ಸಾಲು ಹಣತೆ ಬೆಳಗಲು
ಕತ್ತಲೆಯು ಬೆದರಿತು
ಬೆಳಕು ಚೆಲ್ಲಿತು
ಪ್ರೀತಿ ಅರಳಿತು.
ಹೊಸ್ತಿಲಲ್ಲಿ ದೀಪ
ಹಚ್ಚಲು
ಚುಕ್ಕಿ ರಂಗವಲ್ಲಿಯ
ಮೆರಗು ಹೆಚ್ಚಿತು
ಮುನಿಸುಕೊಂಡ ಕತ್ತಲೆಯಲಿ
ಬೆಳಕು ಪಸರಿಸಿತು
ಒಲವಿನ ಹಣತೆ
ಎದೆಯಲ್ಲಿ ಮಿನುಗಿತು.
ಪುಟ್ಟ ಕಂದನ ಕೇಕೆ
ಮನೆಯತುಂಬಲು
ಮನದ ನೋವು ಮಾಯವಾಗಿ
ಪ್ರೀತಿಯ ದೀಪ ಬೆಳಗಿತು….
✍ರೇಷ್ಮಾ ಉಮೇಶ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