ನಾವು ಎಲ್ಲವನ್ನು ಬಲ್ಲವರಾಗಿಬಿಟ್ಟಿದ್ದೇವೆ. ನಾನು ಎನ್ನುವ ಅಹಂಕಾರ ಎನ್ನುವುದು ಒಂದು ಕಡೆಯಾದರೆ ಮೋಹದ ಮಾಯೆ ನಮ್ಮದೆಲ್ಲವನ್ನು ಪರದೆ ಹಾಕಿ ಮುಚ್ಚಿಬಿಟ್ಟಿದೆ. ಬರೀ ಸ್ವಾರ್ಥದ ನಡುಗೆಯಲ್ಲಿ ಸಮಯ, ಸುಖ, ವಿಶ್ವಾಸ, ಆತ್ಮೀಯತೆ ಎಲ್ಲವನ್ನು ಗಂಟು ಕಟ್ಟಿ ಆಕಾಶಕ್ಕೆ ತೂರಿಬಿಟ್ಟಿದ್ದೇವೆ. ಯಾಕೆ ಹೀಗೆ ಆಗುತ್ತಿದೆ ಎನ್ನುವುದಕ್ಕೆ ಮೂಲ ಮಕ್ಕಳಿಗೆ ಸಿಗುತ್ತಿರುವ ಈಗಿನ ಸಂಸ್ಕಾರ ಎಂದು ಹೇಳಾಗುತ್ತಿದೆ. ಎಲ್ಲಿಯೇ ನೋಡಿದರೂ ಸಂಜೆಯಾಗುತ್ತಲೆ ಮನೆಯಲ್ಲಿ ಟಿವಿಯಲ್ಲಿ ಬರುವ ಧಾರಾವಾಹಿಗಳ ಅಬ್ಬರ. ಮಕ್ಕಳಲ್ಲಿ ಆ ಮುಸ್ಸಂಜೆಯಲ್ಲಿ ಸಿಗಬೇಕಿದ್ದ ಎರಡು ಗಂಟೆಗಳ ಸಂಸ್ಕಾರಯುತ ಸಮಯ. ಆಗ ಮನೆಯ ಮಂದಿಯೆಲ್ಲ ಸೇರಿ ಒಂದೆಡೆ ಕಲೆತು ಅವರದೇ ಆದ ಒಂದಿಷ್ಟು ಭಜನೆ, ನಿತ್ಯ ಪಠಣ, ಹಾಗೂ ಹಿರಿಯರು ಕಿರಿಯರು ಸೇರಿ ಕುಳಿತಿರುವ ಈ ಕ್ಷಣದಲ್ಲಿ ಹಲವು ವಿಚಾರಗಳ ವಿಮರ್ಶೆ, ಮಕ್ಕಳಿಗೆ ಪಟಾಫಟ್ ಉತ್ತರಿಸಲು ಸಾಧ್ಯವಾಗುವಂತ ಬಾಯಿ ಲೆಕ್ಕಗಳು. ಅಜ್ಜ ಅಜ್ಜಿಯ ಹಲವು ಪುಣ್ಯ ಕಥೆಗಳ ಜೊತೆ ನೀತಿಗಳು ಹಾಗೆ ನಾವು ಬದುಕಿನಲ್ಲಿ ಹೇಗಿರಬೇಕು ಎನ್ನುವ ಪೂರ್ಣ ಚಿತ್ರಣ ಆ ಎಳೆವಯಸ್ಸಿಗೆ ಸಿಗುವುದು ಸಂಜೆ ಆರುವರೆಯ ಗಂಟೆಯ ನಂತರ ಎಂಟುಗಂಟೆಯ ಒಳಗದೆ.
