ಸಾಂದರ್ಭಿಕ ಚಿತ್ರ

ಕಾರವಾರ: ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2018– -19ನೇ ಸಾಲಿನಲ್ಲಿ ಗ್ರಾಮ ಸಂಪರ್ಕ ಯೋಜನೆಯ ಅಡಿ ಹಮ್ಮಿಕೊಳ್ಳುವ ಬೀದಿನಾಟಕ ಪ್ರದರ್ಶನಕ್ಕೆ ನೋಂದಾಯಿತ ಬೀದಿನಾಟಕ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಹತೆಗಳು
೧)ಅರ್ಜಿ ಸಲ್ಲಿಸುವ ಕಲಾ ತಂಡಗಳು ಬೀದಿ ನಾಟಕದಲ್ಲಿ ಅನುಭವ ಹೊಂದಿರಬೇಕು.
೨)ಅಭಿನಯ, ಹಾಡು, ಸಂಗೀತ, ನಿರೂಪಣೆ ಕೌಶಲವನ್ನು ಹೊಂದಿರಬೇಕು.
೩)ತಂಡದಲ್ಲಿ ಕನಿಷ್ಠ ಎಂಟು ಕಲಾವಿದರಿದ್ದು, ಈ ಪೈಕಿ ಇಬ್ಬರು ಮಹಿಳಾ ಕಲಾವಿದರು ಹಾಗೂ ಒಬ್ಬ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕಲಾವಿದರು ಇರುವುದು ಕಡ್ಡಾಯ.

RELATED ARTICLES  ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಣೆ

೪)ಆಯ್ಕೆಯಾದ ಕಲಾ ತಂಡವು ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಪ್ರದರ್ಶನ ನೀಡಲು ಸಿದ್ಧವಿರಬೇಕು.
೫)ಆಯ್ಕೆ ಸಂದರ್ಭದಲ್ಲಿ ಭಾಗವಹಿಸಿದ ಹಾಗೂ ತರಬೇತಿ ಪಡೆದ ಕಲಾವಿದರು ಬೀದಿನಾಟಕ ಪ್ರದರ್ಶನ ಸಂದರ್ಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

೬)ತಂಡದ ಎಲ್ಲ ಕಲಾವಿದರು ಬ್ಯಾಂಕ್‌ ಖಾತೆ ಹಾಗೂ ಪಾನ್‌ಕಾರ್ಡ್‌ ಹೊಂದಿರಬೇಕು. ಅರ್ಜಿಯೊಂದಿಗೆ ಸೂಕ್ತ ದಾಖಲೆಗಳು, ಕಲಾವಿದರ ಭಾವಚಿತ್ರ, ಆಧಾರ್ ಕಾರ್ಡ್‌, ಬ್ಯಾಂಕ್ ಖಾತೆ ಹಾಗೂ ಪಾನ್‌ಕಾರ್ಡ್‌ಗಳ ನಕಲು ಪ್ರತಿಯ ಜತೆ ಅರ್ಜಿ ಸಲ್ಲಿಸಬೇಕು.
೭) ಇದರೊಂದಿಗೆ, ಪರಿಶಿಷ್ಟ ಜಾತಿ, ಪಂಗಡದ ಕಲಾವಿದರ ಜಾತಿ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ.

RELATED ARTICLES  ಬಂದ್ ಆಯ್ತು 2000 ರೂ ನೋಟಿನ ಮುದ್ರಣ.

ಕಲಾ ತಂಡವನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದು, ಬಳಿಕ ತರಬೇತಿಗೆ ನಿಯೋಜಿಸಲಾಗುವುದು. ನಿಗದಿತ ಅರ್ಜಿ ನಮೂನೆಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೆಶಕರ ಕಚೇರಿಯಿಂದ ಪಡೆದು ಜುಲೈ 30ರ ಒಳಗೆ ಭರ್ತಿ ಮಾಡಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ: 08382– -226344 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.