sachin
ಕಾಲೇಜನಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡ ನನಗೆ ಇತಿಹಾಸವೇ ಪ್ರಮುಖ ವಿಷಯವಾಗಿತ್ತು.ಹೈಸ್ಕೂಲಿನ ಹಂತದ ಇತಿಹಾಸದ ಪಠ್ಯದಲ್ಲಿ ಸಿಗುವ ಪುಟ್ಟ ಪುಟ್ಟ ವಿಷಯಗಳ  ಬಗ್ಗೆ ಬಲು ವಿವರವಾದ ಮಾಹಿತಿಯು ಕಾಲೇಜಿನ ಇತಿಹಾಸದ ಪಠ್ಯವು ನೀಡುತ್ತಿತ್ತು .ಅಷ್ಟಕ್ಕೂ ಇತಿಹಾಸವೆಂದರೆ ಗತಕಾಲದ ಘಟನೆಗಳನ್ನು ಕಾಲಾನುಕ್ರಮದಲ್ಲಿ ವಿವರಿಸುವ ಶಾಸ್ತ್ರ.ರಾಷ್ಟ್ರ ಪ್ರೇಮದ ಜೊತೆಯಲ್ಲಿ ಹಿಂದಿನ ವೈಭವ,ಪದ್ದತಿ.ಸಂಪ್ರದಾಯ,ಸಂಸ್ಕ್ರತಿ ,ತಪ್ಪು-ಒಪ್ಪುಗಳು ,ಯುದ್ಧಕ್ಕೆ ಕಾರಣ ಮತ್ತು ಪರಿಣಾಮ ,ಐತಿಹಾಸಿಕ ಪ್ರಜ್ಞೆ ಇವೆಲ್ಲ ತಿಳಿಸುವುದು ಇತಿಹಾಸದ ಉದ್ದೇಶವಾಗಿತ್ತು.ಒಟ್ಟಿನಲ್ಲಿ ಅರಿವಿನ ಮೂಲ ಕೊಂಡಿ. ಹಾಗಾಗಿಯೇ ಅನಾಗರಿಕತೆಯಿಂದ ನಾಗರಿಕತೆ ಕಡೆಗೆ ಸಾಗಿದ ಮಾನವನ ಕುಲದ ವಿಷಯವೇ  ಇತಿಹಾಸವೆಂದು ನಮ್ಮ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಹೇಳಿರಬೇಕು.ಹಿಂದೆ ಮಾನವ ಮಾಡಿದ ತಪ್ಪುಗಳನ್ನು ,ಅದರಿಂದ ಆದ ಪರಿಣಾಮವನ್ನು ತಿಳಿದು ಮುಂದಿನ ಪೀಳಿಗೆಯ ಮಾನವ ಅರಿತು ಸುಧಾರಿಸಿಕೊಳ್ಳುವ ಪ್ರಯತ್ನ ಎಂಬುದು ಇದರ ಒಳಾರ್ಥ.ಆದರೆ ಅನೇಕರು ಇಂದು ಹಿಂದಿನ ಕಾಲದ ಮಾನವನ ಇತಿಹಾಸವನ್ನು ಹೊಟ್ಟೆಪಾಡಿಗಾಗಿ ತಮಗೆ ಬೇಕಾದ ಹಾಗೆ ಸುಳ್ಳುಕಂತೆಗಳನ್ನು ಸೃಷ್ಟಿಸಿ ತಮ್ಮ ಹೊಟ್ಟೆಗೆ ಹಿಟ್ಟನ್ನು ತಯಾರಿಸಿ ಕೊಳ್ಳುತ್ತಿದ್ದಾರೆ.

