Home Uttara Kannada ಅಂತರಾಷ್ಟೀಯ ಸ್ಪರ್ಧೆಗೆ ಸಿದ್ಧರಾದ ಸ್ರ್ಟಾಂಗ್ ಮ್ಯಾನ್ ವೆಂಕಟೇಶ ಪ್ರಭು.

ಅಂತರಾಷ್ಟೀಯ ಸ್ಪರ್ಧೆಗೆ ಸಿದ್ಧರಾದ ಸ್ರ್ಟಾಂಗ್ ಮ್ಯಾನ್ ವೆಂಕಟೇಶ ಪ್ರಭು.

ಬಡತನವಿದ್ದರೂ ಬಹುದೊಡ್ಡ ಸಾಧನೆಯ ಗುರಿ : ಬೇಕಿದೆ ಜನರ ಸ್ಪಂದನೆ.

ಕುಮಟಾ : ಸಾಧನೆಯ ಛಲವೊಂದಿದ್ದರೆ ಅದೆಷ್ಟೇ ಬಡತನವಿದ್ದರೂ, ಅದೆಷ್ಟೇ  ಸಂಕಷ್ಟಗಳು ಎದುರಾದರೂ ಯಾವುದೇ ಅಂಜಿಕೆ ಇಲ್ಲದೇ ಸಾಧಕನು ಗುರಿ‌ಯತ್ತ ಮಾತ್ರವೇ ತನ್ನ ಲಕ್ಷ್ಯ ಇರಿಸುತ್ತಾನೆ ಎಂಬುದಕ್ಕೆ ನಿದರ್ಶನ ಕುಮಟಾದ ಸ್ರ್ಟಾಂಗ್ ಮ್ಯಾನ್ ವೆಂಕಟೇಶ ನಾರಾಯಣ ಪ್ರಭು.

ಸಾಲ ಮಾಡಿ ಪವರ್ ಲಿಫ್ಟಿಂಗ್ ಸಲಕರಣೆಗಳನ್ನು ಖರೀದಿಸಿ, ಕಠಿಣ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದ ಸಾಧಕರಾಗಿ ಗುರಿತಿಸಿಕೊಂಡ ಇವರ ಛಲಕ್ಕೆ ಸಮಸ್ಯೆಗಳೂ ನೀರಾಗಿ ಹಾರಿದುಹೋಗಿದೆ. ಭಾರತದ ಪ್ರತಿನಿಧಿಯಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಇವರ ಕನಸಿಗೆ ನೆರವಿನ ಅಗತ್ಯತೆಯೂ ಇದೆ. 

ದೇಶದ ಪ್ರತಿನಿಧಿಯಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡರೂ ಸರಕಾರದಿಂದ ಈ ವರೆಗೆ ಆಶ್ವಾಸನೆಗಳನ್ನು ಬಿಟ್ಟರೆ ಯಾವುದೇ ರೀತಿಯ ಆರ್ಥಿಕ ನೆರವು ಬಂದಿಲ್ಲ. ಹೀಗಾಗಿ ಸ್ಪರ್ಧೆಗೆ ಭಾಗವಹಿಸಲು ತೆರಳುವ ವಾಹನ ಖರ್ಚು ಹಾಗೂ ವಿಮಾನದ ಖರ್ಚು ವೆಚ್ಚ, ಅಲ್ಲಿ ವಸತಿ ಹಾಗೂ ಇತ್ಯಾದಿ ಖರ್ಚು ಭರಿಸುವುದು ಇವರಿಗೆ ಹೊರೆಯಾಗುತ್ತಿದೆ.

40 ವರ್ಷ ವಯೋಮಾನದ ವೆಂಕಟೇಶ ಪ್ರಭು, ಸ್ಥಳೀಯ ಪುರಸಭೆಯಿಂದ ನಡೆಯುವ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿ. ಕಾಲೇಜಿಗೆ ಹೋಗುವಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದವರು. ಕಿತ್ತು ತಿನ್ನುವ ಬಡತನದಿಂದಾಗಿ ಓದು ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕೆ ಕಿರಾಣಿ ಅಂಗಡಿ ಇಟ್ಟುಕೊಂಡವರು. 

ಅಪಘಾತವೊಂದರಲ್ಲಿ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಅವರ ಕನಸೆಲ್ಲವೂ ನುಚ್ಚು ನೂರಾಯಿತು ಎಂದು ಕೊಂಡು ಸುಮ್ಮನೆ ಕುಳಿತುಕೊಳ್ಳದ ಅವರು ಸುಮಾರು 13 ವರ್ಷಗಳ ನಂತರ ಮತ್ತೆ ಪವರ್ ಲಿಫ್ಟಿಂಗ್‌ನತ್ತ ಮತ್ತೆ ಒಲವು ತೋರಿದರು. ನಿರಂತರ ಪರಿಶ್ರಮದ ಮೂಲಕ ಹಂತ ಹಂತವಾಗಿ ಸಾಧಕರಾಗಿ ಬೆಳೆದ ಪರಿ ಅನೂಹ್ಯವಾದುದು.

