕ್ರ.ಸಂ 8,9ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ದ್ವಿತೀಯಾ ಪಿಯುಸಿ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕ್ರ.ಸಂ 1,8ರ ಹುದ್ದೆಗೆ 20 ರಿಂದ 40 ವರ್ಷ, ಕ್ರ.ಸಂ 2,3,4,5,6,7,9,10ರ ಹುದ್ದೆಗೆ 18 ರಿಂದ 33 ವರ್ಷದೊಳಗಿರಬೇಕು. ಹಿಂದಿಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : 100 ರೂ ಶುಲ್ಕ ನಿಗದಿಗೊಳಿಸಲಾಗಿದೆ. ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಸಂರ್ದಶನ ನಡೆಯುವ ದಿನಾಂಕ : 27-08-2018 ರಿಂದ 29-08-2018ರ ವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.secr.indianrailways.gov.in ಗೆ ಭೇಟಿ ನೀಡಿ.