Home Food ದಪ್ಪ ಅವಲಕ್ಕಿ ಬಾತ್

ದಪ್ಪ ಅವಲಕ್ಕಿ ಬಾತ್

ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ – 1/2 ಕೆ.ಜಿ
ಈರುಳ್ಳಿ – 2
ಹಸಿಮೆಣಸು – 5 ರಿಂದ 6
ಆಲೂಗಡ್ಡೆ – 1 (ಸಣ್ಣದಾಗಿ ಹೆಚ್ಚಿಕೊಳ್ಳಬೇಕು)
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಶೇಂಗಾಬೀಜ – 2 ರಿಂದ 3 ಚಮಚದಶ್ಟು
ಕರಿಬೇವು – 8-10 ಎಸಳು
ನಿಂಬೆಹಣ್ಣು – 1/2
ಕೊತ್ತಂಬರಿ ಸೊಪ್ಪು – ಚೂರು

ಮಾಡುವ ಬಗೆ:
ಮೊದಲಿಗೆ ಅವಲಕ್ಕಿಯನ್ನು 5 ರಿಂದ 8 ನಿಮಿಶಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಒಂದು ಬಾಣಲೆಗೆ 4-5 ಚಮಚದಶ್ಟು ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಶೇಂಗಾಬೀಜ ಹಾಕಿ ನಂತರ ಹಸಿಮೆಣಸು, ಈರುಳ್ಳಿ, ಆಲೂಗಡ್ಡೆ ಹಾಕಿ ರುಚಿಗೆ ತಕಶ್ಟು ಉಪ್ಪು, ಚಿಟಿಕೆ ಅರಿಶಿನ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಈಗ ನೆನೆಸಿ ತೆಗೆದ ಅವಲಕ್ಕಿ ಹಾಕಿ ಅದಕ್ಕೆ ನಿಂಬೆರಸ ಹಿಂಡಿ, ಕೊತ್ತಂಬರಿ ಸೊಪ್ಪು ಹಾಕಿ ತಿರುವಿದರೆ ದಪ್ಪ ಅವಲಕ್ಕಿ ಬಾತ್ ಸಿದ್ದ.