Home Health ಕರಿಬೇವಿನ ಎಲೆಗಳಿಂದ ಆರೋಗ್ಯಕರ ಉಪಯೋಗಗಳು..!!

ಕರಿಬೇವಿನ ಎಲೆಗಳಿಂದ ಆರೋಗ್ಯಕರ ಉಪಯೋಗಗಳು..!!

ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಬಹುದು. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ. ಔಷಧಿ ಸಸ್ಯದಲ್ಲಿ ಒಂದಾದ ಕರಿಬೇವು ಇದೊಂದು ಚಿರಪರಿಚಿತ ಸಸ್ಯ. ಇದರ ಉಪಯೋಗ ಬಹಳ.

ಸಾಮಾನ್ಯವಾಗಿ ಭಾರತೀಯರು ಅಡುಗೆಯಲ್ಲಿ ಕರಿಬೇವಿನ ಸೊಪ್ಪುನ್ನು ಬಳಸುತ್ತಾರೆ. ಕರಿಬೇವಿನ ಸೊಪ್ಪು ಯಾವುದೇ ಅಡುಗೆಗೆ ವಿಭಿನ್ನ ರುಚಿಯನ್ನು ನೀಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಮ್, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ಹಾಗೂ ವಿಟಮಿನ್ ಈ ಇರುತ್ತದೆ.

ಉಪಯೋಗಗಳು:

1.ದೇಹದ ತೂಕ ಕುಗ್ಗಿಸಲು: 10 ರಿಂದ 15 ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು; ಮೂರು ತಿಂಗಳು ಸೇವಿಸುವುದರಿಂದ ದೇಹದ ಕೊಬ್ಬು ಕರಗಿ, ತೂಕ ಕಡಿಮೆಯಾಗುತ್ತದೆ.

2.ರಕ್ತಹೀನತೆ: ಅರ್ಧ ಚಮಚ ಕರಿಬೇವಿನ ಸೊಪ್ಪಿನ ಪುಡಿಯನ್ನು ಸಮಪ್ರಮಾಣ ಜೇನಿನ ಜೊತೆ ಸೇವಿಸಬೇಕು. ಕರಿಬೇವಿನಲ್ಲಿರುವ ಕಬ್ಬಿಣಾಂಶ ರಕ್ತಹೀನತೆ ನಿವಾರಿಸುತ್ತದೆ.

3.ಹುಳಿತೇಗು: ಅರ್ಧ ಚಮಚ ಕರಿಬೇವಿನ ಸೊಪ್ಪನ್ನು ಒಂದು ಲೋಟ ಮಜ್ಜಿಗೆಯ ಜೊತೆ ಊಟಕ್ಕೆ ಅರ್ಧ ಗಂಟೆ ಮುಂಚೆ ದಿನದಲ್ಲಿ 3 ಬಾರಿ, 7 ದಿನ ಸೇವಿಸಬೇಕು.

4.ಕೇಶಚ್ಯುತಿ: ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೀರಿನ ಜೊತೆ ಅರೆದುಕೊಳ್ಳಬೇಕು. 250 ಗ್ರಾಂ. ಕೊಬ್ಬರಿ / ಎಳ್ಳೆಣ್ಣೆ ಕಾಯಿಸಿ, ಅರೆದ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ನೀರಿನ ಅಂಶ ಹೋಗುವವರೆಗೆ ಕಾಯಿಸಿ, ತಣ್ಣಗಾದ ನಂತರ ಶೋಧಿಸಿ ಶೇಖರಿಸಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಹೊಟ್ಟು ನಿವಾರಣೆಯಾಗಿ, ಕೇಶ ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.

ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.