ಪ್ರತಿದಿನ 2ಜಿಬಿ ಡೇಟಾ ಸಾಲುತ್ತಿಲ್ಲಾ ಎನ್ನುವ ಬದಲು ಫೇಸ್‌ಬುಕ್‌ನಲ್ಲಿ ಆಟೊರನ್ ಆಗುವ ವಿಡಿಯೋಗಳನ್ನು ಯಾವಾಗಲೂ ನೋಡದಿರುವುದು ಒಳ್ಳೆಯದು. ಏಕೆಂದರೆ, ಫೇಸ್‌ಬುಕ್ ನಿಮ್ಮೆಲ್ಲಾ ಡೇಟಾವನ್ನು ನಿಮಗೆ ಗೊತ್ತಿಲ್ಲದ ರೀತಿಯಲ್ಲಿಯೇ ಖಾಲಿ ಮಾಡುತ್ತಿದೆ. ಆದರೆ, ಉಚಿತವಾಗಿ ಮತ್ತು ಕಡಿಮೆಬೆಲೆಗೆ ಡೇಟಾ ಸಿಕ್ಕಿರುವುದರಿಂದ ನಿಮಗಿದು ತಿಳಿಯುತಿಲ್ಲ. ಹೌದು, ಫೇಸ್‌ಬುಕ್‌ನಲ್ಲಿ ವಿಡಿಯೋಗಳು ಆಟೊ ರನ್ ಆಗುತ್ತಿರುವುದರಿಂದ ಬಳಕೆದಾರರಿಗೆ ಗೊತ್ತಿಲ್ಲದಂತೆಯೇ ಸಾಕಷ್ಟು ಡೇಟಾ ಬಳಕೆದಾರರಿಂದ ಕೈಜಾರುತ್ತಿದೆ. ಮೊಬೈಲ್ ಡೇಟಾ ಹೆಚ್ಚು ಇರುವುದರಿಂದ ಫೇಸ್‌ಬುಕ್ ಪ್ರೇರೇಪಿಸುವ ವಿಡಿಯೋಗಳನ್ನು ನೋಡುತ್ತಲೇ ಫೇಸ್‌ಬುಕ್ ಬಳಕೆದಾರರು ಡೇಟಾವನ್ನು ಬಹುಬೇಗ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.

ಫೇಸ್‌ಬುಕ್ ವಿಡಿಯೋಗಳನ್ನು ನೋಡವುದು ಅಥವಾ ಬಿಡುವುದು ಮೊಬೈಲ್ ಬಳಕೆದಾರರ ಆಧ್ಯತೆಯಾಗಿದ್ದರೂ ಸಹ, ನಿಮ್ಮ ಡೇಟಾವನ್ನು ಕಬಳಿಸುತ್ತಿರುವ ಫೇಸ್‌ಬುಕ್‌ ನಿಂದ ಮೊಬೈಲ್ ಡೇಟಾವನ್ನು ಉಳಿಸಿಕೊಳ್ಳುವುದು ಹೇಗೆ? ಆಟೊ ರನ್ ವಿಡಿಯೋಗಳನ್ನು ಹೇಗೆ ತಡೆಯುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ ಮತ್ತು ನಿಮ್ಮ ಡೇಟಾ ಉಳಿಸಿಕೊಳ್ಳಿರಿ.

RELATED ARTICLES  ಕೋಟ್ಯಾಧಿಪತಿ ಹಣ,ಮಡದಿ, ಮಗುವನ್ನು ಬಿಟ್ಟು ಸನ್ಯಸಿಯಾಗಲು ಹೊರಟಿದ್ದಾರೆ.

