ಸಾಂದರ್ಭಿಕ ಚಿತ್ರ
ಭಟ್ಕಳ: ಹಡೀನ್ ಗ್ರಾಮದ ನಾಗೇಶ್ ಲಚ್ಮಯ್ಯ ನಾಯ್ಕ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು ಕಳೆದ 4-5 ವರ್ಷಗಳಿಂದ ಅಲ್ಲಿ ತೆಂಗಿನ ಮರ, ಬಾಳೆಗಿಡ ನೆಟ್ಟು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ತಹಸಿಲ್ದಾರರ ಆದೇಶದ ಮೇರೆಗೆ ತಾಲೂಕಿನ ಹಡೀನ್ ಗ್ರಾಮದಲ್ಲಿ ಅತಿಕ್ರಮಿತ ಸರ್ಕಾರಿ ಜಮೀನು ಸ.ನಂ 95 ರನ್ನು ಕಂದಾಯ ಅಧಿಕಾರಿಗಳು ಖುಲ್ಲಾ ಪಡಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆಯ ಮಾಲಿಕ ರಸ್ತೆಯಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದ್ದು ಪೊಲೀಸರು ಮಧ್ಯಪ್ರವೇಶಿಸಿ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
ಕಂದಾಯ ಅಧಿಕಾರಿಗಳು ಜಮೀನು ಖುಲ್ಲಾಗೊಳಿಸುವಂತೆ ಹಲವುಬಾರಿ ನೋಟೀಸ್ ನೀಡಿದ್ದಾಗ್ಯೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮತ್ತಷ್ಟು ಜಾಗವನ್ನು ಅತಿಕ್ರಮಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ತಹಸಿಲ್ದಾರ ವಿ.ಎನ್.ಬಾಡ್ಕರ ಆದೇಶದಂತೆ ಕಂದಾಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಸರ್ಕಾರಿ ಜಾಗವನ್ನು ತೆರವುಗೊಳಿಸಿದು.