ಆತ ಮೆವಾರದ ರಾಜ ರತನ ಸಿಂಗ.ರಜಪೂತರ ಕುಲಕ್ಕೆ ಸೇರಿದವನು.ಸಾಹಸ ಮತ್ತು ದೈರ್ಯಕ್ಕೆ ಹೆಸರುವಾಸಿಯಾಗಿದ್ದ.ತನ್ನ ಆಸ್ಥಾನದ ರಾಘವ ಚೇತನ ಗುಟ್ಟಾಗಿ ವಾಮಾಚಾರ ಮಾಡಿರುವ ವಿಷಯ ರಾಜ ರತನಸಿಂಗ್ ಅರಿತನು.ಈ ಕಾರಣದಿಂದ ಅಂದಿನ ಕಾಲದಲ್ಲಿ ನೀಡಲಾಗುತ್ತಿದ್ದ ಶಿಕ್ಷೆಯ ಪ್ರಕಾರವೇ  ರಾಘವ ಮಾಡಿದ ತಪ್ಪಿಗಾಗಿ ತಲೆ ಬೋಳಿಸಿ , ಕತ್ತೆ ಮೇಲೆ ಕುಳಿಸಿ , ಊರ ಜನರಿಂದ ಛಿಮಾರಿ ಹಾಕಿಸಿ , ತನ್ನ ರಾಜ್ಯದಿಂದ ಗಡಿಪಾರು ಮಾಡಿದ. ಅಂದಿನ ಕಾಲದಲ್ಲಿ ಅತ್ಯಂತ ಅಮಾನವೀಯ ಶಿಕ್ಷೆ ಇದಾಗಿತ್ತು.ಇದರಿಂದ ಕೋಪಗೊಂಡ ರಾಘವ ಚೇತನ ಸೇಡುತೀರಿಸಿ ಕೊಳ್ಳಲು ಕಾಮುಕನಾದ ಅಲ್ಲಾವುದ್ದೀನ ಖಿಲ್ಜಿ ಬಳಿ ಹೋಗಿ ರಾಣಿಯ ಸೌಂದರ್ಯವನ್ನು ವಿವರಿಸಿದ.ಮಾತಿನಲ್ಲೇ ಅವಳ ಸೌಂದರ್ಯಕ್ಕೆ ಕಾಮುಕನನ್ನು ಬಡಿದೇಬ್ಬಿಸುವಂತೆ ಮಾಡಿದ.ಆಗ ಕಾಮುಕ ಖಿಲ್ಜಿ ಅವಳ ಸೌಂದರ್ಯವನ್ನು ನೋಡಲು ಮೆವಾರವಕ್ಕೆ ಮುತ್ತಿಗೆ ಹಾಕಿದ.ನಿಮ್ಮ ಸಾಮ್ರಾಜ್ಯವನ್ನು ನನಗೆ ಕೊಡಿ ಇಲ್ಲವೆ , ನನಗೆ ತಂಗಿಯ ಸಮಾನಳಾದ ಪದ್ಮಿನಿಯ ಮುಖ ತೋರಿಸಿ  ಎಂದು ಷರತ್ತು ಹಾಕಿದ.ಯುದ್ದ ಮಾಡಿ ರಕ್ತಪಾತವನ್ನು ಸೃಷ್ಠಿ ಮಾಡುವ ಬದಲು ,ತಂಗಿಯ ಸಮಾನಳು ಎನ್ನುವ ಇತನ ಮಾತಿಗೆ ಬೆಲೇ ನೀಡಿ ರಾಜ  ಪದ್ಮಿನಿಗೆ ಮುಖ ತೋರಿಸುವಂತೆ ಬೇಡಿಕೊಂಡ.ಅದಕ್ಕೆ ಪ್ರತಿಯಾಗಿ ಪದ್ಮಿನಿ ಮುಖವನ್ನು ತೋರಿಸಲು ಒಪ್ಪಲಿಲ್ಲ.ಆದರೂ ಕೊನೆಗೆ ರಾಜನ ಒತ್ತಾಯ ಮತ್ತು ರಾಜ್ಯದ ಸೈನಿಕರ ಹಿತವನ್ನು ಬಯಸಿ , ನೇರವಾಗಿ  ತೋರಿಸದೆ ಕನ್ನಡಿಯ ಪ್ರತಿಬಿಂಬದ ಮೂಲಕವಾಗಿ ತನ್ನ  ಮುಖವನ್ನು ತೋರಿಸಲು ಒಪ್ಪಿಕೊಂಡಳು.