ಮೊಬೈಲ್ ಡೇಟಾ ಬಳಕೆ ಹೆಚ್ಚಾದ ನಂತರ ಪ್ರತಿಯೋರ್ವ ಫೇಸ್‌ಬುಕ್ ಬಳಕೆದಾರನುಸರಾಸರಿ 100 ರಿಂದ 200MB ಡೇಟಾವನ್ನು ಫೇಸ್‌ಬುಕ್ ವಿಡಿಯೋಗಳನ್ನು ನೋಡುವ ಸಲುವಾಗಿಯೇ ಬಳಸಿಕೊಳ್ಳುತ್ತಿದ್ದಾನೆ. ಫೇಸ್‌ಬುಕ್ ವಿಡಿಯೋಗಳನ್ನು ನೋಡುತ್ತಾ ಮೊಬೈಲ್ ಬಳಕೆದಾರರಿಗೆ ಎಷ್ಟು ಡೇಟಾ ಖಾಲಿಯಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ.

ಫೇಸ್‌ಬುಕ್ ಯಾವಾಗಲೂ ನೀವು ವಿಡಿಯೋಗಳನ್ನು ನೋಡುವಂತೆ ಪ್ರೇರೇಪಿಸುತ್ತದೆ ಎಂದು ವರದಿ ಹೇಳಿದೆ. ಒಂದು ವಿಡಿಯೋ ನೋಡಿದ ನಂತರ ತಕ್ಷಣವೇ ಮತ್ತೊಂದು ವಿಡಿಯೋವನ್ನು ನೋಡುವಂತೆ ಫೇಸ್‌ಬುಕ್ ಯಾವಾಗಲೂ ಪ್ರೇರೇಪಿಸುತ್ತದೆ ಹಾಗಾಗಿ, ವಿಡಿಯೋ ನೋಡುವಾಗ ವಿಡಿಯೋಗಳನ್ನು ನೋಡುತ್ತಾ ಮೈ ಮರೆಯದಿರುವುದು ಒಳ್ಳೆಯದು.

RELATED ARTICLES  Viral Video: ಮಳೆಯಲ್ಲಿ ನೆನೆಯುತ್ತಾ ರೊಮ್ಯಾಂಟಿಕ್ ಹಾಡಿಗೆ ಯುವ ಜೋಡಿಯ ಡ್ಯಾನ್ಸ್‌!

ನೀವು ಫೇಸ್‌ಬುಕ್ ಆಪ್ ಅನ್ನು ತೆರೆದು ನ್ಯೂಸ್‌ವೀಡ್ ಅನ್ನು ಸ್ಕ್ರಾಲ್ ಮಾಡುತ್ತಿದ್ದರೆ ವಿಡಿಯೊಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ವಿಡಿಯೋ ಕಾಣಿಸಿಕೊಂಡ ನಂತರ ಅವುಗಳು ಆಟೋ ಪ್ಲೇ ಆಗುವುದನ್ನು ನೀವು ನೋಡಬಹುದು. ಇದು ಒಮ್ಮೊಮ್ಮೆ ಕಿರಿಕಿರಿಯಾಗುವುದಲ್ಲದೇ, ನಿಮ್ಮ ಮೊಬೈಲ್ ಡೇಟಾವನ್ನು ಬಹುಬೇಗ ಖಾಲಿ ಮಾಡುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ.

ಹೀಗೆ ಮಾಡಿ
ಫೇಸ್‌ಬುಕ್ ಆಪ್ ತೆರೆದು ಸೆಟಿಂಗ್ಸ್ ಕ್ಲಿಕ್ ಮಾಡಿ. ನಿಮ್ಮ ಎಡಭಾಗದಲ್ಲಿ ಕಾಣುವ ಹಲವು ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾದ ವಿಡಿಯೋಸ್ ಒತ್ತಿರಿ. ನಂತರ ಆಟೋಪ್ಲೇ ವಿಡಿಯೋಸ್’ ಆಯ್ಕೆ ಮಾಡಿ. ಯೆಸ್, ಆಫ್ , ಡೀಫಾಲ್ಟ್ ಎನ್ನುವ ಮೂರು ಆಯ್ಕೆಗಳು ಇರುತ್ತವೆ.’ಆಫ್’ ಆಯ್ಕೆ ಕ್ಲಿಕ್ ಮಾಡಿ. ವಿಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಿ.

ಮಾಹಿತಿ: ಗಿಜೋತ್ ಕನ್ನಡ