“ನಾನು ಈಬಾರಿ ಸರಿಯಾಗಿ ಓದಿ ತರಗತಗೆ ನಾನೇ ಮೊದಲಿಗನಾಗಬೇಕು” ” ಇಂದಿನಿಂದ ನಾನು t.v ನೋಡುವುದಿಲ್ಲ” ಇಂತಹ ಅನೇಕ ಸಂಕಲ್ಪಗಳನ್ನ ನನ್ನ ಬಾಲ್ಯದಲ್ಲಿ ಕೈಗೊಂಡಿದ್ದೆ.
ಅವೆಲ್ಲಾ ಇನ್ನೂ ಸಂಕಲ್ಪಗಳಾಗಿಯೇ ಇವೆ ಹೊರತು ಸಂಕಲ್ಪ ಸಿದ್ಧಿಸಿಲ್ಲ.
ಇದಕ್ಕೆ ಕಾರಣ ಹುಡುಕಿದರೆ ಸುಲಭವಾಗಿ ಸಿಗುತ್ತದೆ. ಅದೇನೆಂದರೆ ನಾನು ಅಂತಹ ಯೋಜನೆಗಳನ್ನು ಯೋಚಿಸಿದ್ದೆ ಹೊರತು ಯೋಜಿಸಿಕೊಂಡಿರಲಿಲ್ಲ. ಅಂದರೆ ಆ ವಿಚಾರಗಳಲ್ಲಿ ನಾನು ಕಾರ್ಯೋನ್ಮುಖನಾಗಿರಲಿಲ್ಲ.
ನಾನೊಬ್ಬನಲ್ಲ ಇಂತಹ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ. ಅಂತಹ ಎಲ್ಲರಲ್ಲೂ ಸಿಗುವುದು ಇದೇ ಉತ್ತರವೇ ಆಗಿದೆ.
ಕಾರ್ಯ ಎಂಬುದು ಕೇವಲ ನಮ್ಮ ಮನಸ್ಸಿನಲ್ಲಿ ಇದ್ದರಾಗದು. ಅದರಲ್ಲಿ ನಾವು ಉದ್ಯುಕ್ತರಾದಾಗ ಮಾತ್ರ ಅಲ್ಲಿ ಯಶಸ್ಸು ದೊರೆಯುತ್ತದೆ,ಚಿಂತಿತ ಕಾರ್ಯ ಸಿದ್ಧಿಯಾಗುತ್ತದೆ.
ಉದ್ಯಮೇನಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ.
ನಹಿ ಸುಪ್ತಸ್ಯ ಸಿಂಹಸ್ ಪ್ರವಿಶಂತಿ ಮುಖೇ ಮೃಗಾಃ.
ಕಾರ್ಯದಲ್ಲಿ ಉದ್ಯುಕ್ತನಾಗುವುದರಿಂದ ಮಾತ್ರ ಕಾರ್ಯವು ಸಿದ್ಧಿಸುತ್ತದೆ ಕೇವಲ ಮನಸ್ಸಿನ ಆಲೋಚನೆಯಿಂದಲ್ಲ
ಹೇಗೆಂದರೆ ಸುಮ್ಮನೆ ಮಲುಗಿರುವ ಸಿಂಹದ ಬಾಯಿಯಲ್ಲಿ ಜಿಂಕೆ ತಾನಾಗಿಯೇ ಪ್ರವೇಶಿಸುವುದಿಲ್ಲ ಎಂಬುದು ಮೇಲಿನ ಸುಭಾಶಿತದ ಅರ್ಥ.
ಹಾಗಾಗಿ ನಾವು ಅದನ್ನು ಮಾಡುತ್ತೇವೆ ಇದನ್ನು ಮಾಡುತ್ತೇವೆ, ದೇಶವನ್ನೇ ಬದಲಿಸಿಬಿಡುತ್ತೇವೆ ಎಂದರಾಗದು. ಅಂದುಕೊಂಡ ಕೆಲಸವನ್ನು ಆರಂಭಿಸಿ ಅದರಲ್ಲಿ ಎಷ್ಟೇ ವಿಘ್ನಗಳು ಎದುರಾದರೂ ಎದುರಿಸಿ ಮುನ್ನುಗ್ಗವೇಕು. ಕಾರ್ಯದಲ್ಲಿ ಯಶಸ್ಸುಗಳಿಸಬೇಕು.
ಎಲ್ಲವೂ ಬದಲಾಗಬೇಕು ಆದರೆ ನಮ್ಮಲ್ಲಿ ಯಾವ ಬದಲಾವಣೆಯೂ ಆಗಬಾರದೆಂದರೆ ಅದು ಮೂರ್ಖತನವಾಗುತ್ತದೆಯಷ್ಟೆ.
ಮೂರ್ಖತನವ ಬಿಟ್ಟು ಯಶಸ್ಸಿನೆಡೆಗೆ ನಡೆಯೋಣ. ಯಸ್ಸುಗಳಿಸೋಣ.