ಮೊದಲೆಲ್ಲ ಹಾಗೆ ಕ್ರಮವಾಗಿ ಎಲ್ಲರ ಮನೆಯಲ್ಲೂ ನಡೆಯುತಿತ್ತು. ಕಾಲ ಬದಲಾಯಿತು. ಅಲ್ಲ ಕಾಲದ ಜನರ ಭಾವನೆಗಳು ಬದಲಾದವು. ಭಜನೆ, ನಿತ್ಯ ಪಠಣ ಕಥೆ ಎನ್ನುವಲ್ಲಿಗೆ ಟಿವಿಯಂಥ ಮಾಯಾಂಗನೆ ಬಂದು ಕುಳಿತಿತು. ಲಗೋರಿ, ಕಣ್ಣಾಮುಚ್ಚಾಲೆ, ಕಂಬ ಸುತ್ತುವ ಆಟ, ಕಬ್ಬಡ್ಡಿ, ಕೋಕೋ, ಇಂಥಹ ಆಟಗಳು ಶಾಲೆಯಲ್ಲಿ ಮಾತ್ರ ಆಡುವುದು ಎಂದಾಗಿದೆ. ಅಷ್ಟೆ ಏಕೆ, ಚೆಸ್, ಪಗಡೆ, ಹಾವು ಏಣಿಯಂಥಹ ಆಟಗಳು ಸಹ ಈಗ ಆಡುವುದು ಕಮ್ಮಿ. ಮಕ್ಕಳು ದೈಹಿಕವಾದ ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳುವುದು ತೀರ ಕಮ್ಮಿಯಾಗಿದೆ.
ಈಗಿನ ಹಲವು ಮಕ್ಕಳನ್ನು ಕಾಣುತ್ತೇವೆ. ಎಲ್ಲೆಂದರಲ್ಲಿ ಮೊಬೈಲ್ ಹಿಡಿದು ಕೂರುವುದು. ಅಲ್ಲಿಯ ಗೇಮ್ ಆಡುವುದು. ಆ ಗೇಮ್ ಆಡಲು ಕುಳಿತರೆ ಊಟವೂ ಬೇಡ ಆಟವೂ ಬೇಡ. ಆ ಮೊಬೈಲ್ ಗೇಮ್ ಆಡಲು ಶುರುಮಾಡಿದರೆ ಅದರಲ್ಲೆ ಅಡಿಟ್ ಆದವರರೀತಿ ಕುಳಿತಿರುತ್ತಾರೆ. ಮನೆಗೆ ಯಾರೇ ಬರಲಿ ಒಂದು ಮಾತಿರಲಿ ನಗುವೂ ಇರುವುದಿಲ್ಲ. ಅಪರಿಚಿತರಾದರೆ ಆಮಗು ಈ ಮನೆಗೆ ಸಂಭಂಧಿಸಿದ್ದಲ್ಲವೇ ಎಂದು ತಿಳಿದುಕೊಳ್ಳಬೇಕು ಅಷ್ಟೆ.
ಮಗುವಿನ ಮನಸ್ಸು ಸಂಕುಚಿತವಾಗುತ್ತಿದೆ. ಯಾರೊಟ್ಟಿಗೂ ಬೆರೆಯಲು ಮನಸ್ಸು ಮಾಡುವುದಿಲ್ಲ. ಮುಂದೊಂದು ದಿನ ಸ್ಪರ್ಧಾತ್ಮಕ ಜೀವನ ನಡೆಸುವ ಸಂದರ್ಭ ಬಂದಾಗ ಪುಕ್ಕಲುತನ ಹೆದರಿಕೆಯಿಂದ ಬಂದ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತದೆ. ಮಗು ಬೆಳೆದಂತೆ ಹೊಸ ಪ್ರಪಂಚದ ಅರಿವಿವಿನ ಕೊರೆತೆಯಿಂದ ನಾನು ನನ್ನ ಮನೆ ಎನ್ನುವಷ್ಟಕ್ಕೆ ಒಗ್ಗಿಕೊಂಡು ಹೊರಗಿನ ಪ್ರಪಂಚ ತ್ನ ವಿರೋಧಿ ಎಂದು ಭಾವಿಸುತ್ತ. ಕೂಪ ಮಂಡೂಕದಂತೆ ಬದುಕ ಕಳೆಯುವ ಜನರೇ ಹೆಚ್ಚಾಗಿದ್ದಾರೆ.
