ಸಂಕಷ್ಟಿ ಚತುರ್ಥಿ ಶ್ರೀ ಗಣೇಶನಿಗೆ ಮೀಸಲಾಗಿರುವ ಒಂದು ಪವಿತ್ರವಾದ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. ಅನೇಕ ಮಹಿಳೆಯರು ತಮ್ಮ ಕುಟುಂಬಗಳ ಕಲ್ಯಾಣಕ್ಕಾಗಿ ಸಂಕಷ್ಟಿ ಚತುರ್ಥಿಯ ದಿನದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ.

ಸಂಕಷ್ಟಿ ಅಂದರೆ ನಮ್ಮ ತೊಂದರೆಗಳಿಂದ ಮುಕ್ತಿಯಾಗುವುದು ಎಂದರ್ಥ. ಶ್ರೀ ಗಣೇಶ ಸಂಕಷ್ಟಿಯ ದಿನ ಎಲ್ಲಾ ತೊಂದರೆ, ಅಡೆತಡೆ ಮತ್ತು ಸಮಸ್ಯೆಗಳನ್ನು ನಿವಾರಿಸುವನೆಂಬ ನಂಬಿಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ. ಅಂದು ಜನರು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರನನ್ನು ನೋಡಿದ ಮೇಲೆಯೇ ಉಪವಾಸವನ್ನು ಕೊನೆಗೊಳಿಸುತ್ತಾರೆ

ಸಂಕಷ್ಟಿ ಚತುರ್ಥಿಯನ್ನು ಪ್ರತಿ ತಿಂಗಳೂ ಮೇಲೆ ಹೇಳಿದ ಹಾಗೆ ಕೃಷ್ಣಪಕ್ಷದ ನಾಲ್ಕನೆಯ ದಿವಸ ಆಚರಿಸಲ್ಪಡುತ್ತದೆ. ಶ್ರೀ ಗಣೇಶನನ್ನು ಪ್ರತಿ ತಿಂಗಳು ಬೇರೆಬೇರೆ ಹೆಸರಿನಿಂದ ಮತ್ತು ತಾವರೆ ಹೂವಿನ ದಳಗಳಿಂದ ಪೂಜಿಸುತ್ತಾರೆ. ಪ್ರತಿ ತಿಂಗಳು ಪೂಜೆಮಾಡಿದ ನಂತರ ಆಯಾ ತಿಂಗಳ ಕಥೆಯನ್ನು ವಾಚನಮಾಡುತ್ತಾರೆ. ಶ್ರೀ ಗಣೇಶನಲ್ಲದೆ ಶ್ರೀ ಶಿವನನ್ನೂ ಸಹ ಅಂದು ಪೂಜಿಸುತ್ತಾರೆ. ಈ ಸಂಕಷ್ಟಿ ಚತುರ್ಥಿಯ ಪುರಾಣ ಮತ್ತು ಪ್ರಾಮುಖ್ಯತೆ ಏನು ಎಂದು ಬನ್ನಿ

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಗಣೇಶನ ಕಥೆಯಂತೂ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ದೇವಿ ಪಾರ್ವತಿಯು ತನ್ನ ದೇಹದಮೇಲಿನ ಕೊಳಕಿನಿಂದ ಗಣೇಶನನ್ನು ಸೃಷ್ಟಿಮಾಡಿದಳು. ನಂತರ ಅವನನ್ನು ತನ್ನ ಮಗನೆಂದು ಕರೆದಳು. ಒಂದು ಮಹತ್ವಪೂರ್ಣದಿವಸ ದೇವಿ ಪಾರ್ವತಿಯು ಸ್ನಾನಕ್ಕೆ ಹೊರಡುವ ಮುನ್ನ ಗಣೇಶನಿಗೆ ಸ್ನಾನದ ಕೋಣೆಯ ಹೊರಗೆ ಕಾವಲು ಕಾಯಲು ಹೇಳಿದಳು. ಸ್ವಲ್ಪ ಸಮಯದ ನಂತರ ಶ್ರೀ ಶಿವನು ತನ್ನ ಗಣಗಳಪರಿವಾರ ಸಮೇತ ಬಂದಾಗ ಶ್ರೀ ಗಣೇಶ ಅವನನ್ನು ಒಳಗಡೆ ಹೋಗುವುದನ್ನು ತಡೆದು ನಿರಾಕರಿಸಿದನು.

ಗಣೇಶ ಸಂಕಷ್ಟಿಯ ದಿನದ ಮಹತ್ವ

ಶಿವನ ಗೈರುಹಾಜರಿಯಲ್ಲಿ ಸೃಷ್ಟಿಯಾದ ಶ್ರೀ ಗಣೇಶನು ತನ್ನ ಮಗನೆಂದು ಪರಿಚಯವಾಗಿರಲಿಲ್ಲ. ಆದ್ದರಿಂದ ಅವನಿಗೆ ಕೋಪ ಬಂದು ತನ್ನ ಗಣಗಳಿಗೆ ಆ ಹುಡುಗನ ಮೇಲೆ ದಾಳಿ ಮಾಡಲು ಆಜ್ಞಾಪಿಸಿದನು. ಹೀಗೆ ಹೋರಾಟ ನಡೆಯುತ್ತಿದ್ದಾಗ ಶ್ರೀ ಗಣೇಶನ ತಲೆ ಕತ್ತರಿಸಿಹೋಯಿತು.

