@ ಸುನೀತಾ ಹೆಗಡೆ, ಮೂಡ್ಕಣಿ

ಗಣೇಶನ ಹಬ್ಬದಲ್ಲಿ ಗಣೇಶ ಮೂರ್ತಿಯನ್ನು ಅಲಂಕರಿಸುವುದಷ್ಟೇ ಅಲ್ಲ, ದೇವರ ಮುಂದಿಡುವ ನೈವೇದ್ಯವನ್ನು ಅಲಂಕರಿಸುವ ಮೂಲಕ ಹಬ್ಬದ ಮೆರಗನ್ನು ಇನ್ನಷ್ಟು ಹೆಚ್ಚಿಸಬಹುದು. ಈ ಬಗ್ಗೆ ಕೆಲವು ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

1) ಸುಂದರವಾಗಿರಲಿ: ನೈವೇದ್ಯವನ್ನು ಇಡುವ ಜಾಗವನ್ನು ಮೊದಲು ಸ್ವಚ್ಛಗೊಳಿಸಿ. ಅಲ್ಲಿ ಸೊಳ್ಳೆ, ನೊಣಗಳು ಬರದಂತೆ ಜಾಗೃತಿ ವಹಿಸಿ. ಇಡುವ ಮಣೆಯ ಮೇಲೆ ಒಂದು ತೆಳುವಾಗಿರುವ ಬಿಳಿ ಪಂಚೆ ಬಟ್ಟೆಯನ್ನು ಮಣೆಯಾಕಾರಕ್ಕೆ ಹಾಕಿ. ನೈವೇದ್ಯದ ತಟ್ಟೆಗಳನ್ನು ಅದರ ಮೇಲೆ ಇಡಿ.

2) ಹಣ್ಣುಗಳು ಅಲಂಕಾರ: ಗಣೇಶನ ಮುಂದಿರುವ ಹಣ್ಣುಗಳನ್ನು ಆದಷ್ಟು ಡಿಸೈನರ್ ತಟ್ಟೆಗಳಲ್ಲಿ ಇಡಿ. ಹಣ್ಣುಗಳು ಆಕರ್ಷಕವಾಗಿ ಕಾಣುವಂತೆ ಒಂದರ ಮೇಲೆ ಒಂದರಂತೆ ಜೋಡಿಸಿ ಅವುಗಳ ಮಧ್ಯೆ ವಿವಿಧ ಬಣ್ಣದ ಹೂ ಮತ್ತು ಎಲೆಗಳನ್ನು ಇಡುವುದರಿಂದ ಅಲಂಕಾರ ಹೆಚ್ಚಿಸಬಹುದು.

RELATED ARTICLES  ಹೊನ್ನಾವರ ಜಾತ್ರಗೆ ಹೋದವನು, ನಾಪತ್ತೆ. ಹುಡುಕಿದಾಗ ಸಿಕ್ಕಿದ್ದು ಶಾಕಿಂಗ್ ನ್ಯೂಸ್.

3) ಕರಿದ ತಿಂಡಿಗಳು: ಇವುಗಳನ್ನು ಜೋಡಿಸುವಾಗ ಆದಷ್ಟು ಸ್ಟೀಲ್ ತಟ್ಟೆಗಳಲ್ಲಿಡಿ. ಮೊದಲು ತಟ್ಟೆಯ ಆಕಾರಕ್ಕೆ ಒಂದು ಟಿಶ್ಯೂ ಪೇಪರ್ ಅನ್ನು ಕತ್ತರಿಸಿ ಹಾಕಿ. ನಂತರ ಕರಿದ ಪದಾರ್ಥಗಳನ್ನು ಜೋಡಿಸಿ. ಕರಿದ ಪದಾರ್ಥಗಳಲ್ಲಿರುವ ಎಣ್ಣೆ ಆಗ ತಟ್ಟೆಗೆ ಅಂಟುವುದಿಲ್ಲ. ಆದಷ್ಟು ಬಿಡಿಬಿಡಿಯಾಗಿ ಕಾಣುವಂತೆ ಜೋಡಿಸಿಡಿ. ವಿವಿಧ ಬಗೆಯ ಲಡ್ಡು, ಮೋದಕಗಳನ್ನು ಒಂದರ ಮೇಲೆ ಒಂದು ಗೋಪುರದಂತೆ ಜೋಡಿಸಿ. ನೀವಿಟ್ಟಿರುವ ಕರಿದ ಪದಾರ್ಥಗಳ ಅಂದ ಹೆಚ್ಚಿಸುತ್ತದೆ.

RELATED ARTICLES  ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ - ಮೇಲ್ಮನವಿ ಅಂಗೀಕಾರ - ಶ್ರೀಮಠದ ಆಡಳಿತ ಶುದ್ಧ ಎಂದು ಮತ್ತೊಮ್ಮೆ ದೃಢ.

4) ಬೇಯಿಸಿದ ಪದಾರ್ಥಗಳು: ತಿಂಡಿಗಳನ್ನು ಜೋಡಿಸುವಾಗ ಮೊದಲು ನೀವು ಇಡಲಿರುವ ತಟ್ಟೆಯಾಕಾರಕ್ಕೆ ಬಾಳೆ ಎಲೆಯನ್ನು ಕತ್ತರಿಸಿ ಅದರ ಮೇಲೆ ನೀವು ತಯಾರಿಸಿರುವ ಪದಾರ್ಥಗಳನ್ನು ಬಿಡಿಬಿಡಿಯಾಗಿ ಜೋಡಿಸಿ. ಆದಷ್ಟು ಪದಾರ್ಥಗಳ ಮಧ್ಯ ಸ್ವಲ್ಪ ಅಂತರವಿದ್ದರೆ ಚೆನ್ನ.

5) ಅರಿಶಿಣ ಕುಂಕುಮದ ತಟ್ಟೆ: ಈ ತಟ್ಟೆಯು ಸ್ವಲ್ಪ ದೊಡ್ಡದಾಗಿರಲಿ. ತಟ್ಟೆಯಲ್ಲಿ ಅರಿಶಿಣ ಕುಂಕುಮದೊಂದಿಗೆ ಹೂವು ಹಾಗೂ ಅಕ್ಷತೆಗಳನ್ನು ಇಡಲು ಜಾಗವಿರಲಿ. ಆ ತಟ್ಟೆ ಡಿಸೈನರ್ ತಟ್ಟೆಯಾದರೆ ಚೆನ್ನ. ಇದು ಬೆಳ್ಳಿಯದ್ದೇ ಆಗಬೇಕೆಂದೇನೂ ಇಲ್ಲ. ಯಾವುದೇ ಬಗೆಯ ತಟ್ಟೆಯಾದರೂ ಪರವಾಗಿಲ್ಲ. ಡಿಸೈನರ್ ತಟ್ಟೆಯಾದರೆ ನೋಡಲು ಅಂದವಾಗಿರುತ್ತದೆ.