ಕುಮಟಾ: ತಾಲೂಕಿನ ನಾಡುಮಾಸ್ಕೇರಿಯಲ್ಲಿ ತಾಲೂಕಾ ಮಟ್ಟದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಇವರು ಸರಕಾರಿ ತಾಲೂಕು ಮಟ್ಟದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸರಕಾರದ ಈ ಯೋಜನೆ ಎಲ್ಲಾ ವಿಧ್ಯಾರ್ಥಿಗಳಿಗೆ ಅನುಕೂಲವಾಗಿ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರತ್ನಾಕರ ನಾಯ್ಕ ಹಾಜರಿದ್ದು ಎಲ್ಲರಿಗೂ ಶುಭ ಹಾರೈಸಿದರು.
ತಾಲೂಕು ಪಂಚಾಯತ ಸದಸ್ಯರಾದ ಶ್ರೀ ರಾಜೇಶ ನಾಯಕ ಹಾಗೂ ಶ್ರೀ ಮಹೇಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಟಾ ಶ್ರೀ ಶ್ರೀನಿವಾಸ ನಾಯಕ ಶ್ರೀ ಅರುಣ ನಾಯಕ್ ಪ್ರಶಾಂತ ನಾಯಕ್ ಶ್ರೀ ನಾರಾಯಣ ನಾಯಕ ಮತ್ತು ಶಾಲಾ ಮುಖ್ಯಾಧ್ಯಾಪಕರಾದ ಶ್ರೀಮತಿ ಪದ್ಮ ನಾಯಕ ಉಪಸ್ಥಿತರಿದ್ದರು.