ಹೇಗೆ ಆದರು ಸರಿ ಸೌಂದರ್ಯವನ್ನು ಸವಿಯಲು ಬಂದ ಖಿಲ್ಜಿಗೆ ಅಷ್ಟೇ ಸಾಕಿತ್ತು.ಹಾಗಾಗಿ ಯಾವದಾದರೇನು ಎಂಬಂತೆ ದರ್ಪಣದ ಮೂಲಕ ಪದ್ಮಿನಿಯ ಮುಖವನ್ನು ನೋಡಿದ.ತಂಗಿ ಎಂದು ಸಂಬೋಧಿಸಿ ಅವಳ ಸೌಂದರ್ಯವನ್ನು ನೋಡಿದ ಖಿಲ್ಜಿ ತಂಗಿ ಎಂಬ ಶಬ್ದ ಮರೆತು ಮನದಲ್ಲಿ ಕಾಮಂದನಾಗಿ ರತನ ಜೊತೆಯಲ್ಲಿ ಸ್ನೇಹದ ನಾಟಕವಾಡಿ ತನ್ನ ಬಿಡಾರದಲ್ಲಿ ಬಂಧಿಸಿದ.ರಾಜನನ್ನು ಪಡೆಯಲು ರಾಣಿಯನ್ನು ತನಗೆ ಒಪ್ಪಿಸಬೇಕು ಇಲ್ಲವೇ , ರಾಜ ರತನ ಸಿಂಗನ ಮರಣವನ್ನು ನೋಡಬೇಕಾಗಬಹುದು  ಎಂಬ ಷರತ್ತು ಖಿಲ್ಜಿ ರಜಪೂತರಿಗೆ ರವಾನಿದ.ದೈರ್ಯವಂತೆಯಾದ ಪದ್ಮಾವತಿ ಬುದ್ದೀವಂತೆಯು ಆಗಿದ್ದಳು.ತನ್ನ ಬುದ್ದಿವಂತಿಕೆ ಬಳಸಿ ಖಿಲ್ಜಿಗೆ ಬುದ್ದಿ ಕಲಿಸಬೇಕೆಂಬ ನಿರ್ದಾರವನ್ನು ಮಾಡಿ ,ಖಿಲ್ಜಿಯ ಷರತ್ತಿಗೆ ಒಪ್ಪಿದಳು.ಆಸ್ಥಾನದ ಗೆಳತಿಯರೊಂದಿಗೆ ಬರುವುದಾಗಿ ಹೇಳಿ ,ವೀರವೇಷದಿಂದ  ಹೋರಾಡುವ  ಸೈನಿಕರನ್ನು ತನ್ನ ಗೆಳತಿಯ ವೇಷ ತೊಡಿಸಿ ಖಿಲ್ಜಿಯ ಬಿಡಾರಕ್ಕೆ ಕರೆ ತಂದಳು.ವೇಷಧಾರಿ ಸೈನಿಕರು ಖಿಲ್ಜಿ ಬಿಡಾರಕ್ಕೆ ಬಂದದ್ದೇ ತಡ ಏಕಾಯಕಿ ಖಿಲ್ಜಿ ಸೈನಿಕರ ಮೇಲೆ ದಾಳಿ ಮಾಡಿ ,ಖಿಲ್ಜಿಯ ಸೈನಿಕರು ಸುಧಾರಿಸಿ ಕೊಳ್ಳುವ ಮುನ್ನವೇ ರಾಜನಾದ ರತನ ಸಿಂಗನನ್ನು ಅಲ್ಲಿಂದ ತಪ್ಪಿಸಿ ಮೆವಾರಕ್ಕೆ ಬಂದು ಬಿಟ್ಟಳು.ಈ ಮೋಸವನ್ನು ಅರಿತ ಖಿಲ್ಜಿ ಕೋಪಿಷ್ಟನಾಗಿ ಇನ್ನೂ ಹೆಚ್ಚಿನ  ಸೈನ್ಯವನ್ನು ಬಳಸಿ ಮತ್ತೇ ಮೆವಾರದ ಕೋಟೆಯನ್ನು 7 ತಿಂಗಳುಗಳ ಕಾಲ ಮುತ್ತಿಗೆ ಹಾಕಿದ.