ಜಿಲ್ಲಾಮಟ್ಟದ ಸ್ಪರ್ಧೆ, ನಂತರ ರಾಜ್ಯಮಟ್ಟದ ಆರು ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಪದಕಗಳನ್ನು ಪಡೆದು  ‘ಸ್ಟ್ರಾಂಗ್ ಮ್ಯಾನ್’ ಬಿರುದು ಪಡೆದುಕೊಂಡರು. ನಂತರದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು.

2016 ರ ಕರ್ನಾಟಕ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2017 ರ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, 2021 ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ, 2021 ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಬ್ಯಾಂಚ್ ಪ್ರೆಸ್ ಸ್ಪರ್ಧೆಯಲ್ಲಿ ದ್ವಿತೀಯ, ಅದೇ ವರ್ಷ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 

2022 ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, 2022 ಹೈದರಾಬಾದನಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

ಹಾಗೂ ಸ್ಟ್ರಾಂಗ್ ಮ್ಯಾನ್ ಚಾಂಪಿಯನ್ ಶಿಪ್ ಬಿರುದು ಪಡೆದರು.

2022 ತೆಲಂಗಾಣಾದ ಕೊಯ್ಯುಮುತ್ತುರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಏಷ್ಯನ್ಪ ಪವರ್ ಲಿಫ್ಟಿಂಗ್ ನಲ್ಲಿ ಬಹುಮಾನ ಹಾಗೂ ಸ್ಟ್ರಾಂಗ್ ಮ್ಯಾನ್ ಬಿರುದು. ನವೆಂಬರ್ 28 ರಿಂದ ಡಿಸೆಂಬರ್ 4 ರ ತನಕ ನ್ಯೂಜಿಲೆಂಡ್ ಓಕಲೆಂಡನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ ಭಾಗವಹಿಸಿ ಬಂಗಾರದ ಪದಕ, ಹಾಗೂ ಸ್ಟ್ರಾಂಗ್ ಮ್ಯಾನ್ ಬಿರುದು ಪಡೆದವರು. 

2023 ಮಾರ್ಚನಲ್ಲಿ ನಡೆದ ರಾಜ್ಯಮಟ್ಟದ ಪವರ್ ಅಪ್ಟಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಹಾಗೂ ಬಿರುದು, 2023 ರ ಜುಲೈನಲ್ಲಿ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಪವರ್‌ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಹಾಗೂ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಬಿರುದು ಪಡೆದು ಜಿಲ್ಲೆಯ ಹಾಗೂ ಕುಮಟಾದ ತಾಲೂಕಿನ ಕೀತಿಯನ್ನು ಹೆಚ್ಚಿಸುವ ಜೊತೆಗೆ ಸಂಕಷ್ಟಗಳ ನಡುವೆ ಹೆಮ್ಮೆಯ ನಗು ಅರಳಿಸಿದವರು.

ಇದೀಗ ಇವರು 2023 ಅಕ್ಟೋಬರ್ 8 ರಿಂದ 15 ರ ತನಕ ಮಂಗೋಲಿಯಾದಲ್ಲಿ ನಡೆಯಲಿರುವ ವರ್ಲ್ಡ

ಪವರ್‌ಅಪ್ಟಿಂಗ್ ಚಾಂಪಿಯನ್ ಶಿಪ್‌ಗೆ ಭಾರತದಿಂದ ಪ್ರತಿನಿಧಿಯಾಗಿ ಭಾಗವಹಿಸಲಿದ್ದು, ಸುಮಾರು 3 ಲಕ್ಷ ರೂಪಾಯಿ ಖರ್ಚಾಗಲಿದೆ‌. 

ಬಡತನದಿಂದ ಮೇಲೆದ್ದು ಬಂದ ಪ್ರತಿಭೆಯ ಉನ್ನತಿಗೆ ಆರ್ಥಿಕ ನೆರವಿನ ನಿರೀಕ್ಷೆಯಿದ್ದು, ಶಕ್ತರು ನೆರವಾಗಿ ಅವರನ್ನು ನಮ್ಮ ಪ್ರತಿನಿಧಿಯಾಗಿಸೋಣ ಎಂಬುದು ನಮ್ಮ ಕಳಕಳಿ.

ಮಂಗೋಲಿಯಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಸುಮಾರು 3 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಯುವಜನ ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ. ಆದರೆ ಈ ವರೆಗೆ ಯಾವುದೇ ಸ್ಪಂದನೆ ಬಂದಿಲ್ಲ. ನನ್ನಿಂದ ಅಷ್ಟೂ ಮೊತ್ತವನ್ನೂ ಭರಿಸಲು ಆಗದ ಕಾರಣ ಜನರ ಸ್ಪಂದನೆ ಬಯಸಿದ್ದೇನೆ. Contact – 9482786333 – ವೆಂಕಟೇಶ ಪ್ರಭು, ಕ್ರೀಡಾಪಟು.