ದೇವಿ ಪಾರ್ವತಿಗೆ ಈ ಅಪಘಾತದ ವಿಷಯ ತಿಳಿದ ಮೇಲೆ ದುಃಖದಿಂದ ಸಮಾಧಾನಗೊಳಿಸಲಾಗದ ಪರಿಸ್ಥಿತಿಯ ಮಟ್ಟವನ್ನು ತಲುಪಿದಳು. ಅವಳು ಆದಿ ಶಕ್ತಿಯ ಉಗ್ರರೂಪವನ್ನು ಧರಿಸಿಕೊಂಡು ಇಡೀ ಪ್ರಪಂಚವನ್ನೇ ನಾಶಪಡಿಸಲು ಸಿದ್ಧವಾದಳು. ಶ್ರೀ ಶಿವನು ತನ್ನ ಹೆಂಡತಿಯನ್ನು ಮೆಚ್ಚಿಸುವುದಕ್ಕೋಸ್ಕರ ಆ ಹುಡುಗನ ತಲೆಯನ್ನು ಪುನಃಸ್ಥಾಪಿಸುತ್ತೇನೆಂದು ಭರವಸೆಕೊಟ್ಟನು. ಹೀಗಾಗಿ ಆ ಹುಡುಗನಿಗೆ ಒಂದು ಆನೆಯತಲೆಯನ್ನಿಟ್ಟು ಗಣೇಶನೆಂದು ಕರೆಯಲ್ಪಟ್ಟನು. ಹಾಗೆ ಮಾಡಿದ ನಂತರ ಶ್ರೀ ಶಿವನು ಶ್ರೀ ಗಣೇಶನಿಗೆ ಇನ್ನು ಮುಂದೆ ಬುದ್ಧಿವಂತಿಕೆ, ಜ್ಞಾನ ಮತ್ತು ಸಮೃದ್ಧಿಯ ದೇವರೆಂದು ಪೂಜಿಸಲ್ಪಡುವನೆಂದು ವರವನ್ನು ಕೊಟ್ಟು ಆಶೀರ್ವಾದಮಾಡಿದನು.

RELATED ARTICLES  ಬೆಟ್ಟ ಹತ್ತಿದಂತೆ ಗುರಿ ಸಾಧಿಸಿದರೆ?

ಗಣೇಶನು ಸಮಸ್ತ ಅಡೆತಡೆಗಳನ್ನು ಹೋಗಲಾಡಿಸುವನೆಂದು ಯಾವುದೇ ಸಮಾರಂಭವಾಗಲಿ ಮೊದಲು ಪೂಜೆ ಮಾಡಿಸಿಕೊಳ್ಳುವನಂತಾದನು. ಶ್ರೀ ಶಿವನು ಈ ವರವನ್ನು ಸಂಕಷ್ಟಿ ಚತುರ್ಥಿ ದಿನದಂದು ಕೊಟ್ಟು ಆಶೀರ್ವದಿಸಿದನೆಂದು ನಂಬಲಾಗಿದೆ. ಹೀಗಾಗಿ ಜನರು ಸಂಕಷ್ಟಹರ ಅಥವ ವಿಘ್ನಹರ್ತ ಎಂದು ಸಂಕಷ್ಟಿ ಚತುರ್ಥಿ ದಿನದಂದು ತಮ್ಮ ಜೀವನದಲ್ಲಿ ಬರುವ ಸಮಸ್ತ ವಿಘ್ನಗಳ ನಿವಾರಣೆಗೆ ಶ್ರೀ ಗಣೇಶನನ್ನು ಪೂಜಿಸುತ್ತಾರೆ.

ಸಂಕಷ್ಟಿ ಚತುರ್ಥಿ ಒಂದು ದೊಡ್ದ ಮಹತ್ವ ಪ್ರಾಮುಖ್ಯತೆಯನ್ನು ಪಡೆದಿದೆ
ಈ ಪೂಜೆಯನ್ನು ಕುಟುಂಬದ ಯೋಗಕ್ಷೇಮ ಮತ್ತು ಏಳಿಗೆಗೆ ಜನರು ಮಾಡುತ್ತಾರೆ. ಈ ಪೂಜೆಯನ್ನು ಸಾಯಂಕಾಲ ಚಂದ್ರದರ್ಶನವಾದ ನಂತರ ನಡೆಸಲಾಗುತ್ತದೆ. ಶ್ರೀ ಗಣೇಶನ ಪ್ರತಿಮೆಯನ್ನು ಶುಭ್ರವಾದ ವೇದಿಕೆಯಮೇಲಿಟ್ಟು ಹೂ ಮತ್ತು ದೂರ್ವ ಹುಲ್ಲಿನಿಂದ ಪೂಜಿಸುತ್ತಾರೆ. ಅವನಿಗೆ ಮೋದಕ, ಲಾಡು ಮತ್ತು ಇತರ ಭಕ್ಷ್ಯಗಳನ್ನು ಅರ್ಪಿಸುತ್ತಾರೆ.