ಯಾವುದೇ ಆಹಾರದ ಸರಬರಾಜು ಆಗದಂತೆ ನೋಡಿ ಕೊಂಡನು.7 ತಿಂಗಳ ತರುವಾಯ ಆಹಾರದ ಕೊರತೆಯಿಂದ ಕೊನೆಗೂ ರತನ ಸಿಂಗ ಕೋಟೆಯ ಬಾಗಿಲು ತೆಗೆದು ಖಿಲ್ಜಿಯ ಜೊತೆಯಲ್ಲಿ ಯುದ್ದ ಮಾಡುತ್ತಾನೆ.ಖಿಲ್ಜಿ ಸೈನಿಕರ ಅಬ್ಬರವನ್ನು ಕಣ್ಣಾರೆ ಕಂಡ ಪದ್ಮಿನಿ ರಜಪೂತರ ಸೋಲು ಖಚಿತವೆಂದು ತಿಳಿದು ಅರಮನೆಯಲ್ಲಿಯೇ ತನ್ನ ಸಖಿಯರೊಂದಿಗೆ ಆತ್ಮಪ೯ಣೇ ಗೈಯುತ್ತಾಳೆ. ಯುದ್ಧವನ್ನು ಗೆದ್ದು ಪದ್ಮಿನಿಯನ್ನು ಪಡೆಯಬೇಕೆಂಬ ಹಂಬಲದಿಂದ ಅರಮನೆ ಹೊಕ್ಕ ಖಿಲ್ಜಿಗೆ ಪದ್ಮಿನಿ ಭಸ್ಮ ಸಿಗುತ್ತದೆ ವಿನಃ ಅವಳು ಮಾತ್ರ ಸಿಗುವುದಿಲ್ಲ..ಕೊನೆಗೂ ಪ್ರಾಣಕ್ಕಿಂತ ಮಾನವೇ ಶ್ರೇಷ್ಟ ಎಂಬ ರಜಪೂತ ಮಹಿಳೆಗೆ ಗೆಲುವು ಲಭಿಸುತ್ತದೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾದ ಸಂಗತಿ.

RELATED ARTICLES  ದಿನದ ದೀವಿಗೆ

ಈ ಮೇಲಿನ ಕಥೆಯೇ ಎಲ್ಲರಿಗೂ ಆದರ್ಶ.ಈಗಲೂ ರಾಜಸ್ತಾನದ ಜನಮಾನಸದಲ್ಲಿ ಪದ್ಮಿನಿ ಸಾಹಸ,ಚತುರತೆ,ಪತಿವೃತೆ ಯ ಕಥೆ ಅಲ್ಲಿಯ ಜನಸಾಮಾನ್ಯರಿಗೂ ಪ್ರೇರಣೇ ನೀಡುತ್ತಲೇ ಇದೇ.ಆದರೆ ಈ ಕತೆಯನ್ನೇ ತನಗೆ ಇಷ್ಟವಾಗುವಂತೆ ತಿರುಚಿ-ಮುರುಚಿ ಪದ್ಮಿನಿ ಮತ್ತು ಖಿಲ್ಜಿ ನಡುವೆ ಸರಸ ಬೆರೆಸಿ ಕೋನೆಗೆ ಹಳೆಯ ಸೇಡಿನ ನೆವದಲ್ಲಿ ಖಿಲ್ಜಿಯ ಸಾಯಿಸುವ ಸಿನೆಮಾ ಮಾಡಿ ಹಣವನ್ನು ಮಾಡಲು ಹೊರಟಿದ್ದಾರೆ.ಇದರ ವಿರುದ್ದ ಕೂಗು ಬಿದ್ದರೆ , ಸಿನೆಮಾ ಒಂದೂ ಮನರಂಜನೆಯಾಗಿ ಸ್ವೀಕರಿಸಿ  ಅಂತಾ ಉಪದೇಶ ಬೇರೇ ಕೊಡುತ್ತಿದ್ದಾರೆ.