ಕೆಲವು ಕಡೆ ಹೇಳಲಾಗುತ್ತದೆ. ಇಂಟರ್ನೇಟ್ ಅಂಪರ್ಕದಿಂದ, ದೇಶ ವಿದೇಶದಲ್ಲಿ ಬಿಜನೆಸ್ ಮಾಡುತ್ತೇವೆ, ಅಪರಿಚಿತರಲ್ಲೂ ನಮಗೆ ಸಂಪರ್ಕವಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಂತಹ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ನಾವು ಇಡೀ ಪ್ರಪಂಚವನ್ನೆ ಅಂಗಯಗೆ ತಂದಿದ್ದೇವೆ ಎಂದು. ಹೌದು ಪ್ರಪಂಚ ಸ್ಮಾರ್ಟ್ ಪೋನಿನಲ್ಲೇ ಅಡಗಿಕುಳತಿದೆ. ಆದರೆ ಒಂ ದು ಹಂತದವರೆಗೆ ಎಲ್ಲದೂ ಎಲ್ಲವೂ ನಮ್ಮದೇ. ಆನಂತರದ ಜೀವನ. ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಎದುರು ನಮಗೆ ಆಪ್ತ ಅಥವಾ ಆತ್ಮೀಯ ಎನ್ನಿಸಿಕೊಂಡಿರ ಬೇಕು. ನಾವು ನಕ್ಕಾಗ ತಾವು ನಕ್ಕು ಎರಡು 10ಹಲ್ಲು ಕಾಣಿಸಬೇಕು. ನಾವು ಅತ್ತಾಗ ನಮ್ಮ ಸಮಾಧನ ಮಾಡಿ ಎದೆಗೆ ಒರಗಿಸಿಕೊಳ್ಳಬೇಕು. ಪ್ರತಿಯೊಂದು ಮಾತು ಕೇಳಿಸಿಕೊಳ್ಳುವ ಮನವೊಂದಿರಬೇಕು ಎನ್ನಿಸದೇ ಇರದು ಇಂತಹ ಬಂಧಕ್ಕೆ ಯಾವ ಅಂತರ್ಜಾಲದಲ್ಲಿ ಸಿಕ್ಕ ಬಂಧುವು ಹತ್ತಿರನಾಗಲಾರ. ಸಾವಿರಾರು ಜನರಲ್ಲಿ ಎಲ್ಲೋ ಒಬ್ಬರು ಇಬ್ಬರು ಆತ್ಮೀಯ ನಂಬಿಕೆ ಉಳ್ಳವರಾದರೆ ಅದೇ ಹೆಚ್ಚು.
ಹಾಗಾಗಿ ನಾವು ಎಲ್ಲರೊಟ್ಟಿಗೆ ಬೆರೆತು ಕಲೆತು ನಡೆಯುವುದನ್ನು ಕಲಿಯಬೇಕು. ಪೊಳ್ಳು ಮಾಯೆಗಿಂತ ಗಟ್ಟಿ ಬಂಧವು ನಮ್ಮ ಜೀವನದ ಸಾರವಾಗಬೇಕು.ಹುಟ್ಟಿದ ಮಗುವಿನಿಂದಲೇ ಪೂರ್ವತಯಾರಿ ನಡೆಯಬೇಕು.ಮಗು ಹೀಗೆ ಆಗಬೇಕು ಎಂದು ಕನಸು ಕಾಣುವುದರ ಹಿಂದೆ ಹೆತ್ತವರ ಪಾಲು ದೊಡ್ಡದಿದೆ. ಅದಕ್ಕೂ ಮೀರಿ ನಡೆವ ಸಂಗತಿಗಳಿಗೆ ವಿಧಿ ಎಂದು ಹೇಳಬಹುದು. ಆದರೆ ಯಾವ ದಾರಿಯಲ್ಲಿ ನಡೆಯಬೇಕು ಎಂದು ಸೂಕ್ಷ್ಮವಾಗಿ ತಿಳಿಸಿಕೊಡುವುದು ಮಾತ್ರ ಹಿರಿಯರ ಕರ್ತವ್ಯ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