ಸಿನೆಮಾ ಮನರಂಜನೆಗೆ ಇದೇ ಅಂತಾ ನಮಗೆ ಬೇಕಾದ ಹಾಗೇ ತಿರುಚಿ ಸಿನೆಮಾ ಮಾಡಲು ಹೊರಟರೆ ರಾಮಾಯಣದ ಕಥೆಯಲ್ಲಿ ರಾವಣನೆ ನಾಯಕ ,ಮಹಾಭಾರತದಲ್ಲಿ  ದುರ್ಯೋಧನ ನಾಯಕ  ಎಂದು ಸಿನೆಮಾ ಮಾಡಿದರೂ ,ನಾವುಗಳು ಒಪ್ಪಿಕೊಳ್ಳಬೇಕು ಎನ್ನುವ ಹುನ್ನಾರವೇ……..? ಸಿನೆಮಾ ಕೇವಲ ಮನರಂಜನೆಯ ಮಾಧ್ಯಮವೆಂದು ಪರಿಗಣಿಸಿದ್ದರೇ ಸಿನೆಮಾದ ಅನೇಕ ಸನ್ನಿವೇಶಗಳಿಗೆ ಸೆನ್ಸಾರ್ ಮಂಡಳಿಯ ಅಗತ್ಯವೇನಿತ್ತು….?ಮನರಂಜನೆಯೇ ಸಿನೆಮಾದ ಮುಖ್ಯ ಉದ್ದೇಶವಾಗಿದ್ದರೆ ಬಾಹುಬಲಿ2 ಸಿನೆಮಾ 1,500 ಕೋಟಿ ಹಣವನ್ನು ಮಾಡಿ ಪ್ರಸಿದ್ಧಿ ಪಡೆದಾಗಲೂ ಸಹಿತ ಸಿಂಗಾಪುರದಲ್ಲಿ ವಿದ್ಯಾರ್ಥಿಗಳಿಗೆ ಏಕೆ ಬ್ಯಾನ ಮಾಡಲಾಗಿತ್ತು….?ಅಶ್ಟಕ್ಕೂ ಎಲ್ಲ ಸಿನೆಮಾವನ್ನು ಮನರಂಜನೆಗಾಗಿಯೇ  ತಯಾರಿ ಮಾಡುವುದು ಆಗಿದ್ದರೆ , ಕನ್ನಡದ  ಸಂಗೊಳ್ಳಿ ರಾಯಣ್ಣ ,ಕೃಷ್ಣದೇವರಾಯ ,ಹಿಂದಿಯ ಮಂಗಲ ಪಾಂಡೆ ,ಶಹೀದ ಭಗತ ಸಿಂಗ್ ಸಿನೆಮಾಗಳು ಏಕೆ ತಿರುಚುವ ಕೆಲಸ ಮಾಡಿಲ್ಲ.ಆ ಸಿನೆಮಾದ ನಿರ್ದೇಶಕರಿಗೆ ಬರದ ಬುದ್ದಿ ನಿಮಗೆ ಏಕೆ ಬಂತು ಎಂದು ಕೆಳಬಹುದೇ….?ಇಷ್ಟಕ್ಕೂ ಎಲ್ಲ ಇತಿಹಾಸದ ಕಥೆಗಳನ್ನು ತಿರುಚುವ ಚತುರರು ತಾವೇ ಆಗಿದ್ದರೆ ರಾಣಿ ಚೆನ್ನಮ್ಮ , ಒನಕೆ ಓಬವ್ವ ,ಝಾನ್ಸಿ ರಾಣಿ ಲಕ್ಷ್ಮಿ ಭಾಯಿಯಂತಹ ವೀರ ವನಿತೆಯರ ಇತಿಹಾಸಕ್ಕೆ ಬ್ರಿಟಿಷರ ಜೊತೆ ಸಂಬಂದ ಕಲ್ಪಿಸಲು ಕೂಡಾ ಹಿಂಜರಿಯುವುದಿಲ್ಲಾ.ನೀವು ಹೀಗೆ ಎಲ್ಲ ವೀರರ ಇತಿಹಾಸವನ್ನು ಇದೇ ರೀತಿ ತಿರುಚುತ್ತಾ ಹೋದರೆ ಶಾಲೆಗಳಿಗೆ ಇತಿಹಾಸವನ್ನು ಬೋಧಿಸಿಯು ಪ್ರಯೋಜನ ಆಗುವುದಾದರು ಏನು ಹೇಳಿ ನಿರ್ದೇಶಕರೇ…..?ಹಣಕ್ಕಾಗಿ ಇತಿಹಾಸ ತಿರುಚುವ ನಿಮ್ಮ ಸಿನೆಮಾ ನೋಡಿ ಶಾಲೆಯ ಮಕ್ಕಳು ಸಿನೆಮಾದ ಕಥೆ  ನೈಜ್ಯವೇ ಆಥವಾ ಪುಸ್ತಕದ ಕಥೆ  ನೈಜ್ಯಗೆ  ಪ್ರಶ್ನೆ ಕೇಳಿದರೆ ಎನು ಉತ್ತರ ಹೇಳಬೇಕು ನಿರ್ದೇಶಕರೇ…..?ಒಂದೂ ವೇಳೆ ನಿಮ್ಮ ಕಥೆಯೇ ನೈಜ್ಯವೆಂದು ಮಕ್ಕಳಿಗೆ ಹೇಳಿದರೆ ಪುಸ್ತಕವೇ ಸುಳ್ಳಿನ ಕಂತೆ ಎಂದು ಮಗುವಿನ  ಮನಸ್ಸಿಗೆ ಅಚ್ಚು ಹಾಕಿದಂತೆ ಆಗುತ್ತದೆ. ಇಲ್ಲಾ ಸಿನೆಮಾದ ಕಥೆಯೇ ಸುಳ್ಳು ಎಂದು ಹೇಳಿದರೆ ಸುಭಾಷಚಂದ್ರ ಬೋಸ್ ,ಆಜಾದ ,ಭಗತರ ಕುರಿತಾಗಿ ಈಗಾಗಲೇ ಬಂದಿರುವ ಸಿನೆಮಾವನ್ನು ಮಗು ಸುಳ್ಳು ಎಂದು ಮನಸ್ಸಿನಲ್ಲಿಯೇ ಉತ್ತರವನ್ನು ಹುಡುಕಿ ಕೊಳ್ಳುತ್ತದೆ ಎಂದು ನಿಮ್ಮಂತ  ಬುದ್ದಿವಂತರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ.

RELATED ARTICLES  ಮುಳುಗು ಸೂರ್ಯನೆ..ನಾಳೆ ಮೂಡಿ ನೋಡು..!

ಸಂಪ್ರದಾಯ ,ಸಂಸ್ಕ್ರತಿಯ ಪರಿಚಯದ ಮೂಲಕ ಮುಂದಿನ ಪೀಳಿಗೆಗೆ ವರ್ಗಾಹಿಸುವುದು ಕೂಡಾ    ಇತಿಹಾಸವನ್ನು ಮಕ್ಕಳಿಗೆ ಬೋಧಿಸುವ ಉದ್ದೇಶಗಳ ಪೈಕಿಯಲ್ಲಿ ಒಂದೂ . ಆದರೆ ನಿಮ್ಮಂತಹ ಬುದ್ದಿವಂತರೇ ಹಣಕ್ಕಾಗಿ ಸಂಪ್ರದಾಯಕ್ಕೆ ,ಸಂಸ್ಕ್ರತಿಗೆ ವಿರುದ್ಧವಾದ ಇತಿಹಾಸ ನಿರ್ಮಿಸಿದರೆ ಮುಂದಿನ ಪೀಳಿಗೆಗೆ ಒಳ್ಳೆಯದು ಎಂಬುದನ್ನು  ತೋರಿಸುವುದಾದರೂ ಹೇಗೆ…?ಇತಿಹಾಸವನ್ನು ಬಲ್ಲವನಿಂದ ಮಾತ್ರವೇ ಇತಿಹಾಸವನ್ನು  ಸ್ರಷ್ಠಿಸಲು ಸಾದ್ಯವೇಂಬ ಮಾತಿದೆ.ಒಳ್ಳೆಯ ಇತಿಹಾಸವನ್ನು ತಿಳಿದವನು ಒಳ್ಳೆಯ ವ್ಯಕ್ತಿಯಾಗಿ ಹೊಸ ಇತಿಹಾಸವನ್ನು ಸ್ರಷ್ಠಿ ಮಾಡಬಹುದು.ಆದರೆ ನೀವೂ ತಯಾರೀಸಿರುವ ಅನಾರಿಕತೆಯ ,ಅಶ್ಲೀಲ ಇತಿಹಾಸವನ್ನು ತಿಳಿದವನು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ನಾಗರಿಕ ಪ್ರಜ್ಞೆ ನಿಮಗೆ ಬೇಡವೇ….    ..? ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿ ,ನಮ್ಮ ಮುಂದಿನ ಜನಾಂಗ ಎತ್ತ ಸಾಗಬಹುದು ಎಂದು ವಿಚಾರವನನ್ನಾ ಮಾಡಿದಿರೇನೂ……….?.

ಒಮ್ಮೆ ವಿದೇಶಿಗರು ವಿವೇಕಾನಂದರ ಬಳಿ ನಿಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಕಾಣುವಿರಂತೆ ನಿಜವೇ ಎಂದು ಕೇಳಿದಾಗ, ವೀವೆಕರು ಈಡಿಯ ಪ್ರಪಂಚದ ಇತಿಹಾಸದಲ್ಲಿ ಒಬ್ಬೇ ಒಬ್ಬಳು ಝಾನ್ಸಿ ರಾಣಿ ಲಕ್ಷ್ಮಿಬಾಯಿಯನ್ನು ತೋರಿಸಿಕೊಡಿ ನಾನು ನಿಮ್ಮ ಮಾತು ಒಪ್ಪಿಕೂಳ್ಳುವೇ ಎಂದಿದ್ದರು.ವಿವೇಕರನ್ನು ಮಾತಿನಲ್ಲಿ ಸೋಲಿಸಲು ,ಭಾರತವನ್ನು ಕೆಳಮಟ್ಟದಲ್ಲಿ ಬಿಂಬಿಸಲು  ವಿದೇಶಿಗರು ಪ್ರಯತ್ನ ಪಟ್ಟರೂ ,ಅವರಿಂದ ರಾಣಿ ಲಕ್ಷ್ಮಿಬಾಯಿ ತರದ ವೀರ ವನಿತೆಯಂತವರು ಸಿಗದೇ ಸೋಲನ್ನು ಒಪ್ಪಿಕೊಂಡರು.ಝಾನ್ಸಿ ರಾಣಿ, ಅಬ್ಬಕ್ಕ ,ಕಿತ್ತೂರು ರಾಣಿ,ದುರ್ಗಾವತಿ  ,ಒನಕೆ ಓಬವ್ವರಂತಹ ಧೀರತೆಯ , ಕ್ಷಾತ ಪರಂಪರೆಯ ಸಾಲಿನಲ್ಲಿ ಈ ರಜಪೂತರ ಪದ್ಮಾವತಿ ಕೂಡಾ ಸೇರುತ್ತಾಳೆ. ಅಷ್ಟಕ್ಕೂ ಇವಳು ಬೇರೆ ಪದ್ಮಾವತಿ ಎಂದು ಸಂಬೋದಿಸಿ ನುಣುಚಿ ಕೊಳ್ಳುವ ಪ್ರಯತ್ನ ಮಾಡಬೇಡಿ ಯಾಕಂದರೆ ಈವರೆಗೂ  ಓದುಗರಿಗೆ ಸಿಕ್ಕಿರುವುದು ಇತಿಹಾಸಕ್ಕೆ  ಒಬ್ಬಳೇ ಪದ್ಮಾವತಿ.ಅದು ಕೂಡಾ ಸಾಹಸೆ,ಚತುರತೆ ,ಧೈರ್ಯ ,ಪವಿತ್ರತೆಗೆ  ಹೆಸರಾದ ಪದ್ಮಾವತಿ. ಇಂತವಳ ಪಾವಿತ್ರ್ಯವನ್ನು ಹಾಳು ಮಾಡುವ ಪ್ರಯತ್ನ ಒಳ್ಳೆಯದಲ್ಲಾ.ಇತಿಹಾಸದಭಾರತ ದೇಶವನ್ನು ಹೆಣ್ಣಿಗೆ ಹೋಲಿಸಿ ,ದೇಶವನ್ನೇ  ಭಾರತಮಾತೆ ಎಂದು  ಪೂಜಿಸಿ , ನಮಿಸುವ  ಶ್ರೇಷ್ಟ ರಾಷ್ಟ್ರ ನಮ್ಮದು. ಇಂತಹ ನಾಡಿನಲ್ಲಿ ಹೆಣ್ಣಿಗೆ ಅಗೌರವ ಆಗದಿರಲಿ ಎನ್ನುವುದು ಆಶಯ.ಹೆಣ್ಣಿಗೆ ಆದ ಅವಮಾನದಿಂದ   ರಾಮಾಯಣ ,ಮಹಾಭಾರತ ನಡೆದ ಇತಿಹಾಸ ನಮ್ಮ ಕಣ್ಣ ಮುಂದೆ ಇದೇ. ಇದರಿಂದ ಆದರೂ ನಾವುಗಳೂ ನಮ್ಮ ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡೋಣ.